ಶಾಲೆಯಲ್ಲಿ ವಿದ್ಯಾರ್ಥಿಗೆ ಗಾಯ- ತಂದೆ ಆಕ್ರೋಶ

121

Get real time updates directly on you device, subscribe now.

ಕುಣಿಗಲ್‌: ತಮ್ಮ ಮಗನಿಗೆ ಆದ ಗತಿ ಬೇರಾವ ಮಕ್ಕಳಿಗೂ ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಯ ತಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೊರೆ ಹೋಗಿರುವ ಘಟನೆ ನಡೆದಿದೆ.
ಪಟ್ಟಣದಲ್ಲಿರುವ ಜಿಕೆಬಿಎಂಎಸ್‌ ಶಾಲೆಯ ಎಲ್‌ಕೆಜಿ ವಿಭಾಗಕ್ಕೆ ಅನಿಫ್‌ ಎಂಬುವರು ತಮ್ಮ ಮಗ ಸುಲೇಮಾನ್‌ ಎಂಬಾತನ್ನು ಸೇರಿಸಿದ್ದರು, ಸೋಮವಾರ ತರಗತಿ ಅವಧಿಯಲ್ಲಿ ಬೇರೊಬ್ಬ ವಿದ್ಯಾರ್ಥಿ ತಳ್ಳಿದ್ದರಿಂದ ಸುಲೇಮಾನ್‌ ತಲೆಗೆ ತೀವ್ರ ಪೆಟ್ಟಾಗಿದ್ದು ಶಾಲೆಯ ಶಿಕ್ಷಕರು ತಂದೆಗೆ ಕರೆ ಮಾಡಿ ಸಣ್ಣ ಗಾಯವಾಗಿದೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಮಗನಿಗೆ ಗಾಯವಾದ್ದರಿಂದ ಆಘಾತಗೊಂಡ ಅನೀಫ್‌ ಚಿಕಿತ್ಸೆಗೆ ಮಗನನ್ನು ಆಸ್ಪತ್ರೆಗೆ ತಂದಾಗ ತಲೆಯಲ್ಲಿ ತೀವ್ರ ಗಾಯವಾಗಿ ನಾಲ್ಕು ಹೊಲಿಗೆ ಹಾಕಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಘಟನೆ ಬಗ್ಗೆ ಆಕ್ರೊಶಗೊಂಡ ಅನೀಫ್‌ ಶಿಕ್ಷಕರನ್ನು ಪ್ರಶ್ನಿಸಿದಾಗ ಶಿಕ್ಷಕರು ಕ್ಷಮೆಯಾಚಿಸಿ ಅಷ್ಟೇನು ಆಗಿಲ್ಲ ಎಂಬ ಧೋರಣೆ ತಳೆದಿದ್ದಾರೆ. ಘಟನೆ ಖಂಡಿಸಿದ ಪೋಷಕ ಅನೀಫ್‌, ಶಿಕ್ಷಕರು ತರಗತಿಯಲ್ಲಿ ಮಕ್ಕಳಿದ್ದಾಗ ನೋಡಿಕೊಳ್ಳಬೇಕು, ಅದು ಬಿಟ್ಟು ಈ ರೀತಿ ನಿರ್ಲಕ್ಷ್ಯವಹಿಸಿರುವುದು ಖಂಡನೀಯ, ಶಿಕ್ಷಕರ ನಿರ್ಲಕ್ಷ್ಯವೆ ಈ ಘಟನೆಗೆ ಕಾರಣವಾಗಿದ್ದು ನನ್ನ ಮಗನಿಗೆ ಆದ ರೀತಿ ಬೇರೆ ಇನ್ನಾವ ಮಕ್ಕಳಿಗೂ ಶಾಲೆಯಲ್ಲಿ ಆಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಂಗಳವಾರ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!