ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ಕೊಡಿ

ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ದ ಚಿತ್ರ ಅವಕಾಶಕ್ಕೆ ಮನವಿ

149

Get real time updates directly on you device, subscribe now.

ತುಮಕೂರು: ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೇರಳದಿಂದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಸ್ತಬ್ದ ಚಿತ್ರ ಭಾಗವಹಿಸಲು ಅವಕಾಶ ನೀಡದ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಮತ್ತೊಮ್ಮೆ ಅವಕಾಶ ನೀಡುವಂತೆ ಒತ್ತಾಯಿಸಿ, ಆರ್ಯ ಈಡಿಗರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ನಗರದ ಅಮರಜ್ಯೋತಿ ನಗರದಲ್ಲಿ ಇರುವ ಆರ್ಯ ಈಡಿಗ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಸಂಘದ ಅಧ್ಯಕ್ಷ ಕೆ.ವಿ.ಅಜಯ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಮುಖಂಡರು, ನಾರಾಯಣ ಗುರು ಅವರ ಸ್ತಬ್ದ ಚಿತ್ರ ಭಾಗವಹಿಸಲು ಅವಕಾಶ ನೀಡದ ಕೇಂದ್ರ ಸರಕಾರದ ನೀತಿ ಖಂಡಿಸಿದರು.
ಈ ವೇಳೆ ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಕೆ.ವಿ.ಅಜಯ್‌ ಕುಮಾರ್‌ ಮಾತನಾಡಿ, ತನ್ನ ಇಡಿ ಜೀವನವನ್ನೇ ದಲಿತು, ಹಿಂದುಳಿದವರ ಏಳಿಗೆಗೆ ಮೀಸಲಿಟ್ಟು, ನುಡಿದಂತೆ ನಡೆಯುವ ಮೂಲಕ ತಳ ಸಮುದಾಯಗಳಲ್ಲಿ ಬದಲಾವಣೆ ತಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನೀಡದೆ ಇಡೀ ದೇಶದ ಹಿಂದುಳಿದ ಸಮುದಾಯಕ್ಕೆ ಅಪಮಾನ ಮಾಡಿದೆ, ಇದು ಖಂಡನೀಯ, ನಿಯಮಗಳು ಏನೇ ಇರಲಿ ದೇವರನಾಡು ಎಂದು ಕರೆಯುತ್ತಿದ್ದ ಕೇರಳ ರಾಜ್ಯದಲ್ಲಿದ್ದ ಅಸಮಾನತೆ, ಅಸ್ಪಷ್ಯತೆ, ಸೆರಗಿನ ತೇರಿಗೆ, ದೇವಾಲಯಗಳಿಗೆ ಪ್ರವೇಶ ನಿರಾಕರಣೆಯಂತಹ ಸಾಮಾಜಿಕ ಅನಿಷ್ಠಗಳ ವಿರುದ್ಧ ತಮ್ಮದೆ ಶೈಲಿಯಲ್ಲಿ ಹೋರಾಟ ನಡೆಸುವ ಮೂಲಕ ತಳ ಸಮುದಾಯಗಳಲ್ಲಿ ಬದಲಾವಣೆ ತಂದವರು, ಅವರ ಸ್ತಬ್ದ ಚಿತ್ರ ಗಣರಾಜೋತ್ರವ ಪೆರೇಡ್‌ನಲ್ಲಿ ಭಾಗವಹಿಸುವ ಕೇರಳ ರಾಜ್ಯದ ಪ್ರಸ್ತಾಪ ತಿರಸ್ಕರಿಸಿರುವುದು ಸರಿಯಲ್ಲ, ಕೂಡಲೇ ಕೇಂದ್ರ ಸರಕಾರ ಈ ವಿಚಾರದಲ್ಲಿ ಮರು ಪರಿಶೀಲನೆ ನಡೆಸಿ, ನಾರಾಯಣ ಗುರುಗಳ ಸ್ತಬ್ದ ಚಿತ್ರ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು, ಇಲ್ಲದಿದ್ದಲ್ಲಿ ಇಡೀ ದೇಶದ ಹಿಂದುಳಿದ ವರ್ಗಗಳ ಜನರು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಣ್ಣ ಮಲ್ಲಸಂದ್ರ ಮಾತನಾಡಿ, ದೇವರ ನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ ನಡೆಯುತ್ತಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಹಲವಾರು ಸುಧಾರಣೆ ತಂದ ನಾರಾಯಣ ಗುರುಗಳ ಕಾರ್ಯ ಮೆಚ್ಚಿ ಸ್ವತಃ ಮಹಾತ್ಮಗಾಂಧಿ ಸೇರಿದಂತೆ ಅನೇಕ ಗಣ್ಯರು ಅವರ ಬಳಿ ತೆರಳಿ, ಅವರ ತತ್ವ, ಸಿದ್ಧಾಂತ ಕೊಂಡಾಡಿದ್ದರು, ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಹ ನಾರಾಯಣ ಗುರುಗಳ ಆದರ್ಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಆದರೆ ಗಣರಾಜೋತ್ಸವ ಪೆರೇಡ್ ನಲ್ಲಿ ಅವರ ಸ್ತಬ್ದ ಭಾಗವಹಿಸಲು ಅವಕಾಶ ನಿರಾಕರಿಸಿರುವುದು ಇಡೀ ದೇಶದ ಹಿಂದುಳಿದ ವರ್ಗಗಳಿಗೆ ತೀವ್ರ ನೋವುಂಟು ಮಾಡಿದೆ, ಕೇಂದ್ರ ಸರಕಾರ ಆಗಿರುವ ಪ್ರಮಾದ ಸರಿಪಡಿಸಲು ಗಣರಾಜೋತ್ಸವ ಪೆರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಭಾಗವಹಿಸಲು ಅವಕಾಶ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ, ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ, ನಮ್ಮ ಬೇಡಿಕೆ ಮನ್ನಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಆಡಳಿತಾಧಿಕಾರಿಗಳಿಗೆ ಸಲ್ಲಿಸಲಾಯಿತು. ಜಿಲ್ಲಾ ಆರ್ಯ ಈಡಿಗರ ಸಂಘದ ಪದಾಧಿಕಾರಿಗಳಾದ ಎಂ.ನಾಗರಾಜು, ಲಕ್ಷ್ಮಿನಾರಾಯಣ, ಸಿ.ನಾರಾಯಣ್‌, ಆರ್‌.ನಾರಾಯಣಸ್ವಾಮಿ, ರಾಜೇಶಗೌಡ ಸೇರಿದಂತೆ ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!