ಡಿ.ಕೆ.ಸುರೇಶ್ ಅವರದ್ದು ಗೂಂಡಾ ಸಂಸ್ಕೃತಿ

ಕಾಂಗ್ರೆಸ್‌ ಗೂಂಡಾಗಿರಿ ಖಂಡಿಸಿ ಬಿಜೆಪಿ ಪ್ರತಿಭಟನೆ

302

Get real time updates directly on you device, subscribe now.

ತುಮಕೂರು: ಮುಖ್ಯಮಂತ್ರಿ ಅವರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ತನ್ನ ಗೂಂಡಾಗಿರಿ ಸಂಸ್ಕೃತಿ ಪ್ರದರ್ಶಿಸುವ ಮೂಲಕ ರೌಡಿ ವರ್ತನೆ ತೋರಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯದರ್ಶಿ ರವಿಹೆಬ್ಬಾಕ ಮಾತನಾಡಿ, ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌, ಎಂ.ಎಲ್.ಸಿ ರವಿ ಅವರ ವರ್ತನೆ ಖಂಡನೀಯ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಲ್ಲೆ ಮೀರಿ ವರ್ತಿಸುವ ಮೂಲಕ ಸಂಸದರು ಗೂಂಡಾ ಸಂಸ್ಕೃತಿ ಪ್ರದರ್ಶಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್‌ ಗೂಂಡಾವರ್ತನೆ ಮೂಲಕ ನಾಡಪ್ರಭು ಕೆಂಪೇಗೌಡ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ, ಕಾಂಗ್ರೆಸ್ಸಿಗರಿಗೆ ನಿಜವಾಗಿಯೂ ಅವರ ಮೇಲೆ ಗೌರವವಿದ್ದರೆ ಇಂತಹ ವರ್ತನೆ ಮಾಡುವ ಮೂಲಕ ಅಗೌರವ ತೋರುತ್ತಿರಲಿಲ್ಲ, ಇಂತಹ ನಾಲಾಯಕ್‌ ರಾಜಕಾರಣಿಗಳ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು. ಬಿಜೆಪಿ ಮುಖಂಡ ವೈ.ಎಚ್‌.ಹುಚ್ಚಯ್ಯ ಮಾತನಾಡಿ, ಸಿಎಂಗೆ ಧಿಕ್ಕಾರ ಕೂಗಿಸುವ ಅಸಂಸ್ಕೃತಿ ತೋರಿದ್ದಲ್ಲದೇ ಸಚಿವರ ಮೇಲೆ ರೌಡಿಯಂತೆ ಮೈ ಮೇಲೆ ಬೀಳುವಂತೆ ನಡೆದುಕೊಳ್ಳುವ ಗೂಂಡಾ ಸಂಸದ ಶುದ್ಧ ಅವಿವೇಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಮುಂದೆಯಲ್ಲಿಯೇ ರೌಡಿ ಸಂಸ್ಕೃತಿ ತೋರುವ ಸಂಸದರು ಜನರ ಹಿತ ಕಾಯುತ್ತಾರೆಯೇ? ಇಂತಹ ವರ್ತನೆ ತೋರುವ ಸಂಸದರು, ಅವರ ಅಣ್ಣ ಡಿ.ಕೆ.ಶಿವಕುಮಾರ್‌ ಅವರ ಕೈಗೆ ಅಧಿಕಾರ ಸಿಕ್ಕರೆ ಜನರ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ರೌಡಿ ಕೊತ್ವಾಲ್‌ ಸಂಸ್ಕೃತಿಯಲ್ಲಿ ಬೆಳೆದಿರುವ ಡಿ.ಕೆ.ಶಿವಕುಮಾರ್‌ ಅವರು ರಾಜಕಾರಣಕ್ಕೆ ಬರುವ ಮುಂಚೆಯೇ ಗೊತ್ತಿದೆ, ಅಂತಹ ರೌಡಿ ಪುಡಾರಿಗಳು ಸಂಸದರು, ಶಾಸಕರಾಗುತ್ತಿರುವುದು ಪ್ರಜಾಪ್ರಭುತ್ವದ ದುರಾದೃಷ್ಟಕರ, ಇಂತಹ ಅಯೋಗ್ಯ ಜನಪ್ರತಿನಿಧಿಗಳ ವಿರುದ್ಧ ಬಿಜೆಪಿ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ಕಾರ್ಯಕರ್ತರು ಕೈಗೆ ಬಳೆ ತೊಟ್ಟಿಕೊಂಡಿಲ್ಲ, ಕಾಂಗ್ರೆಸ್‌ ಗೂಂಡಾಗಿರಿ ಸಂಸ್ಕೃತಿಗೆ ತಲೆ ಬಾಗದೆ ಹೋರಾಡುವ ಶಕ್ತಿ ನಮಗಿದೆ, ಈ ಮೊದಲು ಎಲ್ಲಿದ್ದೀರಿ ಎನ್ನುವುದನ್ನು ಜನರಿಗೂ ಗೊತ್ತಿದೆ, ಕಾಂಗ್ರೆಸ್‌ ಗೂಂಡಾಗಿರಿ ವಿರುದ್ಧ ಬಿಜೆಪಿ ನಿರಂತರ ಹೋರಾಡಲಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್‌ ಮಾತನಾಡಿ, ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸಿಎಂ ಸಭೆಯಲ್ಲಿ ಈ ರೀತಿ ಗೂಂಡಾ ವರ್ತನೆ ನಡೆದಿಲ್ಲ, ಕಾಂಗ್ರೆಸ್ಸಿಗರ ರಕ್ತದಲ್ಲಿ ಇಂತಹ ಸಂಸ್ಕೃತಿ ಇದೆ, ಕಾಂಗ್ರೆಸ್‌ ತಾಲಿಬಾನಿ ಸಂಸ್ಕೃತಿ ಹೊಂದಿರುವುದಕ್ಕೆ ಕಲ್ಲು ತಿಂದು ಅರಗಿಸಿಕೊಂಡಿದ್ದಾರೆ, ದೇಶವನ್ನೇ ನುಂಗಲು ಹೊರಟಿದ್ದಾರೆ ಎಂದು ಆರೋಪಿದರು.
ಕಾಂಗ್ರೆಸ್‌ ಪಕ್ಷ ಮುಂದೆ ಆಡಳಿತ ಮಾಡುವ ಕನಸು ಕಾಣುತ್ತಿದೆ, ಇಂತಹ ರಾಜಕೀಯ ಮನೋಭಾವಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ, ಕಾಂಗ್ರೆಸ್‌ ಬದುಕಬೇಕಿದ್ದರೆ ಬಿಜೆಪಿಯಿಂದ ಪಾಠ ಕಲಿತುಕೊಳ್ಳಬೇಕಿದೆ, ಮುಖ್ಯಮಂತ್ರಿ ಆಗಲು ಬಯಸುತ್ತಿರುವ ಡಿಕೆಶಿ ಒಳ್ಳೆಯ ವರ್ತನೆ ತೋರದಿದ್ದರೆ ಜನರೇ ಬುದ್ಧಿ ಕಲಿಸಲಿದ್ದಾರೆ, ಇಂತಹ ನಡವಳಿಕೆಯಿಂದ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಕನಸು ಕಾಣಬೇಡಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿಭಾಗೀಯ ಉಸ್ತುವಾರಿ ಲಕ್ಷ್ಮೀಶ್‌, ನಗರಾಧ್ಯಕ್ಷ ಹನುಮಂತರಾಜು, ಚಂದ್ರಶೇಖರ್‌, ದಿಲೀಪ್‌, ಯಶಸ್‌, ಗಣೇಶ್‌, ಸಿದ್ದೇಶ್‌ ಪ್ರಸಾದ್‌, ಪಾಲಿಕೆ ಸದಸ್ಯರಾದ ರಮೇಶ್‌, ದೀಪಾ, ಅರುಣಾ ನವೀನ್‌, ಮಂಜುಳಾ ಆದರ್ಶ್‌, ಮಲ್ಲಿಕಾರ್ಜುನ್‌, ಬನಶಂಕರಿ ಬಾಬು, ಚಂದನ್‌, ವಿರೂಪಾಕ್ಷಪ್ಪ, ಜಿಲ್ಲಾ ಪದಾಧಿಕಾರಿಗಳು ಹಾಗೂ ನಗರ ಪದಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!