ಎಸ್‌.ಎನ್‌.ಕೃಷ್ಣಯ್ಯ ಶೋಷಿತರ ಪರ ಧ್ವನಿಯಾಗಿದ್ದರು

171

Get real time updates directly on you device, subscribe now.

ಶಿರಾ: ಹುಟ್ಟು ಮತ್ತು ಸಾವುಗಳ ನಡುವೆ ನಾವು ಮಾಡುವಂತಹ ಸಾಮಾಜಿಕ ಸೇವಾ ಕಾರ್ಯ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ, ಅಂತಹ ಒಂದು ಎತ್ತರದ ಸ್ಥಾನವನ್ನೂ ನಮ್ಮೆಲ್ಲರ ಹೃದಯದಲ್ಲಿ ಪಡೆದವರು ಎಸ್‌.ಎನ್‌.ಕೃಷ್ಣಯ್ಯ ಎಂದು ನಿವೃತ್ತ ಪ್ರಾಂಶುಪಾಲ ತಿಮ್ಮನಹಳ್ಳಿ ವೇಣುಗೋಪಾಲ್‌ ತಿಳಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸಹಕಾರ ರತ್ನ ದಿವಂಗತ ಎಸ್‌.ಎನ್‌.ಕೃಷ್ಣಯ್ಯನವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಸಂಸ್ಥೆಗೆ ಎಸ್‌.ಎನ್‌.ಕೃಷ್ಣಯ್ಯ ಫೌಂಡೇಶನ್‌ ವತಿಯಿಂದ ಸ್ಮಾರ್ಟ್‌ ತರಗತಿಗಳಿಗಾಗಿ ಎಲ್‌ಸಿಡಿ ಪೊಜೆಕ್ಟರ್‌ ಕೊಡುಗೆ ಮತ್ತು ಯುವ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್‌.ಎನ್‌.ಕೃಷ್ಣಯ್ಯ ಅವರು ಜಿಲ್ಲೆ ಕಂಡಂತಹ ಶ್ರೇಷ್ಠ ಸಹಕಾರಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತಕ, ಎಲ್ಲಾ ಜಾತಿ ಧರ್ಮದವರ ಪ್ರೀತಿ ಗಳಿಸಿದ್ದ ಅವರು ಹೇಮಾವತಿ ನೀರು ಕುಡಿಯುವ ಉದ್ದೇಶಕ್ಕಾಗಿ ಶಿರಾ ನಗರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಮಾಜಿ ಮುಖ್ಯಮಂತ್ರಿ ದೇವರಾಜ್‌ ಅರಸು ಅವರು ಶಿಷ್ಯರಾಗಿದ್ದ ಎಸ್‌.ಎನ್‌.ಕೃಷ್ಣಯ್ಯ ಅವರು ತುಮಕೂರು ಜಿಲ್ಲೆಯಲ್ಲಿ ಅರಸು ಬಿತ್ತಿದ ಬೀಜ ಮುಂದೆ ಹೆಮ್ಮರವಾಗಿ ಬೆಳೆದು ಎಲ್ಲಾ ವರ್ಗದ ಶೋಷಿತರ ಪರ ನಿಲ್ಲುವ ಧ್ವನಿಯಾಗಿದ್ದರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಮಾತನಾಡಿ ದಶಕಗಳ ಕಾಲ ರಾಜಕೀಯ ನಂಟಿದ್ದರೂ ಯಾವುದೇ ಆಮಿಷಕ್ಕೆ ಬಲಿಯಾಗದೆ ಸಾವಿನ ಕೊನೆಯ ತನಕ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ಹಿರಿಯ ಸಹಕಾರಿ ದಿವಂಗತ ಕೃಷ್ಣಯ್ಯನವರು ಇಂದಿನ ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಾ ಸರ್ಕಾರಿ ಪಾಲಿಟೆಕ್ನಿಕ್‌ ನ ಪ್ರಾಂಶುಪಾಲ ಮೇರ್ಜ ಅನಿಲ್‌ ಕುಮಾರ್‌ ಮಾತನಾಡಿ, ಎಸ್‌.ಎನ್‌.ಕೃಷ್ಣಯ್ಯ ಫೌಂಡೇಶನ್‌ ವತಿಯಿಂದ ಸ್ಮಾರ್ಟ್‌ ತರಗತಿಗಳಿಗಾಗಿ ಎಲ್‌ಸಿಡಿ ಪೊಜೆಕ್ಟರ್‌ ಕೊಡುಗೆ ಹೆಚ್ಚಾಗಿ ಗ್ರಾಮೀಣ ಮಕ್ಕಳೇ ಇರುವ ನಮ್ಮ ಸಂಸ್ಥೆಗೆ ಉನ್ನತ ತಾಂತ್ರಿಕ ಶಿಕ್ಷಣ ನೀಡಲು ನೆರವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ತಾಲ್ಲೂಕಿನ ಯುವ ಕ್ರೀಡಾ ಸಾಧಕರಾದ ಉದಯ್‌ ಕುಮಾರ್‌, ರಾಕೇಶ್‌ ಮತ್ತು ವಿಕಲಚೇತನ ಕ್ರೀಡಾ ಪಟುಗಳಾದ ಮುಜಾಹಿದ್, ಜಗನ್ನಾಥ್‌ ಅವರ ಸಾಧನೆ ಗುರುತಿಸಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್‌.ಎನ್‌.ಕೃಷ್ಣಯ್ಯ ಫೌಂಡೇಶನ್ ನ ರೂಪೇಶ್‌ ಕೃಷ್ಣಯ್ಯ, ಬಿ.ಎಸ್‌.ವಿಜಯಕುಮಾರ್‌, ಸರ್ಕಾರಿ ಪಾಲಿಟೆಕ್ನಿಕ್‌ನ ರಿಜಿಸ್ಟ್ರಾರ್‌ ವಿಶ್ವಕುಮಾರ್‌, ಬೋಧಕರಾದ ರವಿಪ್ರಕಾಶ್‌, ಶ್ರೀಧರ್‌ಮೂರ್ತಿ, ಸಾಧನ ಎಜುಕೇಷನಲ್‌ ಅಂಡ್‌ ಚಾರಿಟೇಬಲ್ ಟ್ರಸ್ಟ್ ರವಿಕುಮಾರ್‌, ಕಿಶೋರ್‌ ಮತ್ತು ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!