ಶಿರಾ: ವಿಪ್ರ ಸಂಘದ ಅಧ್ಯಕ್ಷ ಜಿಎಲ್ಆರ್ ಇನ್ನಿಲ್ಲ

189

Get real time updates directly on you device, subscribe now.


ಶಿರಾ: ತಾಲ್ಲೂಕು ವಿಪ್ರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಲ್.ರಾಮಣ್ಣ (80) ಬುಧವಾರ ಬೆಳಗ್ಗೆ 4.30 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ, ಶಿಕ್ಷಣ ಇಲಾಖೆಯಲ್ಲಿ ಸಬ್ಜೆಕ್ಟ್ ಇನ್ಸ್ಪೆಕ್ಟರ್ ಆಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ಜಿ.ಎಲ್.ಆರ್. ಎಂದೇ ಗುರುತಿಸಲ್ಪಡುತ್ತಿದ್ದ ಅವರು, ಕೆಲಸ ನಿರ್ವಹಿಸಿದ ಕಡೆಯಲ್ಲ ತಮ್ಮದೇ ಪ್ರತ್ಯೇಕ ಛಾಪು ಮೂಡಿಸುವ ಮೂಲಕ ಅನೇಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು.
ನಿವೃತ್ತಿ ನಂತರ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತ ನೌಕರರ ಭವನ ನಿರ್ಮಾಣ ಮತ್ತು ನಿವೃತ್ತರ ವಿವಿಧ ಸವಲತ್ತುಗಳಿಗಾಗಿ ಶ್ರಮಿಸಿದ್ದರು. ತಾಲ್ಲೂಕು ವಿಪ್ರ ಸಂಘದ ಅಧ್ಯಕ್ಷರಾಗಿ ಹತ್ತಾಾರು ವರ್ಷ ಸೇವೆ ಸಲ್ಲಿಸಿದ್ದ ಅವರು ವಿಪ್ರ ಸಂಘಟನೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹಿಗಳಾಗಿ ಪಾಲ್ಗೊಳ್ಳುತ್ತಿದ್ದರು.
ಕೆಲವೇ ದಿನಗಳ ಹಿಂದೆ ಹೃದ್ರೋಗಕ್ಕೆ ಗುರಿಯಾಗಿದ್ದ ಅವರು ಮಂಗಳವಾರ ತಡರಾತ್ರಿ ಎದೆನೋವಿನಿಂದ ಬಳಲಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಮತ್ತು ಕುಟುಂಬ ವರ್ಗದವರು, ಅಪಾರ ಬಂಧುಮಿತ್ರರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಬುಧವಾರ ಮದ್ಯಾಹ್ನದ ವೇಳೆಗೆ ಶಿರಾದ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸಲಾಗಿದೆ. ರಾಮಣ್ಣ ಅವರ ಸಾವಿಗೆ ತಾಲ್ಲೂಕು ವಿಪ್ರ ಸಂಘ, ನಿವೃತ್ತ ನೌಕರರ ಸಂಘ, ಜಿಲ್ಲಾ ಬ್ರಾಹ್ಮಣ ಸಭಾ, ನಗರಸಭಾ ಸದಸ್ಯರು, ನಿವೃತ್ತ ಶಿಕ್ಷಕರು, ವಿದ್ಯಾರ್ಥಿ ಬಳಗ ಸೇರಿದಂತೆ ವಿವಿಧ ಸಂಘಗಳು ತೀವ್ರ ವಿಷಾದ ವ್ಯಕ್ತಪಡಿಸಿವೆ.

Get real time updates directly on you device, subscribe now.

Comments are closed.

error: Content is protected !!