ಕೊರಟಗೆರೆ: ಹೊಟ್ಟೆನೋವು ತಾಳಲಾರದೆ 22 ವರ್ಷದ ಮಹಿಳೆಯು ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಮದ ಭೀಮಯ್ಯನ ಮಗನಾದ ಹರೀಶನ ಮಡದಿಯಾದ ಚಂದನ (22) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಚಂದನಳ ಗಂಡ ಹರೀಶ ಬೆಂಗಳೂರಿನ ಯಲಹಂಕ ಡಿ-ಮಾರ್ಟ್‌ನಲ್ಲಿ ಕೆಲಸ, ಮಡದಿಗೆ ಹೊಟ್ಟೆನೋವು ಹೆಚ್ಚಾದ ಪರಿಣಾಮ ಜ.11 ರಂದು ಇಬ್ಬರು ಬೆಂಗಳೂರಿನಿಂದ ಬೈಚಾಪುರ ಗ್ರಾಮಕ್ಕೆ ಆಗಮಿಸಿದ ನಂತರ ದುರ್ಘಟನೆ ನಡೆದಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
Get real time updates directly on you device, subscribe now.
Next Post
Comments are closed.