ಸರಳವಾಗಿ ಡಾ.ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ

222

Get real time updates directly on you device, subscribe now.

ತುಮಕೂರು: ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 3ನೇ ವರ್ಷದ ಪುಣ್ಯ ಸ್ಮರಣೆಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಶ್ರೀಮಠ ನಿರ್ಧರಿಸಿದೆ.
ಕೋವಿಡ್‌ 3ನೇ ಅಲೆ ಹರಡುತ್ತಿರುವುದರಿಂದ ಸರ್ಕಾರ ಮುನ್ನೆಚ್ಚರಿಕೆಯಾಗಿ ಹಲವು ನಿರ್ಬಂಧ ಜಾರಿಗೊಳಿಸಿದೆ, ಈ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸರ್ಕಾರದೊಂದಿಗೆ ಸಹಕರಿಸಬೇಕಾಗಿದೆ ಹಾಗೂ ಕೋವಿಡ್‌ ಹರಡದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಈ ಹಿನ್ನೆಲೆಯಲ್ಲಿ ಈ ವರ್ಷ ಶ್ರೀಗಳ ಪುಣ್ಯ ಸ್ಮರಣೆಯನ್ನು ಅತ್ಯಂತ ಸರಳವಾಗಿ ಧಾರ್ಮಿಕ ವಿಧಿವತ್ತಾಗಿ ಆಚರಿಸಲಾಗುವುದು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಕೋವಿಡ್‌ ಸಂಕಷ್ಟ ಸಂದರ್ಭದಲ್ಲಿ ಸಭೆ ಸಮಾರಂಭ ನಡೆಸುವುದು, ಗುಂಪು ಗೂಡುವುದು, ಜನಸಂದಣಿ ಸೇರುವುದರಿಂದ ಕೋವಿಡ್‌ ಹೆಚ್ಚು ಹರಡಲು ಕಾರಣವಾಗುತ್ತದೆ, ಹಾಗಾಗಿ ನಿಯಮ ಪಾಲನೆಗೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುವುದರಿಂದ ಈ ಬಾರಿ ಶ್ರೀಗಳ ಪುಣ್ಯ ಸ್ಮರಣೆ ಅಂಗವಾಗಿ ಯಾವುದೇ ಸಭೆ, ಸಮಾರಂಭ ಇರುವುದಿಲ್ಲ, ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳ ಶ್ರೀಮಠಕ್ಕೆ ಬರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ, ಒಂದು ಬೇಳೆ ಮುಖ್ಯಮಂತ್ರಿಗಳು ಬಂದರೂ ಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ, ಯಾವುದೇ ರೀತಿಯ ಮೆರವಣಿಗೆ ಇರುವುದಿಲ್ಲ, ಎಂದಿನಂತೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!