ನಾಗರಿಕರ ಸಮಸ್ಯೆ ಕೇಳಿದ ಪುರಸಭೆ ಅಧ್ಯಕ್ಷ ರಂಗಸ್ವಾಮಿ

202

Get real time updates directly on you device, subscribe now.

ಕುಣಿಗಲ್‌: ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಕಾಲಕಾಲಕ್ಕೆ ಪುರಸಭೆಗೆ ಪಾವತಿ ಮಾಡಬೇಕಿರುವ ಕಂದಾಯ, ತೆರಿಗೆ ಪಾವತಿ ಮಾಡುವ ಮೂಲಕ ಪುರಸಭೆ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು ನಾಗರಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ಶುಕ್ರವಾರ ಪುರಸಭೆ ವಾರ್ಡ್‌ ನಂಬರ್‌ 19 ರಲ್ಲಿ, ಕುಣಿಗಲ್‌ ಪುರಸಭೆ ಇತಿಹಾಸದಲ್ಲೆ ಮೊದಲ ಬಾರಿಗೆ ಪುರಸಭೆ ನಡಿಗೆ ನಾಗರಿಕರ ಮನೆ ಬಾಗಿಲಿಗೆ ಕಾರ್ಯಕ್ರಮ ಹಮ್ಮಿಕೊಂಡು ವಾರ್ಡ್‌ನ ಪ್ರತಿಯೊಂದು ಬೀದಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ ಎಲ್ಲಾ ವಿಭಾಗದ ಸಿಬ್ಬಂದಿಯೊಂದಿಗೆ ತೆರಳಿ ನಾಗರಿಕರ ಸಮಸ್ಯೆ ಆಲಿಸಿ ಮಾತನಾಡಿ, ಕೊವಿಡ್‌ ಕಾರಣದಿಂದ ಸರ್ಕಾರದ ನೆರವು ನಿರೀಕ್ಷಿತ ಮಟ್ಟದಲ್ಲಿ ದೊರೆಯುತ್ತಿಲ್ಲ, ಸ್ಥಳೀಯವಾಗಿ ಆಸ್ತಿ ಮಾಲೀಕರು ತೆರಿಗೆ ಪಾವತಿ ಮಾಡಿದಲ್ಲಿ ನಾಗರಿಕರಿಗೆ ಸೌಲಭ್ಯ ನೀಡಲು ಸಹಕಾರಿಯಾಗುತ್ತದೆ. ರಸ್ತೆ, ಚರಂಡಿ ಹೆಚ್ಚಿನದಾಗಿ ಕೇಳಿದ್ದು ಹಂತ, ಹಂತವಾಗಿ ಜಾರಿಗೊಳಿಸಲಾಗುವುದು, 12 ಮಂದಿ ಇ-ಆಸ್ತಿಗೆ ಅರ್ಜಿ ನೀಡಿದ್ದು ಸ್ಥಳದಲ್ಲೆ ಅವುಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 19ನೇ ವಾರ್ಡ್‌ನಲ್ಲಿ ನೀರು ಪೂರೈಕೆಗೆ ಸಹಕಾರಿಯಾಗಿದ್ದ ಬೋರ್‌ವೆಲ್ ಗೆ ದುಷ್ಕರ್ಮಿಗಳು ಕಲ್ಲು ಹಾಕಿದ್ದು ಇಂದೆ ರಿಬೋರ್‌ ಮಾಡಿ ಮೋಟಾರ್‌ ಅಳವಡಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಾರ್ಡ್ ಸದಸ್ಯ ದೇವರಾಜ್‌, ವಾರ್ಡ್‌ನ ಅರ್ಧ ಭಾಗಲ್ಲೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ, ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಸ್ವಚ್ಛತೆ ವಿಷಯದಲ್ಲೂ ಇದೆ ಆಗಿದೆ, ಇ- ಆಸ್ತಿ ಮಾಡಲು ಸುಖಾ ಸುಮ್ಮನೆ ಸತಾಯಿಸುತ್ತಾರೆ, ಅರ್ಜಿ ಸಲ್ಲಿಸಿ ವರ್ಷವಾದರೂ ಪವತಿ ವಾರಸು ಖಾತೆ ಮಾಡಿಲ್ಲ ಎಂದು ನಾಗರಿಕರು ಅಳಲು ತೋಡಿಕೊಂಡರು.
ಅಧ್ಯಕ್ಷರ ಭೇಟಿ ವೇಳೆಯಲ್ಲಿ ಹೆಚ್ಚಿನ ನಾಗರಿಕರು ಕುಡಿಯುವ ನೀರು, ಚರಂಡಿ, ಸಮರ್ಪಕ ರಸ್ತೆ ಹಾಗೂ ಕಸ ವಿಲೇವಾರಿ ಮಾಡುವಂತೆ ಒತ್ತಾಯಿಸಿದ್ದು, ಕೆಲವರು ಇಂದಿನ ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಎಂದರು.
ಮುಖ್ಯಾಧಿಕಾರಿ ರವಿಕುಮಾರ್‌, ಅಧ್ಯಕ್ಷರ ಸೂಚನೆಯಂತೆ ಕೊವಿಡ್‌ ನಿಯಮಾವಳಿ ಪಾಲನೆ ಮಾಡಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊವಿಡ್‌ ಲಸಿಕೆ ಪಡೆಯದೆ ಇದ್ದವರು ಲಸಿಕೆ ಪಡೆದುಕೊಳ್ಳಿ, ಕೊವಿಡ್‌ ಲಕ್ಷಣಗಳಿದ್ದಲ್ಲಿ ಕೂಡಲೆ ತಪಾಸಣೆ ಮಾಡಿಸಿಕೊಂಡು ಅಗತ್ಯ ಎಚ್ಚರ ಕ್ರಮ ವಹಿಸುವ ಮೂಲಕ ಪಟ್ಟಣದಲ್ಲಿ ಕೊವಿಡ್‌ ಸಮಸ್ಯೆ ನಿಯಂತ್ರಿಸಲು ಸಹಕರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪುರಸಭೆ ವತಿಯಿಂದ ಕೆಲ ಸವಲತ್ತು ವಿತರಿಸಲಾಯಿತು. ಉಪಾಧ್ಯಕ್ಷೆ ಶಬನಾ ತಬಸ್ಸುಮ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ, ಸದಸ್ಯರಾದ ನಾಗಣ್ಣ, ಮಲ್ಲಿಪಾಳ್ಯ ಶ್ರೀನಿವಾಸ, ಉದಯ, ಆನಂದಕುಮಾರ ಕಾಂಬ್ಳಿ, ಆಸ್ಮ, ಕುಮಾರ, ಗೋಪಿ ಇತರರು ಇದ್ದು ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಇಡೀ ವಾರ್ಡ್‌ ಸ್ವಚ್ಛತೆ ಸೇರಿದಂತೆ ನೀರು ಪೂರೈಕೆ ಲೀಕೇಜ್‌ ದುರಸ್ತಿ ಕಾರ್ಯ ಭರದಿಂದ ಸಾಗಿತ್ತು.

Get real time updates directly on you device, subscribe now.

Comments are closed.

error: Content is protected !!