ಕಾರ್ಮಿಕನಿಗೆ ಕಿರುಕುಳ- ಕುಟುಂಬಸ್ಥರಿಂದ ಪ್ರತಿಭಟನೆ

431

Get real time updates directly on you device, subscribe now.

ಕುಣಿಗಲ್‌: ಕಾರ್ಖಾನೆಯಲ್ಲಿನ ಅಕ್ರಮ ಬಹಿರಂಗಗೊಳಿಸಿದ ಕಾರ್ಮಿಕನಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕ ಬೇಸತ್ತು ಆತ್ಮಹತ್ಯೆ ಪ್ರಯತ್ನಿಸಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕನ ಕುಟುಂಬದವರು ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಅಂಚೆಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದ ಖಾಸಗಿ ಕೃಷಿ ಉತ್ಪನ್ನ ಅಹಾರ ತಯಾರಿಕೆ ಕಾರ್ಖಾನೆಯಲ್ಲಿನ ಕೆಲ ಅಧಿಕಾರಿಗಳ ಅಕ್ರಮಗಳನ್ನು ಕಾರ್ಮಿಕನೊಬ್ಬರ ಬಹಿರಂಗೊಳಿಸಿ, ಕಾರ್ಖಾನೆ ಮುಖ್ಯಸ್ಥರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಅಯಕಟ್ಟಿನ ಅಧಿಕಾರಿಗಳು ಕಿರುಕುಳನೀಡಿದ್ದರಿಂದ ಕಾರ್ಮಿಕ ಪ್ರಸನ್ನ ಎಂಬಾತ ಗುರುವಾರ ಮದ್ಯಾಹ್ನ ತಪ್ಪಿತಸ್ಥ ಅಧಿಕಾರಿಗಳ ಹೆಸರು ಬರೆದು ಕ್ರಿಮಿನಾಶಕ ಸೇವಿಸಿ ಅತ್ಮಹತ್ಯೆಗೆಯತ್ನಿಸಿದ್ದರು. ಅತನ ಮನೆಯವರು ಚಿಕಿತ್ಸೆಗೆ ಅಸ್ಪತ್ರೆಗೆ ದಾಖಲಿಸಿ ಕಾರ್ಖಾನೆ ಆಡಳಿತ ಮಂಡಳಿಯ ಕ್ರಮ ಖಂಡಿಸಿದ್ದರು.
ಶುಕ್ರವಾರ ಬೆಳಗ್ಗೆ ಕಾರ್ಖಾನೆಯ ಕಾರ್ಯಾರಂಭ ವೇಳೆಗೆ ಸ್ಥಳದಲ್ಲಿ ಜಮಾಯಿಸಿದ ಪ್ರಸನ್ನ ಕುಟುಂಬಸ್ಥರು, ಸಂಬಂಧಿಕರಾದ ಶಿವಕುಮಾರ, ಗೋಪಾಲ, ರಮೇಶ, ಕಲಾ, ಶಾಂತಮ್ಮ ಹಾಗೂ ಗ್ರಾಮಸ್ಥರು ಆಸ್ಪತ್ರೆಯಲ್ಲಿರುವ ಕಾರ್ಮಿಕನಿಗೆ ಚಿಕಿತ್ಸೆ ಕೊಡಿಸುವಂತೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಬೇರೆ ಕಾರ್ಮಿಕರನ್ನು ಕಾರ್ಖಾನೆಯೊಳಗೆ ಬಿಡದೆ ಪ್ರತಿಭಟಿಸಿದರು. ಈ ವೇಳೆ ಕೆಲ ಕಾರ್ಮಿಕರು ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆಸಿ ನಮಗೆ ಕಾರ್ಖಾನೆ ಕೆಲಸ ಕೊಟ್ಟಿದೆ ಪ್ರತಿಭಟನೆ ಬೇಡ ಎಂದಾಗ ಪ್ರತಿಭಟನಾ ನಿರತರು ಕಾರ್ಮಿಕರ ಪರವಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದು ನಾಳೆ ನಿಮಗೂ ಇದೆ ಗತಿ ಆದರೆ ಏನು ಮಾಡುತ್ತೀರಾ ಎಂದು ಹಿಗ್ಗಾಮುಗ್ಗ ಝಾಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಚಿಕಿತ್ಸಾ ವೆಚ್ಚ ಕಾರ್ಖಾನೆ ವತಿಯಿಂದ ಭರಿಸುವುದಾಗಿ ಹಾಗೂ ಆತನಿಗೆ ಇಲ್ಲೆ ಕೆಲಸ ಮಾಡಲು ಅವಕಾಶ ಕಲ್ಪಿಸಿ, ಆರೋಪಗಳ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.

Get real time updates directly on you device, subscribe now.

Comments are closed.

error: Content is protected !!