ನನ್ನ ಗೆಲುವಿನಲ್ಲಿ ಸಹಕಾರಿಗಳ ಸಹಕಾರವಿದೆ: ರಾಜೇಂದ್ರ

266

Get real time updates directly on you device, subscribe now.

ಮಧುಗಿರಿ: ಜಿಲ್ಲೆಯ ಎಲ್ಲಾ ಹಿರಿಯ ಸಹಕಾರಿಗಳ ಸಹಕಾರದಿಂದ ವಿಧಾನಪರಿಷತ್‌ ಚುನಾವಣೆಯಲ್ಲಿ ನನ್ನ ಗೆಲುವು ಸಾಧ್ಯವಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ತುಮುಲ್‌ ಉಪ ಕೇಂದ್ರದ ಕ್ಷೀರ ಭವನದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್‌ಗೆ ಆಯ್ಕೆಯಾದ ಆರ್‌.ರಾಜೇಂದ್ರ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ, ಡೈರಿ, ಕ್ಯಾಲೆಂಡರ್‌ ಬಿಡುಗಡೆ ಹಾಗೂ ಫಲಾನುಭವಿಗಳಿಗೆ ಪರಿಹಾರ ಚೆಕ್‌ ವಿತರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಹಕಾರಿಗಳ ಮೂಲಕ ಯುವ ಸಹಕಾರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ತಂದಿದೆ, ಈ ಕ್ಷೇತ್ರದಲ್ಲಿ ಯಾವುದೇ ರಾಜಕೀಯವಿರುವುದಿಲ್ಲ ಹಾಗೂ ಇಲ್ಲಿರುವವರು ಎಲ್ಲರೂ ಸಹಕಾರಿಗಳಿದ್ದಾರೆ, 2015ರ ವಿಧಾನ ಪರಿಷತ್‌ ಚುನಾವಣೆಯ ನನ್ನ ಸೋಲಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ, ನಮ್ಮ ಅತಿಯಾದ ಆತ್ಮವಿಶ್ವಾಸದಿಂದ ನಮಗೆ ಸೋಲಾಗಿದೆ ಎಂದರು.
ನಮ್ಮ ತಾಲೂಕು ಉಪ ವಿಭಾಗವಾಗಿದ್ದು, ತುಮುಲ್‌ ವತಿಯಿಂದ ವಿದ್ಯಾರ್ಥಿನಿಯರ ಹಾಸ್ಟೆಲ್‌ನ್ನು ಮಧುಗಿರಿಯಲ್ಲಿ ನಿರ್ಮಿಸಿ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿಕೊಡಬೇಕಾಗಿದೆ ಎಂದ ಅವರು, ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದೇನೆ, ಜಿಲ್ಲಾ ಬ್ಯಾಂಕ್‌ನ ವತಿಯಿಂದ ಹಸು ಸಾಕಾಣಿಕೆಗಾಗಿ 32 ಜನರಿಗೆ 1 ಕೋಟಿ 75 ಲಕ್ಷ ರೂ. ಸಾಲ ಮಂಜೂರು ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಮೃತಪಟ್ಟವರಿಗೆ ನೀಡಲಾಗುತ್ತಿದ್ದ 1 ಲಕ್ಷ ರೂ. ಹಣವನ್ನು 2022 ರ ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ 50 ಸಾವಿರ ರೂ. ಗಳನ್ನು ಬ್ಯಾಂಕ್‌ನ ಸ್ಥಿತಿಗತಿ ನೋಡಿಕೊಂಡು ಇಳಿಕೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ತುಮುಲ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಮಾತನಾಡಿ ತುಮುಲ್‌ ವತಿಯಿಂದ ಸುಮಾರು 61 ಲಕ್ಷ 5 ಸಾವಿರ ರೂ. ಗಳ ಚೆಕ್‌ನ್ನು ವಿವಿಧ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಸುಮಾರು 19 ಕೋಟಿ ಬಟವಾಡೆ ಹಣವನ್ನು ವಾರಕ್ಕೊಮ್ಮೆ ಹಾಲು ಉತ್ಪಾದಕರಿಗೆ ನೇರವಾಗಿ ಅವರ ಖಾತೆಗಳಿಗೆ ಪಾವತಿಸಲಾಗುತ್ತಿದೆ, ಮಾಜಿ ಶಾಸಕರಾದ ಕೆ.ಎನ್‌.ರಾಜಣ್ಣ ನವರ ಸಹಕಾರದಿಂದ ನಾನು ಅಧ್ಯಕ್ಷನಾಗಿ ಹೈನುಗಾರರಿಗೆ ಅನೇಕ ರೀತಿಯ ಜನಪರ ಕಾರ್ಯಕ್ರಮಗಳನ್ನು ಅಂದು ಜಾರಿಗೊಳಿಸಿದ್ದು, ಇಂದು ಆ ಕಾರ್ಯಕ್ರಮಗಳಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ತುಮುಲ್‌ ನಿರ್ದೇಶಕರಾದ ಚೆನ್ನಮಲ್ಲಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಯುವಕರಿಗೆ ಉತ್ತಮ ಅವಕಾಶಗಳಿವೆ, ರಾಜಣ್ಣನವರ ಸಹಕಾರದಿಂದ ನಾವು ಸಹಕಾರ ಬ್ಯಾಂಕ್‌ಗಳಲ್ಲಿ ತೊಡಗಿಸಿದ್ದ ಷೇರು ಹಣವು ಇಂದು ದ್ವಿಗುಣವಾಗಿದ್ದು ನಾವು ಪಾವತಿಸಿದ್ದ ಷೇರು ಹಣದ ಜೊತೆಯಲ್ಲಿ ಪ್ರತಿವರ್ಷ ಲಾಭಾಂಶ ಕಾಣುತ್ತಿದ್ದೇವೆ ಎಂದರು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ರಾಜ್‌ ಗೋಪಾಲ್‌, ಪುರಸಭಾ ಸದಸ್ಯರಾದ ಎಂ.ಎಸ್‌.ಚಂದ್ರಶೇಖರ್‌, ಮಂಜುನಾಥ್‌ ಆಚಾರ್‌, ಗರಣಿ ರಾಮಾಂಜಿ, ಮಾಲಿ ಮರಿಯಪ್ಪ, ಮುಖಂಡರಾದ ಪಿ.ಸಿ.ಕೃಷ್ಣರೆಡ್ಡಿ, ಎಂ.ಜಿ.ಶ್ರೀನಿವಾಸ ಮೂರ್ತಿ, ಚಿಕ್ಕೋಬಳ ರೆಡ್ಡಿ, ಪಿ.ಟಿ.ಗೋವಿಂದಪ್ಪ, ಆದಿನಾರಾಯಣ ರೆಡ್ಡಿ, ಕೆ.ಪ್ರಕಾಶ್‌, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್‌, ಮುಖಂಡರಾದ ಸಾಧಿಕ್‌, ಹೆಂಜಾರಪ್ಪ, ಶನಿವಾರಂ ರೆಡ್ಡಿ, ಸದಾಶಿವರೆಡ್ಡಿ , ಸೀತಾರಾಂ, ಟಿ.ನರಸಿಂಹಮೂರ್ತಿ ಹಾಗೂ ಡೇರಿಯ ಉಪ ವ್ಯವಸ್ಥಾಪಕ ಬೀರಣ್ಣ, ವಿಸ್ತರಣಾಧಿಕಾರಿಗಳಾದ ಶಂರ್ಕ ನಾಗ್‌, ಗಿರೀಶ್‌, ಧರ್ಮವೀರ್‌, ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!