ಶೇಖರಪ್ಪನ ದರ್ಪಕ್ಕೆ ಸದಸ್ಯ ನಾಗರಾಜ್‌ ಕಿಡಿ

ಬಿಳೇದೇವಾಲಯ ಗ್ರಾಪಂ ಅಧ್ಯಕ್ಷೆ ಪತಿ, ಸದಸ್ಯನ ನಡುವೆ ವಾಗ್ವಾದ

157

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಬಿಳೇದೇವಾಲಯ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆಯ ಪತಿ ಮತ್ತು ಸದಸ್ಯರೊರ್ವರ ನಡುವಿನ ವಾಗ್ವಾದ ಪೊಲೀಸ್‌ ಠಾಣೆ ಮೆಟ್ಟಿಲೇರುವ ಘಟನೆ ನಡೆದಿದೆ.
ಬಿಳೆದೇವಾಲಯ ಗ್ರಾಪಂನ ಬೋರಲಿಂಗನಪಾಳ್ಯದ ಮೀಸಲು ಕ್ಷೇತ್ರದ ಸದಸ್ಯ ನಾಗರಾಜ್‌, ಬುಧವಾರ 15ನೆ ಹಣಕಾಸು ಯೋಜನೆಯ ವಿವರ ಕೇಳಿದಕ್ಕೆ ಅಧ್ಯಕ್ಷೆಯ ಪತಿ ಶೇಖರಪ್ಪ ಎಂಬುವವರು ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಲ್ಲದೆ ಜಾತಿ ನಿಂದನೆ ಮಾಡಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿ ಗುರುವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಅಧ್ಯಕ್ಷರ ಸದಸ್ಯತ್ವ ವಜಾಗೊಳಿಸಿ, ಪತಿಯ ಮೇಲೆ ಕ್ರಮಕ್ಕೆ ಆಗ್ರಹಿಸಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.
ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ ಗ್ರಾಪಂ ಅಧ್ಯಕ್ಷೆ ಚಂದ್ರಪ್ರಭ ಪತಿ ಶೇಖರಪ್ಪ, ಸದಸ್ಯನ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿ, ಬುಧವಾರ ಮಧ್ಯಾಹ್ನ ತಮ್ಮ ಪತ್ನಿಯನ್ನು ಮೆನೆಗೆ ಕರೆದೊಯ್ಯಲು ಗ್ರಾಪಂ ಕಚೇರಿ ಸಮೀಪ ಹೋದಾಗ ಪಿಡಿಒ, ಉಪಾಧ್ಯಕ್ಷರು ಒಳಗೆ ಬರುವಂತೆ ಕರೆದರು. ಒಳಗೆ ಹೋದಾಗ ಅಲ್ಲಿದ್ದ ಸದಸ್ಯ ನಾಗರಾಜ್‌, ಅಧ್ಯಕ್ಷರ ಪತಿ ಏಕೆ ಕಚೇರಿಯೊಳಗೆ ಬರಬೇಕು ಎಂದು ತಗಾದೆ ತೆಗೆದು ಅವಾಚ್ಯಪದ ಪ್ರಯೋಗಿಸಿದರು. ಇದಕ್ಕೆ ಆಕ್ಷೇಪಿಸಿದಾಗ ಮಾತಿಗೆ ಮಾತು ಬೆಳೆಯಿತು, ನಂತರ ಅಲ್ಲಿಂದ ಹೋದ ಸದಸ್ಯ ನಾಗರಾಜ್‌, ಹೊರಬಂದ ನನ್ನಮೇಲೆ ಏಕಾಏಕಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಕತ್ತುಹಿಸುಕಲು ಮುಂದಾಗಿದ್ದು, ಕೆಲ ಸದಸ್ಯರು, ಸ್ಥಳೀಯರು ಬಿಡಿಸಿಕೊಂಡರು, ಈಗ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ದೂರು ನೀಡಿ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ ಎಂದಿದ್ದಾರೆ. ಗ್ರಾಪಂ ಅಧ್ಯಕ್ಷೆಯ ಪತಿ ಹಾಗೂ ಗ್ರಾಪಂ ಸದಸ್ಯ ಇಬ್ಬರೂ ಪರಸ್ಪರ ಆರೋಪಿಸಿಕೊಂಡು ಕುಣಿಗಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!