ಶ್ರೀರಾಮ ನವಮಿಯಂದು ಪ್ರತಿಯೊಬ್ಬರ ಮನೆಯಲ್ಲಿ ನಿರಂತರ ರಾಮ ಭಜನೆ, ಹರಿಕಥೆ ಕಂಡು ಬರುವುದು ಸರ್ವೇಸಮಾನ್ಯವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆ ಇರುವ ಉತ್ತರಪ್ರದೇಶದಲ್ಲಿಯೂ, ಎಲ್ಲೆಲ್ಲಿ ರಾಮಕಥಾ, ಭಜನೆ, ಹಾಡು, ಹರಿಕಥೆಯ ವೈಭವೋಪೇತ ಕಾರ್ಯಕ್ರಮಗಳು ವರ್ಣನಾತೀತ, ಭಾರತದೇಶದ ಎಲ್ಲಾ ಜನಗಳು, ವರ್ಗೀಯರೂ ಒಟ್ಟಾಗಿ ಆಚರಿಸುವ ಹಬ್ಬ.
ಭಾರತೀಯ ಸಂಸ್ಕೃತಿಯ ಪರಮೋಚ್ಛ ಆದರ್ಶದ ಕೇಂದ್ರ ಬಿಂದುವೇ ಶ್ರೀರಾಮಚಂದ್ರನು. ಅವನ ರೂಪದಲ್ಲಿ ಮೌಲ್ಯಗಳ ಪರಿಪೂರ್ಣ ಅವಿಷ್ಕಾರ. ಶ್ರೀರಾಮನ ಚರಿತ್ರೆಯಲ್ಲಿ ಕಲ್ಲು ಕರುಗುವ ರಸಧಾರೆ ಇದೆ. ಬುದ್ಧಿ ಜೀವಿಗಳು ತಲೆದೂಗುವ ಪ್ರಜ್ಞಾವಂತಿಕೆ ಸಹ ಇವೆ. ಹೃದಯತುಂಬಿ ಬರುವ ಉದಾಹರಣೆಗಳಿವೆ. ಮನುಷ್ಯರೂಪಿ ಭಗವಂತ, ಇತಿಹಾಸದ ಪುಟಗಳಲ್ಲಿ ಸಾಮಾನ್ಯನಂತೆ ಬದುಕಲಿಲ್ಲ. ವಿಷ್ಣುವಿನ ಪ್ರತಿರೂಪವಾದ ಅವರ ಅಂಶವಾದ ಶ್ರೀರಾಮನ ಪ್ರಭಾವ, ಪರಿಣಾಮಗಳು ಸೂರ್ಯ-ಚಂದ್ರರಿರುವವರೆಗೂ ಅಜರಾಮರ. ಯುಗಪುರುಷನಾದ ಅವನು ಲೋಕಕ್ಕೆ ಸದಾ ಪ್ರಸ್ತುತ. ಸರ್ವಕಾಲೀನ ಸೂರ್ಯ-ಚಂದ್ರ, ನಕ್ಷತ್ರಗಳು, ಗ್ರಹಗಳು ಇಂದಿನ ಯುಗದಲ್ಲೂ ಉಪಯುಕ್ತ ಆದರ್ಶಪ್ರಾಯ, ಹಾಗೆಯೇ ಶ್ರೀರಾಮಚಂದ್ರನೂ ಸಹ ಜಾತಿಮತದ ಪರಿವೆ ಇಲ್ಲದೇ ಪೂಜಿಸಲ್ಪಡುವದೇವ! ಇಂತಹ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನ ಹುಟ್ಟಿದ ದಿನ ಆಚರಿಸುವ ಹಬ್ಬವೇ ಶ್ರೀರಾಮನವಮಿ.
ಶ್ರೀರಾಮ, ಸೀತಾದೇವಿ ಅವರ ಫೋಟೋಗಳು, ದೇವಾಲಯಗಳಲ್ಲಿ, ಮಠ-ಮಂದಿರಗಳಲ್ಲಿ ಕಾಣಸಿಗುತ್ತವೆ. ಸೀತಮ್ಮನವರು ಇಲ್ಲದ ಶ್ರೀರಾಮನ ಫೋಟೋವನ್ನು ನಾವು ಕಲ್ಪಿಸಿಕೊಳ್ಳುವುದು ಸಾಧ್ಯವೇಇಲ್ಲ. ಪ್ರಾಯಶಃ ಆಕೆ ಇಲ್ಲದಿದ್ದರೆ, ಶ್ರೀರಾಮಚಂದ್ರನನ್ನು ಭಕ್ತರು, ಪ್ರಭುವೆಂದು ಗುರುತಿಸಲಾರರೇನೋ, ಶ್ರೀಮಹಾವಿಷ್ಣುವಿನ ಸಪ್ತಮಯ ಅವತಾರವೇ ಶ್ರೀರಾಮಚಂದ್ರನು. ಚೈತ್ರಮಾಸದ ಶುಕ್ಲಪಕ್ಷದ, ಒಂಭತ್ತನೇ ದಿನ ಶ್ರೀರಾಮನವಿಯಂದು ಭಕ್ತರು ರಾಮನವಮಿ ಹಬ್ಬ ಮಾಡುತ್ತಲೇ ಬಂದಿದ್ದಾರೆ. ಆ ದಿನಗಳಲ್ಲಿ ನಿರಂತರವಾಗಿ ರಾಮಾಯಣ ಪಾರಾಯಣ ಮಾಡುತ್ತಾರೆ. ಸಂಜೆಯಾದರೆ ಹರಿಕಥೆ, ರಾಮಲೀಲೆಯ ಪ್ರದರ್ಶನಗಳು ಭಕ್ತಿ ಪೂರ್ವಕವಾಗಿ ಆಚರಿಸಲ್ಪಡುತ್ತದೆ.
ರಾಮಾಯಣದ ಸನ್ನಿವೇಶ ಘಟನೆಗಳನ್ನು ನಾಟಕ ರೂಪಗಳಲ್ಲಿ, ಪ್ರದರ್ಶನಗಳನ್ನು ಮಾಡುತ್ತಾರೆ. ಶ್ರೀರಾಮನವಮಿಯಂದು ಪ್ರತಿಯೊಬ್ಬರ ಮನೆಯಲ್ಲಿ ನಿರಂತರ ರಾಮಭಜನೆ, ಹರಿಕಥೆ ಕಂಡುಬರುವುದು ಸರ್ವೇ ಸಮಾನ್ಯವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ.
ಶ್ರೀರಾಮನ ಜನ್ಮಭೂಮಿಯಾದಅಯೋಧ್ಯೆ ಇರುವ ಉತ್ತರಪ್ರದೇಶದಲ್ಲಿಯೂ, ಎಲ್ಲೆಲ್ಲೂ ರಾಮಕಥಾ, ಭಜನೆ, ಹಾಡು, ಹರಿಕಥೆಯ ವೈಭವೋಪೇತ ಕಾರ್ಯಕ್ರಮಗಳು ವರ್ಣನಾತೀತ. ಭಾರತ ದೇಶದ ಎಲ್ಲಾ ಜನಗಳು, ವರ್ಗೀಯರೂ ಒಟ್ಟಾಗಿ ಆಚರಿಸುವ ಹಬ್ಬ, ಈ ಶ್ರೀರಾಮನವಮಿ. ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆಗಳಾದರೂ, ಸಹಾ ಹಬ್ಬದ ಆಚರಣೆ ಒಂದೇ ಇರುತ್ತದೆ. ಶ್ರೀರಾಮನವಮಿ ರಾಮ ಹುಟ್ಟಿದ ದಿನವೂ ಹೌದು. ಮರುದಿನ ಅವರ ಪಟ್ಟಾಭಿಷೇಕವು ಹೌದು. ದಶಮಿ ದಿನ ಅವನ ಪಟ್ಟಾಭಿಷೇಕದ ದಿನ.
ಸೀತಾರಾಮ ಕಲ್ಯಾಣ ಕಾರ್ಯಕ್ರಮ ನೋಡುವುದೇ ಚಂದ! ಪ್ರತಿನಗರ-ನಗರಗಳಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಹುಡುಗರು ಕೂಡಾ ಸೀತಾರಾಮ ಕಲ್ಯಾಣ ಕಾರ್ಯಕ್ರಮದಲ್ಲಿ, ಮುತ್ತಿನ ಅಕ್ಷತೆ ಮಾಡಿಕೊಂಡು, ತರತರದ ಪಾನಕಗಳು, ಮಜ್ಜಿಗೆ, ಕೋಸಂಬರಿಯ ನೈವೇದ್ಯಗಳು, ಬೀದಿ-ಬೀದಿಯಲ್ಲೂ ಭಕ್ತರು ಭಗವಂತನಿಗೆ ಅರ್ಪಿಸಿ, ಪ್ರಸಾದವನ್ನು ಹಂಚುವ ದೃಶ್ಯವನ್ನು ಕಾಣುತ್ತೇವೆ. ದೇವರಿಗೆ ಅರ್ಪಿಸುವ ನಾದಸ್ವರ ಸದಾ ಆಕರ್ಷಣೀಯ.
ಭಾರತೀಯರಿಗೆ ರಾಮ ಒಬ್ಬದೇವರು ಮಾತ್ರ ಅಲ್ಲ, ಧರ್ಮ ಸ್ವರೂಪಿಯೂ, ಪಿತೃವಾಕ್ಯ ಪರಿಪಾಲಕ, ಏಕಪತ್ನೀವ್ರತಧಾರಿ, ಧರ್ಮದ ರಕ್ಷಣೆಗೆ ಪರತೊಟ್ಟಂತೆ ವಿಷ್ಣುವರ್ಧನ !ರಾಮ ಇಲ್ಲದೆ, ರಾಮದೇವಸ್ಥಾನ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದೇ ಅಸಂಭವ! ಸೀತೆಯಕಥೆಕಲ್ಪಿತ ಕಥೆಯಲ್ಲ, ಮಾನವಾತೀತ ವ್ಯಕ್ತಿಗಳ ಬಗ್ಗೆ ಸಾಮಾನ್ಯರಲ್ಲಿ ಇರುವ ಭಾವಗಳ ಪರಂಪರೆಯಲ್ಲ. ಅಲಗರದಲ್ಲಿ ಒಂದು ಪ್ರತ್ಯೇಕ ಘಟನೆಯಲ್ಲ. ಇದುಒಂದು ಪವಿತ್ರಚರಿತ್ರೆ. ಹಿಂದೂಗಳೆಲ್ಲರಿಗೂ, ಬಾಲ್ಯದಿಂದಲೇ ಪುರಾಣ, ಆಧ್ಯಾತ್ಮಿಕ ವಿಚಾರವೂ ಕೂಡ ಹೌದು. ಹೆಣ್ಣು ಮಕ್ಕಳು ಜನಿಸಿದ ದಿನದಿಂದ ದೊಡ್ಡವರಾಗುವವರೆಗೂ ಹೇಗೆ ಇರಬೇಕು? ಬೆಳೆದ ಮೇಲೆ ಹೇಗಿರಬೇಕು?ಎಂಬ ಜನಜನಿತ ವಿಚಾರವಾಗಿದೆ.
ಸೀತಾಮಾತೆ ಜಗತ್ತಿನ ಮಹಿಳೆಯರಿಗೆ ಒಂದು ಉತ್ತಮ ನಡವಳಿಕೆಗೆ ಮತ್ತೊಂದು ಹೆಸರು. ಸೀತಾ ಸಕಲ ಸಂಪನ್ನೆಯಾದ ಎಲ್ಲಾ ಗುಣಗಳನ್ನು ಹೊಂದಿರುವ ಸ್ತ್ರೀಯನ್ನು ಸಾಧ್ವೀ ಸೀತೆಯೆಂದು ವರ್ಣಿಸುವುದು, ಸಾಮಾನ್ಯ ಸೀತಮ್ಮ ಗುಣಗಳ ಭಂಡಾರ! ಉನ್ನತ ಶಿಖರ ಆಕೆ, ಹತ್ತಿರ ಇರದಿದ್ದಾಗ ಚಿನ್ನದ ಸೀತೆಯನ್ನು ಮಾಡಿಸಿಕೊಂಡು ಅಶ್ವಮೇಧಯಾಗವನ್ನು ಶ್ರೀರಾಮಚಂದ್ರನು ಮಾಡಿದ್ದು ಕೂಡ ಜನಜನಿತವಾಗಿದೆ.ಅಂದರೆ ಸೀತಾರಾಮರ ಆದರ್ಶ ಲೋಕಕ್ಕೆ ಎಷ್ಟು ಪವಿತ್ರ ಮತ್ತು ಸುಂದರ! ಮಹಿಳೆಯರಿಗೆ ಆದರ್ಶಪ್ರಾಯವಾದದೇವತೆ. ಗಂಡನನ್ನುದೇವರೆಂದು ನಂಬಿ, ತನ್ನ ಆತ್ಮಗೌರವವನ್ನು ಜೊತೆಜೊತೆಗೆ ಅಷ್ಟೇ ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತಿದ್ದ ವೀರ ಮಹಿಳೆ.ಜಗತ್ತಿನ ಸ್ತ್ರೀಯರಿಗೆಲ್ಲಾ ಆದರ್ಶಪ್ರಾಯರು. ಸೀತೆ ಸಕಲ ವೈಭವಗಳನ್ನು ತ್ಯಜಿಸಿ, ರಾಮನ ಹಿಂದೆ ನಾರುಮಡಿಯುಟ್ಟು ವನವಾಸಕ್ಕೆ ಹೋದದ್ದು. ಮದುವೆಯಾದ ಮೇಲೆ ಹೆಣ್ಣು ಮಕ್ಕಳು ಕಷ್ಟವಿರಲಿ, ಸುಖವಿರಲಿ ಗಂಡನಜೊತೆ ಇದ್ದು ಹಂಚಿಕೊಳ್ಳಬೇಕು ಎಂಬ ಪಾಠವನ್ನು ಸಾರುತ್ತದೆ.
ವಾಲ್ಮೀಕಿ ರಾಮಾಯಣದಲ್ಲಿ ಆಕೆ ಬಗ್ಗೆ ವಿಶೇಷವಾಗಿ ವರ್ಣಿಸಲಾಗಿದೆ. ನ ಭೂತೋ ನ ಭವಿಷ್ಯತಿ ಎಂಬಂತೆ ಸಾಕ್ಷತ್ ಲಕ್ಷ್ಮೀಯ ಸ್ವರೂಪಿಣಿಯಾದ ಆಕೆ ತನ್ನ ಸಹನೆ, ಸಾದ್ವೀಗುಣದ ಮೂಲಕ ಎಂದೆಂದಿಗೂ ಆದರ್ಶಪ್ರಾಯಳಾಗಿ, ಜಗತ್ತಿನಲ್ಲಿ ಪೂಜಿಸಲ್ಪಡುತ್ತಾಳೆ.ಇದೇ ಏಪ್ರಿಲ್ 02 ರಂದು ರಾಮನವಮಿ ಹಬ್ಬಆಚರಿಸಲ್ಪಡುತ್ತದೆ. ಲೋಕ ಕಲ್ಯಾಣವಾಗಲಿ ಎಂದು ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನನ್ನು ನಾವೆಲ್ಲಾ ಪ್ರಾರ್ಥಿಸೋಣ.
ಬಿ.ಎನ್.ಶ್ರೀನಿವಾಸಮೂರ್ತಿ
ತುಮಕೂರು.
Comments are closed.