ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯವಾದ್ರೆ ಸುಮ್ಮನಿರಲ್ಲ

251

Get real time updates directly on you device, subscribe now.

ಕುಣಿಗಲ್‌: ರಾಗಿ ಖರೀದಿ ಕೇಂದ್ರದಲ್ಲಿ ಗ್ರೇಡರ್‌ಗಳು ರೈತರ ಶೊಷಣೆ ಮಾಡಿದಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಶಾಸಕ ಡಾ.ರಂಗನಾಥ ಎಚ್ಚರಿಕೆ ನೀಡಿದರು.
ಸೋಮವಾರ ಸಂಜೆ ಪಟ್ಟಣದ ಆರ್‌ಎಂಸಿ ಯಾರ್ಡ್‌ನಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕಳೆದ ಬಾರಿ ಗ್ರೇಡರ್‌ಗಳು ರೈತರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಇದೆ, ಗ್ರೇಡ್‌ ಪರೀಕ್ಷೆಗೆ 2 ಕೆಜಿ ರಾಗಿ ಹೆಚ್ಚುವರಿ ತರುವಂತೆ ಒತ್ತಡ ಹಾಕಿ ಹಣ ನೀಡಿದವರ ರಾಗಿ ಗುಣಮಟ್ಟ ಪರಿಶೀಲನೆ ಮಾಡದೆ ಗ್ರೇಡ್‌ ಪಾಸ್‌ ಮಾಡಿರುವ ಪ್ರಕರಣ ಇದೆ, ಈ ಬಾರಿ ಎಲ್ಲದಕ್ಕು ಕಡಿವಾಣ ಹಾಕಿ ನಿಯಮಬದ್ದವಾಗಿ ರೈತರ ಶೋಷಣೆ ಮಾಡದಂತೆ ರಾಗಿ ಖರೀದಿ ಮಾಡಿ ತಾಲೂಕಿನ ಕೆಲ ರೈತರು ದಲ್ಲಾಳಿಗಳೊಂದಿಗೆ ಶಾಮೀಲಾಗಿ ಬೇರೆ ತಾಲೂಕಿನ ರಾಗಿ ತಂದು ಇಲ್ಲಿ ಹಾಕುವುದರ ಮೂಲಕ ತಾಲೂಕಿನ ರೈತರಿಗೆ ಅನ್ಯಾಯ ಮಾಡಬಾರದು, ಕಳೆದ ಬಾರಿ ಎರಡುವರೆ ಲಕ್ಷ ಕ್ವಿಂಟಾಲ್‌ ಖರೀದಿ ಮಾಡಿದ್ದು ಈ ಬಾರಿ ಅತಿವೃಷ್ಟಿಯ ನಡುವೆಯೂ ರೈತರು ರಾಗಿ ಉಳಿಸಿಕೊಂಡು, ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆ ಇಟ್ಟಿರುವ ಕಾರಣ 5 ಲಕ್ಷ ಕ್ವಿಂಟಾಲ್‌ ಖರೀದಿಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ರಾಗಿ ಖರೀದಿ ಕೇಂದ್ರದ ಬಗ್ಗೆ ಪುರ್ಣ ಮಾಹಿತಿ ನೀಡಬೇಕು, ರಜಾ ಮಾಡದೆ, ಸಬೂಬು ಹೇಳದೆ ಕೊನೆಯ ತಾರೀಕಿನ ವರೆಗೂ ರಾಗಿ ಖರೀದಿ ಮಾಡಬೇಕು. ರೈತರಿಗೆ ಗ್ರೈನ್‌ ಓಚರ್‌ ಕಡ್ಡಾಯವಾಗಿ ನೀಡಬೇಕು, ರೈತರಿಗೆ ತೊಂದರೆಯಾಗದ ರೀತಿ ಈ ಬಾರಿ ಎರಡು ಕೌಂಟರ್‌ ಪ್ರಾರಂಭಿಸಲಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಹೇಮರಾಜು ಮಾತನಾಡಿ, ರೈತರು ಅಧಿಕಾರಿಗಳೊಂದಿಗೆ ಸಹಕರಿಸಬೇಕು, ತಮ್ಮ ಸರದಿ ಬಂದಾಗ ಮಾತ್ರ ರಾಗಿ ತಂದು ಕೇಂದ್ರಕ್ಕೆ ಹಾಕಬೇಕು, ವಿನಾಕಾರಣ ಗೊಂದಲ ಮಾಡಿಕೊಳ್ಳಬಾರದು ಎಂದರು.
ತಹಶೀಲ್ದಾರ್‌ ಮಹಾಬಲೇಶ್ವರ್‌ ಮಾತನಾಡಿ, ತಾಲೂಕಿನಲ್ಲಿ 2.75 ಲಕ್ಷ ಪಹಣಿ ಪೈಕಿ 1.25 ಲಕ್ಷ ರೈತರು ಫೂಟ್‌ ಐಡಿ ಪಡೆದಿದ್ದಾರೆ, ಇನ್ನು ಒಂದುವರೆ ಲಕ್ಷ ರೈತರು ಪಡೆದಿಲ್ಲ, ಈ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಆರ್‌ಎಂಸಿ ನಿರ್ದೇಶಕ ರಂಗಣ್ಣಗೌಡ ಮಾತನಾಡಿ, ರೈತರು ಅಗತ್ಯ ಸುರಕ್ಷತೆ ಕ್ರಮಗಳೊಂದಿಗೆ ರಾಗಿ ಕೇಂದ್ರಕ್ಕೆ ರಾಗಿ ಹಾಕಲು ಬರಬೇಕು, ಕೇಂದ್ರದಲ್ಲಿ ಅಧಿಕಾರಿಗಳೆ ರೈತರ ರಾಗಿ ಇಳಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಗೋದಾಮು ವ್ಯವಸ್ಥಾಪಕ ಸಿದ್ದಲಿಂಗಸ್ವಾಮಿ, ಆಹಾರ ಶಿರಸ್ತೇದಾರ್‌ ಮಲ್ಲಿಕಾರ್ಜುನಪ್ಪ, ಆಹಾರ ನಿರೀಕ್ಷಕ ಸಚಿನ್‌, ಕೃಷಿ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!