ತುರುವೇಕೆರೆ: ಆರೋಪಿಯನ್ನು ಬಂಧಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ದೂರು ನೀಡಿದ ದೂರುದಾರನನ್ನು ಠಾಣೆಯ ಬಳಿಗೆ ತಮ್ಮದೆ ಕಾರಿನಲ್ಲಿ ಕಳುಹಿಸಿಕೊಟ್ಟು ದಂಡಿನಶಿವರ ಠಾಣೆ ಪಿಎಸ್ಐಗೆ ಜಿಲ್ಲಾ ಎಸ್.ಪಿ.ರಾಹುಲ್ ಕುಮಾರ್ ಶಹಾಪೂರ್ ವಾಡ್ ಚುರುಕು ಮುಟ್ಟಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ದಂಡಿನಶಿವರ ಠಣಾ ವ್ಯಾಪ್ತಿಯಲ್ಲಿ ಎರಡು ಕುಟುಂಬಗಳ ನಡುವೆ ಗಲಭೆ ನಡೆದಿತ್ತು, ಈ ವೇಳೆ ನಾಗೇಂದ್ರಪ್ಪ ಎಂಬುವರ ಹಲ್ಲೆ ನಡೆಸಿದ ಆರೋಪದ ಮೇರೆಗೆ ಶಿವಕುಮಾರ್ ಮತ್ತು ಚಂದನ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಹಲ್ಲೆ ಆರೋಪಿಗಳನ್ನು ಬಂಧಿಸುವಂತೆ ನಾಗೇಂದ್ರಪ್ಪ ಸಂಬಂಧಿಕರು ಮನವಿ ಮಾಡುತ್ತಿದ್ದರಾದರೂ ದಂಡಿನಶಿವರ ಪೊಲೀಸರು ವಿಳಂಬ ನೀತಿ ಅನುಸರಿಸಿದ್ದಾರೆ. ಬಂಧನಕ್ಕೆ ಮತ್ತೆ ಒತ್ತಾಯಿಸಿದಾಗ ಕಾರೊಂದನ್ನು ಕಳುಹಿಸುವಂತೆ ಪೊಲೀಸರು ನಾಗೇಂದ್ರಪ್ಪ ಸಂಬಂಧಿಕರಿಗೆ ಹೇಳಿದ್ದರೆನ್ನಲಾಗಿದೆ, ಇದರಿಂದ ಬೇಸತ್ತ ದೂರುದಾರರು ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಾಪೂರ ವಾಡ್ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ, ಇದಕ್ಕೆ ಸ್ಪಂದಿಸಿದ ಜಿಲ್ಲಾ ಎಸ್ಪಿ ಯವರು ದೂರುದಾರನ ಸಹಿತ ತಮ್ಮ ಕಾರನ್ನು ದಂಡಿನಶಿವರ ಠಾಣೆಗೆ ಗುರುವಾರ ಕಳುಹಿಸುವ ಮೂಲಕ ಪಿಎಸ್ಐ ಶಿವಲಿಂಗಪ್ಪ ಮತ್ತು ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದರು.
ಎಸ್ಪಿ ಯವರ ಕಾರು ದೂರುದಾರನ ಸಹಿತ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಮ್ಮ ಕರ್ತವ್ಯ ಪ್ರಜ್ಞೆ ನೆನಪಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ. ಶುಕ್ರವಾರ ನಸುಕಿನಲ್ಲಿ ಪಿಎಸ್ಐ ಶಿವಲಿಂಗಯ್ಯ ಮತ್ತು ಸಿಬ್ಬಂದಿ ಆರೋಪಿ ಚಂದನ್ (28) ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಆರೋಪಿ ಬಂಧಿಸದ ಪೊಲೀಸರ ನಡೆಯನ್ನು ವಿಭಿನ್ನವಾಗಿ ತಿದ್ದಲು ಎಸ್ಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಮಾಡಿದ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
Get real time updates directly on you device, subscribe now.
Comments are closed.