ಧೂಳಿನ ರಸ್ತೆಗೆ ಮುಕ್ತಿ ಕಾಣಿಸಲು ಗ್ರಾಮಸ್ಥರ ಆಗ್ರಹ

277

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನ ಪುರವರ ಬ್ಯಾಲ್ಯ ನಡುವೆ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿರುವುದಲ್ಲದೇ ಗ್ರಾಮಸ್ಥರಿಗಂತೂ ಧೂಳಿನಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಘಟನೆ ನಿರಂತರವಾಗಿ ನಡೆಯುತ್ತಿದೆ.
ಈ ರಸ್ತೆ ಕಾಮಗಾರಿಯಿಂದಾಗಿ ಮಣ್ಣು ಸಾಕಷ್ಟು ಧೂಳೆಬ್ಬಿಸುತ್ತಿದ್ದು ಗುತ್ತಿಗೆದಾರ ಸಕಾಲಕ್ಕೆ ನೀರು ಹಾಕದ ಕಾರಣ ಧೂಳಿನಿಂದ ಗಂಟಲು ಬೇನೆ ಮತ್ತಿತರ ಸಾಂಕ್ರಾಮಿಕ ರೋಗ ಹರಡುತ್ತಿದೆ. ಮಕ್ಕಳಿಗಂತೂ ಧೂಳಿನಿಂದಾಗಿ ಬೇಗ ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಪ್ರತಿ ಮನೆಯಲ್ಲೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದೇ ಗೊತ್ತಾಗದ ಸ್ಥಿತಿಯಲ್ಲಿ ಗ್ರಾಮಸ್ಥರುಗಳಿದ್ದು ಕೊನೆಗೆ ಗುತ್ತಿಗೆದಾರೊಂದಿಗೆ ಮಾತಾನಾಡಿದರೆ ಯಾವಾಗಲೂ ಬೇಕಾಬಿಟ್ಟಿ ಸಂದರ್ಭದಲ್ಲಿ ಬಂದು ಕಾಮಗಾರಿ ನಡೆಯುತ್ತಿರುವ ರಸ್ತೆಗೆ ನೀರು ಹಾಕುತ್ತಾರಷ್ಟೆ, ಅದಾದ ಮೇಲೆ ಅವರನ್ನು ಯಾರೂ ಕೇಳದೆ ಇದ್ದರೆ ಆತ ತಿರುಗಿಯೂ ನೋಡಲ್ಲ, ಈಗ ಬೇಸಿಗೆಯ ಸಂದರ್ಭವಾಗಿರುವುದರಿಂದ ಸಾಕಷ್ಟು ಧೂಳು ಹಬ್ಬುತ್ತಿದೆ.
ಈ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು, ಇಲ್ಲವಾದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಗಮನಕ್ಕೆ ತಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!