ಎಸ್.ಬಿ.ಐ ಬ್ಯಾಂಕ್ ಸಿಬ್ಬಂದಿ ವರ್ತನೆಗೆ ಗ್ರಾಹಕರ ಆಕ್ರೋಶ

588

Get real time updates directly on you device, subscribe now.

ಕೊರಟಗೆರೆ: ಭಾರತೀಯ ಸ್ಟೇಟ್ ಬ್ಯಾಂಕ್ ಕೊರಟಗೆರೆ ಶಾಖೆಯಲ್ಲಿ 55 ಸಾವಿರಕ್ಕೂ ಅಧಿಕ ಗ್ರಾಹಕರ ಖಾತೆಗಳಿವೆ, ಬ್ಯಾಂಕ್ನಲ್ಲಿ ಪ್ರತಿನಿತ್ಯ 4 ಸಾವಿರಕ್ಕೂ ಅಧಿಕ ಗ್ರಾಹಕರಿಂದ 2 ಕೋಟಿಗೂ ಅಧಿಕ ವಹಿವಾಟು ನಡೆಯಲಿದೆ, ಬ್ಯಾಂಕ್ನಲ್ಲಿ ಕೆಲಸ ಮಾಡುವ ಪ್ರಭಾರ ವ್ಯವಸ್ಥಾಪಕ, ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿ ಉಡಾಫೆಯ ಉತ್ತರ ಮತ್ತು ನಿರ್ಲಕ್ಷದ ಮಾತಿನಿಂದ ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳಾ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ.
ಕೊರಟಗೆರೆ ಪಟ್ಟಣದ ಟಿ.ಎಂ.ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗೆ ಗ್ರಾಮೀಣ ಮತ್ತು ಪಟ್ಟಣದಿಂದ ಪ್ರತಿನಿತ್ಯ 4 ಸಾವಿರಕ್ಕೂ ಅಧಿಕ ಗ್ರಾಹಕರು ವಹಿವಾಟಿಗೆ ಬರುತ್ತಾರೆ, ಗ್ರಾಹಕರಿಗೆ ಬ್ಯಾಂಕ್ನ ಆವರಣದಲ್ಲಿ ಶೌಚಾಲಯ, ಕುಡಿಯುವ ನೀರು ಮತ್ತು ಪಾರ್ಕಿಂಗ್ ವ್ಯವಸ್ಥೆಯು ಮರೀಚಿಕೆ ಆಗಿದೆ, ಅಕ್ಷರ ಜ್ಞಾನ ಇಲ್ಲದಿರುವ ಗ್ರಾಮೀಣ ಪ್ರದೇಶದ ಗ್ರಾಹಕರ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ. ಮಹಿಳೆಯರ ನೋವಿನ ವೇದನೆ ಹೆಚ್ಚಾಗಿ ಬ್ಯಾಂಕ್ನ ವ್ಯವಹಾರವನ್ನೇ ನಿಲ್ಲಿಸುವ ಪ್ರಯತ್ನ ನಡೆದಿದೆ.
ಗ್ರಾಮೀಣ ಪ್ರದೇಶದಿಂದ ಅಕ್ಷರದ ಜ್ಞಾನವೇ ಇಲ್ಲದ ಸಾವಿರಾರು ಗ್ರಾಹಕರು ಬ್ಯಾಂಕ್ಗೆ ವಹಿವಾಟಿಗೆ ಆಗಮಿಸುತ್ತಾರೆ. ಬ್ಯಾಂಕ್ನ ಆವರಣದಲ್ಲಿ ಇಂತಿಷ್ಟು ಹಣ ಕೊಟ್ಟರೆ ಮಾತ್ರ ಖಾಸಗಿ ವ್ಯಕ್ತಿಗಳು ಬರೆದು ಕೊಡುತ್ತಾರೆ, ಇಲ್ಲವಾದರೆ ಗ್ರಾಹಕರು ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ವಹಿವಾಟಿಗೆ ಬರುವ ಗ್ರಾಹಕರಿಗೆ ಬ್ಯಾಂಕ್ನಿಂದ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ ಹಾಗೂ ಗ್ರಾಹಕರ ಜೊತೆ ಉತ್ತಮ ಬಾಂಧವ್ಯ ಇಲ್ಲದೆ ಸಮಸ್ಯೆ ಪ್ರತಿನಿತ್ಯ ಹೆಚ್ಚಾಗಿ ಗ್ರಾಹಕರಿಂದ ತಮ್ಮ ಬ್ಯಾಂಕ್ನ ಖಾತೆ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಬ್ಯಾಂಕ್ನಲ್ಲಿ ಆಗುತ್ತಿರುವ ಕಿರಿಕಿರಿಗೆ ಕಡಿವಾನಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!