ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ: ಕೃಷ್ಣಕುಮಾರ್

301

Get real time updates directly on you device, subscribe now.

ಕುಣಿಗಲ್‌: ಸರ್ಕಾರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದು ಅದನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು, ಲೋಪವಾದರೆ ಅಧಿಕಾರಿಗಳೆ ಹೊಣೆ ಹೊರಬೇಕಾಗತ್ತದೆ ಎಂದು ಬಿಜೆಪಿ ಮುಖಂಡ, ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಎಚ್ಚರಿಸಿದರು.
ಪಟ್ಟಣದ 13ನೇ ವಾರ್ಡ್‌ನಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಹಾಸ್ಟೆಲ್ ಗೆ ಭೇಟಿ ನೀಡಿ ಆಹಾರ ಧಾನ್ಯ, ತರಕಾರಿ ಸಂಗ್ರಹಣೆ ವ್ಯವಸ್ಥೆ ಪರಿಶೀಲಿಸಿದರು, ನಂತರ ಸಿದ್ಧ ಪಡಿಸಲಾಗಿದ್ದು ಸಾಂಬಾರು, ಅನ್ನ ಊಟ ಮಾಡಿ ಪರಿಶೀಲಿಸಿ ಸಾಂಬಾರು ನೀರಾಗಿದ್ದು ಸರ್ಕಾರ ಅಗತ್ಯ ರೀತಿಯಲ್ಲಿ ಸವಲತ್ತು ನೀಡಿದರೂ ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ಮಾಡದಂತೆ ಎಚ್ಚರಿಸಿದರು, ಮುದ್ದೆ, ಮಜ್ಜಿಗೆ ಮಾಡಬೇಕಿದ್ದು ಎರಡೂ ಇಲ್ಲದಿರುವ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸಿಬ್ಬಂದಿ ಹಲವು ಕಾರಣಗಳಿಂದ ಮಕ್ಕಳ ಹಾಜರಾತಿ ಕಡಿಮೆ ಇದೆ, ಹೀಗಾಗಿ ಮುದ್ದೆ, ಮಜ್ಜಿಗೆ ಮಾಡಿಲ್ಲ ಎಂದರು.
ನಂತರ ಹಾಸ್ಟೆಲ್‌ ಆವರಣದಲ್ಲಿನ ಸಂಪ್‌ ಮುಚ್ಚಳ ನಿರ್ವಹಿಸದಿರುವುದು ಕಂಡು ಯಾವುದೆ ಮಕ್ಕಳು ಬಿದ್ದು ಹೆಚ್ಚು ಕಡಿಮೆಯಾದಲ್ಲಿ ಸಿಬ್ಬಂದಿಯೇ ಹೊಣೆಯಾಗಬೇಕಾಗುತ್ತದೆ, ಅಗತ್ಯ ಎಚ್ಚರ ವಹಿಸಬೇಕೆಂದ ಅವರು, ಮಕ್ಕಳಿಗೆ ನೀಡಲಾಗುವ ಆಹಾರ ಗುಣಮಟ್ಟದ್ದಾಗಿರಬೇಕು, ನಿರ್ಲಕ್ಯ ವಹಿಸಬೇಡಿ ಎಂದರು. ಹಾಸ್ಟೆಲ್‌ ಸಿಬ್ಬಂದಿ ದೀಪಾ, ಲೀಲಾ ಇದ್ದರು.

Get real time updates directly on you device, subscribe now.

Comments are closed.

error: Content is protected !!