ಕೊಡಿಗೇನಹಳ್ಳಿ: ಹೋಬಳಿಯ ಮೈದನಹಳ್ಳಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ಸಾಯಿಬಾಬ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದ್ದು ಗುರುವಾರ ಬೆಳಗ್ಗೆ ಪೂಜೆ ಮಾಡಲು ಬಂದ ಅರ್ಚಕರಿಗೆ ಕಾಣಿಸಿದ್ದು ಅಚ್ಚರಿ ದೃಶ್ಯ, ದೇಗುಲದ ದ್ವಾರದಲ್ಲೇ ಹೆಜ್ಜೇನು ಕಟ್ಟುವ ಮೂಲಕ ಭಕ್ತರ ಅಚ್ಚರಿಗೆ ಮತ್ತು ಆಕರ್ಷಣೆಗೆ ಕಾರಣವಾಗಿದೆ.
ಗುರವಾರ ವೈಕುಂಠ ಏಕಾದಶಿಯ ಅಂಗವಾಗಿ ಬಾಬಾಗೆ ಕಾಕಡಾರ್ತಿ, ವಿಷ್ಣು ಸಹಸ್ರನಾಮ ಹಾಗೂ ಪ್ರಸಾದ ವಿನಿಯೋಗ ನಡೆದಿದ್ದು, ಹೆಜ್ಜೆನು ಕಟ್ಟುವ ಮೂಲಕ ನಮಗೆಲ್ಲರಿಗೂ ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಅರ್ಚಕ ಶ್ರೀರಾಮ ನಂದಗಿರಿ ತಿಳಿಸಿದ್ದಾರೆ.
ದೇವರ ದರ್ಶನ ಪಡೆಯಲು ದೇವಸ್ಥಾನದೊಳಗೆ ಹೋಗುವ ಭಕ್ತರಿಗೆ ಹೆಜ್ಜೇನು ಸ್ವಾಗತ ಕೋರುವಂತಿವೆ, ಆದರೆ ಹೆಜ್ಜೇನು ಮಾತ್ರ ಯಾರಿಗೂ ತೊಂದರೆ ಕೊಡುತ್ತಿಲ್ಲ, ಕೈ ಹಾಗೂ ನಾಮದ ಆಕಾರದಲ್ಲಿನ ಈ ಹೆಜ್ಜೇನು ಗೂಡು ಈಗ ಎಲ್ಲರ ಗಮನ ಸೆಳೆಯುತ್ತಿದೆ, ಎಲ್ಲರೂ ಅದರ ಮುಂದೆ ನಿಂತು ವೀಡಿಯೋ, ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.
11ನೇ ವರ್ಷದ ವೈಕುಂಠ ಏಕಾದಶಿ ಹಬ್ಬದ ಅಂಗವಾಗಿ ಬೆಟ್ಟದ ಜೇನು ದ್ವಾರ ಬಾಗಿಲಿನಲ್ಲಿ ಗೂಡು ಕಟ್ಟಿದ್ದು ಯಾರಿಗೂ ತೊಂದರೆ ಕೊಟ್ಟಿಲ್ಲ, ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಎಂದು ನೋಡಿಕೊಂಡು ದೇವರಿಗೆ ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ, ನಾವು ಹಿಂದೆಂದು ಈ ರೀತಿ ಜೇನು ಗೂಡು ಕಟ್ಟಿದ್ದನ್ನು ನೋಡಿರಲಿಲ್ಲ, ಇದೀಗ ವೈಕುಂಠ ಏಕಾದಶಿ ಹಬ್ಬದ ದಿನ ಜೇನು ಗೂಡು ಕಟ್ಟಿರುವಿದಿ ನಮಗೆಲ್ಲಾ ಅಚ್ಚರಿ ಜೊತಗೆ ಭಕ್ತಿ ಭಾವ ಮೂಡಿಸಿದೆ ಎಂದು ಭಕ್ತ ನಾಗೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಯಿಬಾಬ ದೇಗುಲ ದ್ವಾರದಲ್ಲಿ ಹೆಜ್ಜೇನು ಗೂಡು!
ದೇವಾಲಯದತ್ತ ಭಕ್ತರ ದಂಡು- ಅಚ್ಚರಿ ಕಣ್ತುಂಬಿಕೊಂಡು ದೇವರಿಗೆ ಪೂಜೆ
Get real time updates directly on you device, subscribe now.
Prev Post
Comments are closed.