ಸಂತ ವೇಮನ ದಕ್ಷಿಣ ಭಾರತದ ಶ್ರೇಷ್ಠ ಕವಿ: ಜಿ.ಎಸ್.ಬಿ

124

Get real time updates directly on you device, subscribe now.

ತುಮಕುರು: ದಕ್ಷಿಣ ಭಾರತದ ಶ್ರೇಷ್ಠ ಕವಿ ಹಾಗೂ ವೈಚಾರಿಕ ಸಂತ ತೆಲುಗಿನ ವೇಮನ ಎಂದು ಸಂಸದ ಜಿ.ಎಸ್‌.ಬಸವರಾಜು ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ರೆಡ್ಡಿ ಜನಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡದ ಸರ್ವಜ್ಞನಂತೆಯೇ ತೆಲುಗು ಭಾಷಾ ಸಾಹಿತ್ಯಕ್ಕೆ ವೇಮನ ಅವರು ಅಪಾರ ಕೊಡುಗೆ ನೀಡಿದ್ದಾರೆ. ವೈಚಾರಿಕತೆಯ ಮೂಲಕ ದಕ್ಷಿಣ ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹಾವ್ಯಕ್ತಿ ಎನಿಸಿದ್ದಾರೆ ಎಂದು ತಿಳಿಸಿದರು.
ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿ ವೇಮನನನ್ನು ಪೂಜಿಸುತ್ತಾರೆ, ನಮ್ಮಲ್ಲಿಯೂ ಈ ಆಚರಣೆ ಜಾರಿಯಲ್ಲಿದೆ, ಕಾವ್ಯ, ತ್ರಿಪದಿ ಹಾಗೂ ಷಟ್ಪದಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾವ್ಯ ರಚಿಸಿದ ಹೆಗ್ಗಳಿಕೆ ಮಹಾಯೋಗಿ ವೇಮನ ಅವರದ್ದು, ಮುಂದಿನ ದಿನಗಳ ಆಗು ಹೋಗುಗಳನ್ನು ತಮ್ಮ ಕಾವ್ಯಗಳಲ್ಲಿ ರಚಿಸುವುದರ ಮೂಲಕ ಇಂದಿನ ಜನತೆಗೆ ಮಾದರಿಯಾಗಿದ್ದಾರೆ, ಇಂತಹ ಮಹಾನ್‌ ವ್ಯಕ್ತಿಗಳ ಚರಿತ್ರೆ ಓದಿ ನಮ್ಮ ಮುಂದಿನ ಜೀವನವನ್ನು ಸರಿಯಾದ ಮಾರ್ಗದಲ್ಲಿ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಿ.ಎಂ.ರವಿಕುಮಾರ್‌ ಹಾಗೂ ಮೆಲ್ವಿಚಾರಕ ಡಿ.ವಿ.ಸುರೇಶ್‌, ನಾಟಕ ಅಕಾಡೆಮಿ ಸದಸ್ಯ ಟಿ.ಎಸ್‌. ಸದಾಶಿವಯ್ಯ ಹಾಗೂ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ ಇದ್ದರು.

Get real time updates directly on you device, subscribe now.

Comments are closed.

error: Content is protected !!