ದಳ್ಳಾಳಿಗಳ ಅಬ್ಬರ- ಪೊಲೀಸರ ರಕ್ಷಣೆಯಲ್ಲಿ ರೈತರ ವ್ಯಾಪಾರ

218

Get real time updates directly on you device, subscribe now.

ಕುಣಿಗಲ್‌: ತರಕಾರಿ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ದಲ್ಲಾಳಿಗಳ ಅಬ್ಬರಕ್ಕೆ ಬೆದರಿದ ರೈತರು ಪೊಲೀಸರ ಮೊರೆ ಹೋಗಿ ವ್ಯಾಪಾರ ಮಾಡಿದ ಘಟನೆ ನಡೆದಿದೆ.
ತಾಲೂಕಿನ ಗ್ರಾಮಾಂತರ ಪ್ರದೇಶದಿಂದ ರೈತರು ತಾವು ಬೆಳೆದ ತರಕಾರಿಗಳನ್ನು ಪಟ್ಟಣದ ಪುರಸಭೆ ಸಂತೆ ಮೈದಾನದಲ್ಲಿ ದಿನಾಲೂ ಮಾರಾಟ ಮಾಡುವ ವ್ಯವಸ್ಥೆ ಇತ್ತು, ಸಂತೆ ಮೈದಾನದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು, ಕಳೆದೊಂದು ವರ್ಷದಿಂದ ಕೊವಿಡ್‌ ನೆಪ ಒಡ್ಡಿ ದಿನವಹಿ ಸಂತೆಯನ್ನು ಆರ್‌ಎಂಸಿ ಯಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಆದರೆ ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ ಎಂಬುದು ರೈತರ ಆರೋಪ, ಕಳೆದ ಕೆಲವಾರು ದಿನಗಳಿಂದಲೂ ತರಕಾರಿ ಬೆಲೆ ಏರು ಮುಖವಾಗಿರುವುದರಿಂದ ರೈತರಿಂದ ಖರೀದಿ ಮಾಡಿ ಬೆಂಗಳೂರು ಸೇರಿದಂತೆ ಪಟ್ಟಣದಲ್ಲಿ ಮಾರಾಟ ಮಾಡುವ ದಲ್ಲಾಳಿಗಳ ಅಬ್ಬರ ಹೆಚ್ಚಾಗಿದೆ.
ಕಳೆದ ಮೂರು ದಿನಗಳಿಂದ ಟೊಮೆಟೋ ಮಾರುಕಟ್ಟಗೆ ಕಡಿಮೆಯಾದ ಪರಿಣಾಮ 15 ಕೆಜಿ ಮೂಟೆಗೆ ಸಗಟು ದರವೆ 1300 ರಿಂದ 1800 ರೂ. ಇದೆ. ರೈತರು ಬೆಳೆದ ಟೊಮೆಟೋ ಚೀಲಗಳು ಮಾರುಕಟ್ಟೆ ಪ್ರವೇಶದ ಮುನ್ನವೆ ಕೆಲ ದಲ್ಲಾಳಿಗಳು ಅಡ್ಡಗಟ್ಟಿ ಕಿತ್ತುಕೊಳ್ಳುವ ಸ್ಥಿತಿ ನಿಮಾಣವಾಗಿದೆ. ಬುಧವಾರ ಬೆಳಗ್ಗೆ ರೈತರು ಟೊಮೊಟೋ ಸೇರಿದಂತೆ ಬದನೆ, ಬೆಂಡೆಕಾಯಿ ಬೆಳೆದಿದ್ದ ಚೀಲಗಳನ್ನು ಮಾರುಕಟ್ಟೆಗೆ ತರುವ ಮುನ್ನವೆ, ಅಡ್ಡಗಟ್ಟಿದ ಕೆಲ ದಲ್ಲಾಳಿಗಳು ದರ ನಿಗದಿ ಮಾಡದೆ ರೈತರನ್ನು ಎಳೆದಾಡಿ ತರಕಾರಿ ಚೀಲಗಳನ್ನು ಬಲವಂತವಾಗಿ ಕಿತ್ತುಕೊಳ್ಳುವ ಯತ್ನ ಮಾಡಿದರು, ಕತ್ತಲಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದ ತಿಳಿಯದಾದ ರೈತರು, ವಿಧಿ ಇಲ್ಲದೆ ಪೊಲೀಸರ ಮೊರೆ ಹೋದರು. ಸ್ಥಳಕ್ಕಾಗಮಿಸಿದ ಪೊಲೀಸರು ದಲ್ಲಾಳಿಗಳೆಂದು ಗುರುತಿಸಿಕೊಂಡ ಕೆಲವರಿಗೆ ಕ್ಲಾಸ್‌ ತೆಗೆದುಕೊಂಡು ಎಚ್ಚರಿಕೆ ನೀಡಿ, ರೈತರಿಗೆ ತೊಂದರೆ ನೀಡದಂತೆ ಬುದ್ಧಿವಾದ ಹೇಳಿ ಕೆಲ ಹೊತ್ತು ಮೊಕ್ಕಾಂ ಹೂಡಿ ರೈತರು ಬೆಳೆದ ಉತ್ಪನ್ನಗಳ ವ್ಯವಸ್ಥಿತ ಮಾರಾಟಕ್ಕೆ ಅನುಕೂಲ ಮಾಡಿದರು.

Get real time updates directly on you device, subscribe now.

Comments are closed.

error: Content is protected !!