ಕಲ್ಲುಗಣಿಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೋಳಘಟ್ಟ ಗ್ರಾಮ ವಾಸಿಗಳ ನೆಮ್ಮದಿಗೆ ಭಂಗ- ಅಧಿಕಾರಿಗಳ ವಿರುದ್ಧ ಕಿಡಿ

259

Get real time updates directly on you device, subscribe now.

ತುರುವೇಕೆರೆ: ಅಧಿಕಾರಶಾಹಿಗಳು ಹಾಗೂ ಬಂಡವಾಳ ಶಾಹಿಗಳು ಕಲ್ಲುಗಣಿಗಾರಿಕೆ ನೆಡೆಸುವ ಮೂಲಕ ಕೋಳಘಟ್ಟ ಆಸುಪಾಸಿನ ಗ್ರಾಮಸ್ಥರ ಬದುಕಿನ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಕೋಳಘಟ್ಟ ಆಸುಪಾಸಿನ ಗ್ರಾಮಸ್ಥರು ಪ್ರತಿಭಟನೆ ನೆಡೆಸಿದರು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಲ್ಲುಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಕೋಳಘಟ್ಟ ಆಸುಪಾಸಿನ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಕಲ್ಲುಗಣಿಗಾರಿಕೆ ನಡೆಸುವವರು ಕೋಳಘಟ್ಟ ಸರ್ವೇ ನಂ. 55 ರ ಬಂಡೆ ಇರುವ ಪ್ರದೇಶದಲ್ಲಿ ಮತ್ತೆ ಸ್ಪೋಟಕ ಸಿಡಿಸಲು ಮುಂದಾಗಿದ್ದಾರೆ, ಮತ್ತೆ ಗಣಿಗಾರಿಕೆ ಆರಂಭವಾಗಲಿದೆ ಎಂಬ ಆತಂಕದಿಂದ ಸಂಘಟಿತರಾದ ಗ್ರಾಮಸ್ಥರು ಸೋಮವಾರ ಬೆಳಗ್ಗೆಯಿಂದ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಈ ಕುರಿತು ಗ್ರಾಮದ ಯುವಕ ಕಾಂತರಾಜ್‌ ಮಾತನಾಡಿ ಸ್ಪೋಟಕ ಬಳಸಿ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಪ್ರದೇಶ ಸ್ಪೋಟಕ ಸಿಡಿಸುತ್ತಿರುವ ಹಿನ್ನಲೆಯಲ್ಲಿ ಭಾರಿ ಪ್ರಮಾಣದ ಶಬ್ದ ಹಾಗೂ ಧೂಳು ಸುತ್ತಮುತ್ತಲಿನ ಪರಿಸರವನ್ನು ಆಕ್ರಮಿಸುತ್ತಿದೆ, ಗರ್ಭಿಣಿ ಮಹಿಳೆಯರು, ವಯೋವೃದ್ಧರು, ದುರ್ಬಲ ಹೃದಯದವರು, ಮಕ್ಕಳು ಸ್ಪೋಟಕದ ತೀವ್ರತೆಗೆ ತತ್ತರಗೊಂಡಿದ್ದಾರೆ. ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸುವ ನಮ್ಮ ಮೇಲೆ ಪೊಲೀಸರನ್ನು ಬಿಟ್ಟು ದಬ್ಬಾಳಿಕೆ ನಡೆಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ ಅವರು ಸುತ್ತಲಿನ ಗ್ರಾಮ ವಾಸಿಗಳ ನೆಮ್ಮದಿಗೆ ಭಂಗ ತರುತ್ತಿರುವ ಕಲ್ಲುಗಣಿಗಾರಿಕೆ ತಡೆಯಲು ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತೇವೆಂದು ತಿಳಿಸಿದರು.
ಗ್ರಾಮದ ಮಹಿಳೆ ಸುಜಾತ ಮಾತನಾಡಿ ಗಣಿಗಾರಿಕೆ ನಡೆಸುತ್ತಿರುವ ಪ್ರದೇಶಕ್ಕೆ ಹೊಂದಿಕೊಂಡಂತಿರುವ ನಮ್ಮ ಜಮೀನಿನಲ್ಲಿನ ಬೆಳೆಯ ಮೇಲೆ ಲಾರಿ ಮತ್ತಿತರ ವಾಹನ ಹರಿಸಲಾಗಿದೆ, ನಮ್ಮ ಜಮೀನಿಗೆ ಹೋಗಲು ಸ್ಪೋಟಕದ ಭಯ ಕಾಡುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡರು.
ಪ್ರತಿಭಟನೆಯಲ್ಲಿ ಎಪಿಎಂಸಿ ನಿರ್ದೇಶಕ ರೇಣುಕಯ್ಯ, ಗೌರಮ್ಮ, ಶಾರದಮ್ಮ, ರತ್ನಮ್ಮ, ಲೇಪಾಕ್ಷಮ್ಮ, ಶಿಲ್ಪಾ, ಪುಷ್ಪಾವತಿ, ಜಯರಾಮ್ಮ ಗಂಗಾಧರ್‌, ಚೇತನ್‌, ಚಿಕ್ಕಬಸವಯ್ಯ, ಮಲ್ಲಿಕಾರ್ಜುನ್‌, ಮಂಜುನಾಥ್‌, ಮುದ್ಲಾಪುರ ಲೋಕೇಶ್‌, ಮಾಜಿ ಗ್ರಾಪಂ ಸದಸ್ಯರಾದ ನಾಗರಾಜ್‌, ರಂಗಸ್ವಾಮಿ, ರಾಜೀವ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!