ಹಾಪ್ ಕಾಮ್ಸ್ ನಿಂದ ಜ್ಯೂಸ್‌ ಅಂಗಡಿ ಆರಂಭ

318

Get real time updates directly on you device, subscribe now.

ತುಮಕೂರು: ಕರ್ನಾಟಕ ತೋಟಗಾರಿಕೆ ಮಹಾಮಂಡಳಿ ನಿ. ಹಾಗೂ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ನಗರದ ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳ ಭಾಗದಲ್ಲಿ ಹಣ್ಣು ಮತ್ತು ಜ್ಯೂಸ್‌ ಮಾರಾಟ ಮಾಡುವ ಅಂಗಡಿ ಉದ್ಘಾಟಿಸಲಾಯಿತು.
ಜಿಲ್ಲಾ ಹಾಪ್‌ಕಾಮ್ಸೌ ಅಧ್ಯಕ್ಷ ವಿಜಯಗೌಡ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿ, ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದ ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗೆ ಅಂಗಡಿ ಮಳಿಗೆ ನೀಡಿದ್ದು, ಹಣ್ಣು ಮತ್ತು ಜ್ಯೂಸ್‌ ಮಾರಾಟಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಹೈಸ್ಕೂಲ್‌ ಮೈದಾನ, ವಿಶ್ವವಿದ್ಯಾನಿಲಯದ ಬಳಿ ಸೇರಿದಂತೆ ಮೂರ್ನಾಲ್ಕು ಕಡೆ ಅಂಗಡಿ ಮಳಿಗೆ ಕೊಡುವ ನಿರೀಕ್ಷೆ ಇದೆ, ಎಲ್ಲಾ ಕಡೆಯೂ ಗುಣಮಟ್ಟದ ಹಣ್ಣು ಮಾರಾಟ ಮಾಡಲಾಗುವುದು ಎಂದರು.
ಕಳೆದ ಎರಡು ಮೂರು ತಿಂಗಳಿನಿಂದ ಮಳೆಯಿಂದಾಗಿ ಬೆಳೆ ನಾಶವಾಗಿತ್ತು, ಇದೀಗ ಬೆಳೆ ಬೆಳೆಯಲು ರೈತರು ಆರಂಭಿಸುತ್ತಿದ್ದು, ಅವರಿಂದಲೂ ಹಣ್ಣು ಖರೀದಿಸಲಾಗುವುದು ಎಂದು ಹೇಳಿದರು.
ಈ ಅಂಗಡಿ ಮಳಿಗೆಗಳಲ್ಲಿ ಬಡವರು, ಮಧ್ಯಮ ವರ್ಗದವರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟದ ಹಣ್ಣುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ರೈತರಿಂದ ಮತ್ತು ಮಾರುಕಟ್ಟೆಯಿಂದ ಹಣ್ಣುಗಳನ್ನು ಖರೀದಿಸಿ ತಂದು ಜನಸಾಮಾನ್ಯರಿಗೆ ಅನುಕೂಲವಾಗುವ ದರದಲ್ಲಿ ಮಾರಾಟ ಮಾಡಲಾಗುವುದು, ನಗರದಲ್ಲಿ ಇನ್ನು ಹೆಚ್ಚಿನ ಮಳಿಗೆ ತೆರೆಯಲು ಸ್ಮಾರ್ಟ್‌ಸಿಟಿ, ಪಾಲಿಕೆ ವತಿಯಿಂದ ಜಾಗ ನೀಡಿದರೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕರಾದ ಡಿ.ರಾಮಯ್ಯ, ಜಯಣ್ಣ, ಕಾರ್ಯದರ್ಶಿ ಮಾರೇಗೌಡ, ಸ್ಟೋರ್‌ ಕೀಪರ್‌ ಬಸವರಾಜು ಸೇರಿದಂತೆ ನಿರ್ದೇಶಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!