ಚಾಲಕನ ನಿರ್ಲಕ್ಷ್ಯ- ಸಿಮೆಂಟ್‌ ಲಾರಿ ಪಲ್ಟಿ

6,980

Get real time updates directly on you device, subscribe now.

ಕೊರಟಗೆರೆ: ಚಾಲಕನ ನಿರ್ಲಕ್ಷದಿಂದ ತಿರುವಿನಲ್ಲಿ ವೇಗವಾಗಿ ಬಂದ ಸಿಮೆಂಟ್‌ ಲಾರಿಯೊಂದು ನಿಯಂತ್ರಣ ತಪ್ಪಿ ಹೊಳವನಹಳ್ಳಿ- ಬಿ.ಡಿ.ಪುರ ಮಾರ್ಗದ ಮುಖ್ಯ ರಸ್ತೆಯಲ್ಲಿ ಪಲ್ಟಿ ಹೊಡೆದು ಲಾರಿಯಲ್ಲಿದ್ದ ಸಿಮೆಂಟ್‌ ಚೀಲಗಳು ಚೆಲ್ಲಾಪಿಲ್ಲಿ ಆಗಿರುವ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಗ್ರಾಮದಿಂದ ಬಿ.ಡಿ.ಪುರಕ್ಕೆ ಸಂಪರ್ಕ ಕಲ್ಪಿಸುವ ಕಳ್ಳಿಪಾಳ್ಯದ ಕ್ರಾಸ್‌ನ ಸಮೀಪದ ಮುಖ್ಯ ರಸ್ತೆಯಲ್ಲಿ ಚಾಲಕನ ದಿವ್ಯ ನಿರ್ಲಕ್ಷದಿಂದ ಸಿಮೆಂಟ್‌ ಲಾರಿ ಪಲ್ಟಿ ಹೊಡೆದು 500 ಕ್ಕೂ ಅಧಿಕ ಸಿಮೆಂಟ್‌ ಚೀಲಗಳು ಚೆಲ್ಲಾಪಿಲ್ಲಿ ಆಗಿವೆ, ಲಾರಿ ಚಾಲಕನಿಗೆ ಗಾಯವಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಅಲ್ಲಿಪುರದ ಸಿಮೆಂಟ್‌ ಪ್ಯಾಕ್ಟರಿಯಿಂದ ಬಿ.ಡಿ.ಪುರ- ಕೊರಟಗೆರೆ ಮಾರ್ಗವಾಗಿ ಹಾಸನಕ್ಕೆ ಸಂಚರಿಸಬೇಕಾದ ಸಿಮೆಂಟ್‌ ಲಾರಿಯೊಂದು ಚಾಲಕನ ನಿರ್ಲಕ್ಷದ ಚಾಲನೆಯಿಂದ ಮುಖ್ಯರಸ್ತೆಯ ಮಧ್ಯೆ ಪಲ್ಟಿ ಹೊಡೆದಿದೆ. ಇಳಿಜಾರಿನ ರಸ್ತೆಯಲ್ಲಿ ವೇಗವಾಗಿ ಬರುವ ಲಾರಿಗಳು ಪ್ರತಿ ವರ್ಷ ಇದೆ ಸ್ಥಳದಲ್ಲಿ ಅಪಘಾತಆಗುತ್ತಿವೆ.
ಸಿಮೆಂಟ್‌ ಲಾರಿ ಪಲ್ಟಿ ಹೊಡೆದರೂ ಚಾಲಕನಿಗೆ ಸಣ್ಣಪುಟ್ಟಗಾಯವಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಮೆಂಟ್‌ ಲಾರಿಗಳಲ್ಲಿ ಪ್ರತಿನಿತ್ಯಹೆಚ್ಚಿನ ತೂಕ ಮತ್ತು ಅತಿವೇಗವಾಗಿ ಬರುವ ಲಾರಿಗಳ ವಿರುದ್ಧ ಪಿಡ್ಲ್ಯೂಡಿ ಮತ್ತು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!