ಸಾರಿಗೆ ತನಿಖಾಧಿಕಾರಿಗಳ ವರ್ತನೆಗೆ ಆಕ್ರೋಶ

381

Get real time updates directly on you device, subscribe now.

ಕುಣಿಗಲ್‌: ಸಾರಿಗೆ ಸಂಸ್ಥೆ ಬಸ್‌ ನಿರ್ವಾಹಕನಿಗೆ ತಪಾಸಣೆ ಅಧಿಕಾರಿಗಳು ಸುಖಾ ಸುಮ್ಮನೆ ನೋಟೀಸ್‌ ಜಾರಿ ಮಾಡಿದ್ದನ್ನು ಆಕ್ಷೇಪಿಸಿದ ಪ್ರಯಾಣಿಕರು, ತನಿಖಾಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಬಸ್ ನ್ನು ಠಾಣೆಗೆ ಕರೆತಂದ ಘಟನೆ ನಡೆದಿದೆ.
ಹಾಸನ ಪಶು ವೈದ್ಯಕಾಲೇಜಿನ ಸಿಬ್ಬಂದಿ ರಮೇಶ್‌ ಎಂಬುವರು ಪ್ರಶ್ನೆ ಪತ್ರಿಕೆಗಳ ಬಂಡಲ್ ಗಳನ್ನು ಪುತ್ತೂರು ಘಟಕದ ಸಾರಿಗೆ ಸಂಸ್ಥೆ ಬಸ್ ನಲ್ಲಿ ಹಾಸನಕ್ಕೆ ಪ್ರಯಾಣಿಸಲು ಟಿಕೆಟ್‌ ಖರೀದಿಸಿದರು. ಪ್ರಶ್ನೆ ಪತ್ರಿಕೆ ಬಂಡಲ್ ಗಳ ಲಗೇಜು ಪಡೆಯುವಂತೆ ನಿರ್ವಾಹಕ ಸೂಚಿಸಿದಾಗ ಸದರಿ ಬಂಡಲ್ ಗಳು ಕಡಿಮೆ ತೂಕ ಇದೆ ಎಂದು ಹೇಳಿದ್ದರು. ಬಸ್‌ ಕುಣಿಗಲ್‌ ಸಮೀಪ ಬಂದಾಗ ತಪಾಸಣೆಗೆ ಆಗಮಿಸಿದ ತುಮಕೂರು ಸಾರಿಗೆ ವಿಭಾಗದ ಎಟಿಎಸ್‌ ಅಶೋಕ್‌, ಸಿದ್ದೇಶ್‌, ಟಿಕೆಟ್‌, ಲಗೇಜ್‌ಗಳ ಬಗ್ಗೆ ತನಿಖೆ ನಡೆಸಿದಾಗ ಪ್ರಶ್ನೆ ಪತ್ರಿಕೆಗಳ ಬಂಡಲ್‌ಗೆ ಲಗೆಜ್‌ ಪಡೆಯದಿರುವ ಬಗ್ಗೆ ಆಕ್ಷೇಪಿಸಿದರು. ಈ ಹಂತದಲ್ಲಿ ನಿರ್ವಾಹಕ, ಕಾಲೇಜು ಸಿಬ್ಬಂದಿ ರಮೇಶ್‌ಗೆ ಲಗೇಜು ಟಿಕೆಟ್‌ ನೀಡಿದರು. ಲಗೇಜು ಟಿಕೆಟ್‌ ನೀಡಿದ ನಂತರ ತನಿಖಾಧಿಕಾರಿಗಳು ನಿರ್ವಾಹಕ ಮಲ್ಲೇಶ ಎಂಬುವರಿಗೆ ನೋಟಿಸ್‌ ಜಾರಿ ಮಾಡಿದರು.
ಇದನ್ನು ವಾಹನದಲ್ಲಿದ್ದ ಇತರೆ ಪ್ರಯಾಣಿಕರು ಆಕ್ಷೇಪಿಸಿ ತನಿಖಾಧಿಕಾರಿಗಳಿಬ್ಬರನ್ನು ತರಾಟೆಗೆ ತೆಗೆದುಕೊಂಡ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕ ಸಂಘಟನೆಯ ಮುಖಂಡ ಮಂಜುನಾಥ, ಒಬ್ಬ ಪ್ರಯಾಣಿಕ 30 ಕೆಜಿ ವರೆಗೂ ಲಗೇಜು ಉಚಿತವಾಗಿ ಕೊಂಡೊಯ್ಯಬಹುದು, ಪ್ರಶ್ನೆ ಪತ್ರಿಕೆ ಬಂಡಲ್ ಗಳು ಎರಡೂ ಸೇರಿಸಿದರೂ 30 ಕೆಜಿ ಆಗುವುದಿಲ್ಲ, ಆದರೂ ಅನಗತ್ಯವಾಗಿ ಟಿಕೆಟ್‌ ಖರೀದಿ ಮಾಡುವಂತೆ ಪ್ರಯಾಣಿಕರಿಗೆ ಒತ್ತಾಯ ಮಾಡಿದ್ದಲ್ಲದೆ ಯಾವುದೇ ತಪ್ಪು ಮಾಡದ ನಿರ್ವಾಹಕನಿಗೆ ನೋಟೀಸ್‌ ನೀಡುತ್ತಾ ಸರ್ವಾಧಿಕಾರಿ ಧೋರಣೆ ತಳೆಯುತ್ತಿದೀರಾ ಎಂದು ಆಕ್ಷೇಪಿಸಿ ತನಿಖಾಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಲು ಬಸ್‌ನ್ನು ಕುಣಿಗಲ್‌ ಪೊಲೀಸ್‌ ಠಾಣೆಗೆ ಕರೆ ತಂದರು, ಎಲ್ಲಾ ಪ್ರಯಾಣಿಕರು ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತರು.

Get real time updates directly on you device, subscribe now.

Comments are closed.

error: Content is protected !!