ಕೊರೊನಾ ತಡೆಗೆ ಸರ್ಕಾರ ಸದಾ ಸಿದ್ಧ

ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು: ಸಚಿವ

122

Get real time updates directly on you device, subscribe now.

ಗುಬ್ಬಿ: ರಾಜ್ಯದಲ್ಲಿ ಲಾಕ್ ಡೌನ್‌ ಬಗ್ಗೆ ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಿ ಅದರ ಸಾಧಕ ಬಾಧಕ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ಕೇಂದ್ರಕ್ಕೆ ಹಿರಿಯ ನಟಿ ಹಾಗೂ ಮಾಜಿ ರಾಜ್ಯ ಸಭೆ ಸದಸ್ಯೆ ಬಿ.ಜಯಶ್ರೀ ಅವರು ತಮ್ಮ ತಾಯಿಯ ಹೆಸರಿನಲ್ಲಿ ಮಾಲತಮ್ಮ ಆರ್ಟ್ ಆಫ್‌ ಪೌಂಡೇಶನ್‌ ವತಿಯಿಂದ 10 ಸುಸಜ್ಜಿತ ಬೆಡ್‌ ನೀಡುವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಬೇರೆ ಭಾಗದಲ್ಲಿ ಪಾಸಿಟಿವಿಟಿ ದರ ಕಡಿಮೆ ಇದೆ, ಆದರೂ ಮುಂಜಾಗ್ರತ ಕ್ರಮವಾಗಿ ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ವಹಿಸಲು ಸರಕಾರ ಬದ್ಧವಾಗಿದೆ ಎಂದರು.
ವೀಕೆಂಡ್‌ ಲಾಕ್ ಡೌನ್‌ ವೇಳೆಯಲ್ಲಿ ಬೆಂಗಳೂರಿನಿಂದ ಗ್ರಾಮೀಣ ಪ್ರದೇಶಗಳಿಗೆ ಬರುವವರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಪ್ರಕಟಿಸಲಾಗುತ್ತದೆ, ಇನ್ನೂ ಜಿಲ್ಲೆಯಲ್ಲಿ ಶೇ0.5 ರಷ್ಟು ಮಾತ್ರ ಕಂಡು ಬಂದಿದ್ದು ಎಲ್ಲಾ ಆಸ್ಪತ್ರೆಗಳಿಗೂ ಬೇಕಾಗಿರುವ ಸೌಲಭ್ಯ ಒದಗಿಸಲು ಸಿದ್ಧತೆಯಾಗಿದೆ ಎಂದರು.
ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನವರು ಕೇವಲ ರಾಜಕೀಯಕ್ಕಾಗಿ ಮಾಡುತ್ತಿರುವುದು ಬಿಟ್ಟರೆ ಬೇರೆ ಏನು ಇಲ್ಲ, ಸುಮಾರು 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ ಸರ್ಕಾರ ಈ ಸಮಸ್ಯೆಯನ್ನ ಯಾಕೆ ಬಗೆಹರಿಸಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಪ್ರಶ್ನಿಸಿದರು.
ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಸಮಸ್ಯೆ ಯಾಕೆ ಬಗೆ ಹರಿಸಿಲ್ಲ, ಮಂಡ್ಯ, ಮೈಸೂರು ಭಾಗದಲ್ಲಿ ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ಸಾಕಷ್ಟು ರಾಜಕೀಯ ನಡೆದಿರೋದು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಸ್ವಲ್ಪ ವೀಕ್‌ ಆಗುತ್ತಿದೆ, ಹಾಗಾಗಿ ಅದರ ಲಾಭ ಪಡೆದುಕೊಂಡು ರಾಜಕೀಯ ಮಾಡೋಕ್ಕೆ ಹೊರಟಿರೋದು ಬಿಟ್ಟರೆ ಬೇರೆ ಏನು ಇಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಯೋಜನೆ ಬೇಡ ಅಂದಿಲ್ಲ, ಆದರೆ ಆರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ, ಹಾಗಾಗಿ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಗೊತ್ತಿದ್ರು ಪಾದಯಾತ್ರೆ ಮಾಡುತ್ತಾರೆ ಅಂದ್ರೆ ಇದೆಲ್ಲ ಕೇವಲ ಮತ ಪಡೆಯುವುದಕ್ಕೆ ಹೊರಟಿರುವ ಗಿಮಿಕ್‌, ಹಿಂದೆ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದಿದ್ದೇವೆ ಅಂತ ಅದನ್ನ ಇಟ್ಟುಕೊಂಡು ಹೋದ್ರೆ ಮಂಡ್ಯ, ಮೈಸೂರು ಜನರು ದಡ್ಡರಲ್ಲ ಅನ್ನೋದು ಅವರಿಗೆ ಗೊತ್ತಿಲ್ಲ, ಕಾಂಗ್ರೆಸ್‌ನವರು ವಿರಾಮವಾಗಿದ್ದರೆ, ಅದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ ಅಷ್ಟೇ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ರಂಗ ಕಲಾವಿದೆ ಬಿ.ಜಯಶ್ರೀ, ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಗ್ರಾಪಂ ಸದಸ್ಯೆ ಕಾಡಶೆಟ್ಟಿಹಳ್ಳಿ ಸತೀಶ್‌, ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯರಾದ ಆನಂದ್‌, ರಾಜೇಶ್ ಗುಬ್ಬಿ, ಮುಖಂಡ ಚಂದ್ರಮೌಳಿ, ಎಸಿ ಅಜಯ್‌, ಡಿಎಚ್‌ಓ ನಾಗೇಂದ್ರಪ್ಪ, ತಹಶೀಲ್ದಾರ್‌ ಆರತಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿಂದುಮಾಧವ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!