ಅಂಬಿಗರ ಚೌಡಯ್ಯ ನೇರ ನಡೆಯ ವ್ಯಕ್ತಿ

160

Get real time updates directly on you device, subscribe now.

ಗುಬ್ಬಿ: ಅಂಬಿಗರ ಚೌಡಯ್ಯನವರ ಶರಣರ ಕಾಲದ ವಚನಕಾರರಾಗಿ ನೇರ ನಡೆಯ ವ್ಯಕ್ತಿತ್ವ ಹೊಂದಿದ್ದರು ಎಂದು ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್‌.ರವಿಕುಮಾರ್‌ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲ್ಲೂರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಶ್ರೀಗಂಗಾಮತಸ್ಥ ಬೆಸ್ತರ ಕ್ಷೇಮಾಭಿವೃದ್ಧಿ ಸಂಘ ಕಲ್ಲೂರು ವತಿಯಿಂದ ನಿಜ ಶರಣ ಅಂಬಿಗರ ಚೌಡಯ್ಯ ನವರ 902ನೆ ಜಯಂತಿಯನ್ನು ಕೊರೊನ ಹಿನ್ನೆಲೆಯಲ್ಲಿ ಕಲ್ಲೂರು ಗ್ರಾಮ ಪಂಚಾಯಿತಿ ಸಭಾಂಗಣದ ಆವರಣದಲ್ಲಿ ಆಚರಿಸಿ ಮಾತನಾಡಿ, ಪ್ರತಿಯೊಬ್ಬ ಶರಣರು ಸಹ ತಮ್ಮದೇ ಆದಂತಹ ಆದರ್ಶ ತತ್ವ ಇಟ್ಟುಕೊಂಡು ಬಂದವರು, ಅವರ ದಿನಗಳನ್ನು ಮಾಡುತ್ತೇವೆ ಎಂದರೆ ಅವರು ಮಾಡಿರುವ ಸಾಮಾಜಿಕ ಸೇವೆ ತಿಳಿದುಕೊಂಡೆ, ಅದರಂತೆ ನಡೆದುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್‌ ಮಾತನಾಡಿ, ಕುಲಬಾಂಧವರು ಒಗ್ಗಟ್ಟಾಗಿರಬೇಕು, ಶರಣರನ್ನು ಅನುಸರಿಸಿ ನಡೆಯಬೇಕು, ಆಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬಹುದಾಗಿದೆ, ನಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಅವರನ್ನು ವಿದ್ಯಾವಂತರನ್ನಾಗಿ ಮಾಡಿದಾಗ ನಮ್ಮ ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ತಿಳಿಸಿದರು.
ಗಂಗಾಮತಸ್ಥ ಬೆಸ್ತರ ಕ್ಷೇಮಾಭಿವೃದ್ಧಿ ಸಂಘ ಕಲ್ಲೂರಿನ ಅಧ್ಯಕ್ಷ ಕೆ.ಟಿ.ಸೋಮಶೇಖರ್‌, ಅಂಬಿಗರ ಚೌಡಯ್ಯನವರು 12ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ ಸಾವಿರಾರು ವರ್ಷಗಳಿಂದ ಧರ್ಮ ದೇವರ ಬಗ್ಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೆ ವಿಚಾರ ಪರವಾದ ವಾಸ್ತವದ ಅಂಶಗಳನ್ನು ಜನಮನದಲ್ಲಿ ಮೂಡಿಸಿದ್ದವರು, 12ನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯೆ ಪ್ರಜ್ವಲವಾಗಿ ಬೆಳಗಿದ ಶರಣ ಅಂಬಿಗರ ಚೌಡಯ್ಯ ಮಾತು ಕಟುವಾದರು ದಿಟವನ್ನು ನುಡಿದ ದಿಟ್ಟ ದೀತ ನುಡಿದಂತೆ ನಡೆದವನೂ ಅಂಬಿಗರ ಚೌಡಯ್ಯ, ಬೆಸ್ತರ ಜನಾಂಗವು ತೀರ ಹಿಂದುಳಿದಿದ್ದು ಕುಲಬಾಂಧವರೆಲ್ಲ ಒಗ್ಗಟ್ಟು ಪ್ರದರ್ಶಿಸಿ ಸರ್ಕಾರದ ಸವಲತ್ತು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಮಿತ್ರಾ ಶಿವಯ್ಯ, ನಾಗರಾಜ್‌, ಸಮಾಜದ ಮುಖಂಡರಾದ ದಯಾನಂದ್‌, ಪುಟ್ಟರಾಜು, ಚೆನ್ನಮಲ್ಲಯ್ಯ, ಶಿವಣ್ಣ, ತಾತಯ್ಯ, ರಾಜಣ್ಣ, ನಾಗರಾಜ್‌, ಸುರೇಶ್‌, ಶಿವು, ಕಾರ್ಯದರ್ಶಿ ಆರ್‌.ಅರುಣ್‌ ಕುಮಾರ್‌, ಖಜಾಂಚಿ ವೆಂಕಟೇಶ್‌, ದಯಾನಂದ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!