ಬರಹಗಾರನಿಗೆ ಸೂಕ್ಷ್ಮತೆ ಅತ್ಯಗತ್ಯ

ಪತ್ರಕೋದ್ಯಮ ಸಮಾಜದ ಮಾರ್ಗಸೂಚಿಯಾಗಲಿ: ಕರುಣಾಕರ್

233

Get real time updates directly on you device, subscribe now.

ತುಮಕೂರು: ಪತ್ರಕೋದ್ಯಮ ಸಮಾಜದ ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸಬೇಕು, ಇಲ್ಲಿ ಬರಹಗಾರನಾದವನಿಗೆ ಸೂಕ್ಷ್ಮತೆ ಮತ್ತು ವಿಷಯದ ಮಹತ್ವ ಅರಿಯುವ ಒಳ ನೋಟವಿರಬೇಕು, ಅ ನಿಟ್ಟಿನಲ್ಲಿ ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಆರಂಭದಿಂದಲೂ ಉತ್ತಮ ಕಾರ್ಯಗಾರ ನಡೆಸಿ ಪತ್ರಕರ್ತನಾಗಬಯಸುವ ವಿದ್ಯಾರ್ಥಿಗಳಲ್ಲಿ ಕೌಶಲ್ಯಧಾರಿತ ಶಿಕ್ಷಣ ನೀಡುತ್ತಿದೆ ಎಂದು ಶ್ರೀಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಡೀನ್‌ ಡಾ.ಕರುಣಾಕರ್‌ ತಿಳಿಸಿದರು.
ನಗರದ ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ಶ್ರೀಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಮೂರು ದಿನಗಳ ಪತ್ರಿಕೋದ್ಯಮ ಕಮ್ಮಟ ಉದ್ಘಾಟಿಸಿ ಮಾತನಾಡಿ, ಮಾಧ್ಯಮದ ಕ್ಷೇತ್ರದ ವಿಸ್ತಾರವಾದಂತೆಲ್ಲ ವಿದ್ಯಾರ್ಥಿಗಳಲ್ಲಿನ ಕೌಶಲ್ಯ ಹೆಚ್ಚುತ್ತವೆ, ಅದನ್ನ ಅರಿತು ವಿದ್ಯಾರ್ಥಿಗಳಿಗೆ ಇಂತಹ ಕಮ್ಮಟ ಆಯೋಜಿಸಿದ ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಕಾರ್ಯ ಶ್ಲಾಘನೀಯ ಎಂದರು.
ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್ ಮುಖ್ಯಸ್ಥ ಡಾ.ಎಲ್‌.ಸಂಜೀವ್‌ ಕುಮಾರ್‌ ಮಾತನಾಡಿ, ಪತ್ರಕರ್ತನಾದವನಿಗೆ ಭಾಷೆಯ ಮೇಲಿನ ಹಿಡಿತ ಬಹಳ ಮುಖ್ಯ, ಅದನ್ನು ರೂಪಿಸಿಕೊಳ್ಳಬೇಕಾದರೆ ಹೆಚ್ಚಿನ ಅಧ್ಯಯನ ನಡೆಸಬೇಕಾಗುತ್ತದೆ. ಪತ್ರಕರ್ತನಾದವನು ಸಮಾಜವನ್ನು ಕೇಂದ್ರವಾಗಿಟ್ಟುಕೊಂಡು ಬರೆಯಬೇಕಾಗುತ್ತದೆ. ಆಗ ಮಾತ್ರ ವಸ್ತುನಿಸ್ಠ ಅಂಶಗಳನ್ನು ಸಮಾಜಕ್ಕೆ ಮುಟ್ಟಿಸಲು ಸಾಧ್ಯ. ಬರವಣಿಗೆ ಕೌಶಲ್ಯದ ಜೊತೆಗೆ ತಾಂತ್ರಿಕ ನಿಪುಣತೆ ಪಡೆಯಬೇಕು ಎಂದು ಹೇಳಿದರು.ಪತ್ರಿಕೆಯಲ್ಲಿ ಪದ ಮತ್ತು ವಾಕ್ಯ ರಚನೆ ಕೂಡ ಬಹಳ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ವಿಷಯ ವರದಿ ಮಾಡುವಾಗ ಪದ ಮತ್ತು ವಾಕ್ಯ ಪ್ರಯೋಗ ಗಮನಿಸಬೇಕು ಎಂದರು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್‌ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ಅವಕಾಶಗಳ ನೆಲೆಯಾಗಿದ್ದು, ಅದಕ್ಕೆ ಪರಿಣಿತ ತರಬೇತಿಯ ಅವಶ್ಯಕತೆ ಬಹಳಷ್ಟಿದ್ದೆ, ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಜ್ಞಾನದ ಓರೆಹಚ್ಚಿ ಅವರಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಬೇಕಾದ ಕೌಶಲ್ಯ ರೂಪಿಸಿ, ಅವರಲ್ಲಿ ತಾಂತ್ರಿಕ ಪರಿಣತಿಯ ಬೆಳೆಸುವುದೆ ಕಮ್ಮಟದ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಉಪನ್ಯಾಕರಾದ ಡಾ. ನಾಗೇಂದ್ರ, ಜ್ಯೋತಿ.ಸಿ, ನವೀನ್‌, ಶಂಕರಪ್ಪ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಸಂತೋಷ್‌ ಕುಮಾರ್‌ ಚಿನ್ನಣ್ಣವರ್‌, ಪದ್ಮಾವತಿ.ಕೆ, ಲೋಕೇಶ್‌.ಎಸ್‌.ಕೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಹೊರ ತಂದಿರುವ ಸಿದ್ಧಾರ್ಥ ಸಂಪದ ಸುದ್ದಿ ಸಂಚಿಕೆ ಬಿಡುಗಡೆಗೊಳಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!