ಕುಣಿಗಲ್: ಖಾಸಗಿ ಕಾರ್ಖಾನೆಯಲ್ಲಿನ ಕಳ್ಳತನ ಪ್ರಕರಣ ಪತ್ತೆ ಹಚ್ಚಿದ ಕಾರಣಕ್ಕೆ ಕಾರ್ಮಿಕನಿಗೆ ತೀವ್ರ ಕಿರುಕುಳ ನೀಡಿದ್ದರಿಂದ ಬೇಸತ್ತ ಕಾರ್ಮಿಕ ಕ್ರಿಮಿನಾಶಕ ಸೇವಿಸಿ, ಕಿರುಕುಳ ನೀಡಿದ ಅಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕನನ್ನು ಅಂಚೆಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದ ಕೃಷಿ ಉತ್ಪನ್ನ ರಫ್ತು ಆಧಾರಿತ ಕಾರ್ಖಾನೆಯ ಕಾರ್ಮಿಕ ಪ್ರಸನ್ನ ಎಂದು ಗುರುತಿಸಲಾಗಿದೆ. ಈತ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ, ಈತ ಸದರಿ ಕಾರ್ಖಾನೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸದಲ್ಲಿದ್ದು, ಮೂರು ವರ್ಷದ ಹಿಂದೆ ಖಾಯಂ ಆಗಿದೆ. ಕೃಷಿ ವಿಭಾಗದ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವಾಗ ಕಾರ್ಖಾನೆಯ ಕೃಷಿ ವಿಭಾಗದ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹಾಗೂ ಎಚ್‌ಆರ್ ವ್ಯವಸ್ಥಾಪಕರ ಅಕ್ರಮಗಳನ್ನು ಪತ್ತೆ ಮಾಡಿ ಕಾರ್ಖಾನೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಕಳೆದ ಮೂರು ತಿಂಗಳಿನಿಂದ ಈತನಿಗೆ ಕಾರ್ಖಾನೆಯಲ್ಲಿ ತೀವ್ರ ಕಿರುಕುಳ ನೀಡಿ ಕೆಲಸ ನೀಡದೆ ಸುಮ್ಮನೆ ಕೂರಿಸಿದ್ದು, ಇದೀಗ ಏಕಾಏಕಿ ತಮಿಳುನಾಡಿನಲ್ಲಿನ ಶಾಖೆಯಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡಿದ್ದರಿಂದ ಬೇಸತ್ತ ನೌಕರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಮನೆಯವರು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಕಾರ್ಖಾನೆ ಅಧಿಕಾರಿಗಳ ಮೇಲೆ ದೂರು ನೀಡಿದ ಮೇರೆಗೆ ಪೊಲಿಸರು ಕಾರ್ಮಿಕನ ಹೇಳಿಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಬಂಧಿಕ ಶಿವಕುಮಾರ್, ಕಾರ್ಖಾನೆ ಆಡಳಿತ ಮಂಡಳಿ ಕೂಡಲೆ ತಪ್ಪತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು, ಕಾರ್ಮಿಕನ ಚಿಕಿತ್ಸಾವೆಚ್ಚ ಭರಿಸುವ ಜೊತೆಯಲ್ಲಿ ಇಂತಹ ಘಟನೆಗಳು ಕಾರ್ಖಾನೆಲ್ಲಿ ಮರು ಕಳಿಸದಂತೆ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.
ಕಿರುಕುಳ ಸಹಿಸದೆ ಕಾರ್ಮಿಕ ಆತ್ಮಹತ್ಯೆಗೆ ಯತ್ನ
Get real time updates directly on you device, subscribe now.
Next Post
Comments are closed.