ಅಶ್ವಥ್ ನಾರಾಯಣ ಮಾತಿಗೆ ರಂಗನಾಥ್‌ ಖಂಡನೆ

299

Get real time updates directly on you device, subscribe now.

ಕುಣಿಗಲ್: ಮುಖ್ಯಮಂತ್ರಿಗಳ ಮುಂದೆಯೇ ಸಚಿವ ಅಶ್ವಥನಾರಾಯಣ, ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡು ಶಿಷ್ಠಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಶಾಸಕ ಡಾ.ರಂಗನಾಥ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ರಾಮನಗರದಲ್ಲಿ ಹಿಂದಿನ ಜನಪ್ರತಿನಿಧಿಗಳು, ಸಂಸದ ಡಿ.ಕೆ.ಸುರೇಶ್‌, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ಕಾಮಗಾರಿಗಳನ್ನೆ ಬಿಜೆಪಿ ಸರ್ಕಾರ ಉದ್ಘಾಟನೆ ಮಾಡಿದ್ದು, ಸಾರ್ವಜನಿಕರ ಹಣದಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳನ್ನು ಬಿಜೆಪಿ ಪಕ್ಷದ ವತಿಯಿಂದ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳಲು ಸಚಿವ ಅಶ್ವಥನಾರಾಯಣ ಯತ್ನಿಸಿದ್ದಾರೆ.
ಸಚಿವರು ಅಭಿವೃದ್ಧಿ ವಿಷಯದ ಬಗ್ಗೆ ಮಾತಾಡದೆ ಗಂಡಸ್ತನದ ಪದ ಪ್ರಯೋಗ ಮಾಡಿರುವುದು ಖಂಡನೀಯ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಮಾಡದೆ, ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸಲು ಹೊರಟಿರುವುದು ನಾಚಿಕೆಗೇಡು, ರಾಮನಗರ ರಾಜೀವ್‌ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಭಿವೃದ್ಧಿಗೆ ತಡೆ ಹಾಕಿದ ಇದೆ ಸಚಿವ ಅಶ್ವಥನಾರಾಯಣ್‌ ರಾಮನಗರದ ಬಗ್ಗೆ ಮಾತಾಡುತ್ತಿರುವುದು ಹಾಸ್ಯಾಸ್ಪದ, ರಾಮನಗರದ ಜನತೆ ಬುದ್ಧಿವಂತರಾಗಿದ್ದು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ, ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಯ ಬಿ ಟೀಂ ಎಂದು ಗುರುತಿಸಿಕೊಂಡಿರುವ ಕಾರಣ ಅವರು ಬಿಜೆಪಿಯ ಓಲೈಸಲು ಸಂಸದರ ಬಗ್ಗೆ ಅಸಂಬಂದ್ಧ ಪದ ಪ್ರಯೋಗ ಮಾಡಿದ್ದಾರೆ. ರಾಮನಗರದ ಅಭಿವೃದ್ಧಿ ನಿಟ್ಟಿನಲ್ಲಿ ಮಾಜಿ ಸಿಎಂ ಅವರ ಕೊಡುಗೆ ಎಂದು ಅವರ ಪರವಾಗಿ ಸಂಸದ ಡಿ.ಕೆ.ಸುರೇಶ್‌ ಮಾತನಾಡಿದ್ದರೂ ಮಾಜಿ ಸಿಂ ಸಂಸದರ ಬಗ್ಗೆ ಈ ರೀತಿ ಮಾತನಾಡಬಾರದಿತ್ತು ಎಂದರು.

Get real time updates directly on you device, subscribe now.

Comments are closed.

error: Content is protected !!