ಅಂಬಿಗರ ಚೌಡಯ್ಯರ ತತ್ವ ಸಿದ್ಧಾಂತ ಪಾಲಿಸಿ

290

Get real time updates directly on you device, subscribe now.

ಕುಣಿಗಲ್‌: ತಾಲೂಕು ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ದಾಸೋಹ ದಿನಾಚರಣೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಹಾಗೂ ತ್ರಿವಿಧದಾಸೋಹಿ ಡಾ.ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಕಪಿನಪಾಳ್ಯರಮೇಶ್‌, ಬಾಲಾಡುವವರಿಗೆಲ್ಲಾ ಭಾರತರತ್ನ ಪ್ರಶಸ್ತಿ ನೀಡಲಾಗುತ್ತಿದೆ, ಸರ್ಕಾರದ ನೆರವಿಲ್ಲದೆ ಸರ್ಕಾರಕ್ಕೆ ಮಾರ್ಗದರ್ಶನವಾಗುವ ರೀತಿಯಲ್ಲಿ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನ ಬೆಳಕಾದ ಶಿವಕುಮಾರ ಶ್ರೀಗಳಿಗೆ ಭಾರತ ರತ್ನನೀಡದೆ ಇರುವುದು ಖೇದಕರ, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ತಮ್ಮ ವಿದ್ವತ್ತು ಪ್ರದರ್ಶಿಸಿ ಸಮಾಜಕ್ಕೆ ಅಂಟಿದ್ದ ಮೇಲು ಕೀಳಿನ ಜಾಡ್ಯ ತೊಳೆಯಲು ಶ್ರಮಿಸಿದ್ದ ಅಂಬಿಗರ ಚೌಡಯ್ಯನವರ ತತ್ವ ಸಿದ್ಧಾಂತಗಳು ಇಂದಿಗೂ ಹೆಚ್ಚು ಪ್ರಸ್ತುತ, ಅವರ ಚಿಂತನೆಗಳನ್ನು ಅರಿತು ನಾವುಗಳು ಆತ್ಮಾವಲೋಕನ ಮಾಡಿಕೊಂಡು ಇಂದಿನ ಸಮಾಜದಲ್ಲಿನ ಮೇಲು ಕೀಳು, ತಾರತಮ್ಯದ ಜಾಡ್ಯವನ್ನು ತೊಡೆಯಬೇಕಿದೆ ಎಂದರು.
ತಹಶೀಲ್ದಾರ್‌ ಮಹಾಬಲೇಶ್ವರ್‌ ಮಾತನಾಡಿ, ಕೊವಿಡ್‌ ನಿಯಯಮಾವಳಿ ಪಾಲನೆ ಮಾಡಬೇಕಾಗಿರುವುದರಿಂದ ದಾಸೋಹ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಆಚರಿಸಲಾಗುವುದು. ಅಂಬಿಗರಚೌಡಯ್ಯ ನವರ ಚಿಂತನೆಗಳು ಮಾನವ ಸಮಾಜಕ್ಕೆ ಹೆಚ್ಚು ಪೂರಕ, ಹಲವು ಶತಮಾನ ಕಳೆದದು ಇಂದಿಗೂ ಅವರು ಜೀವಂತವಾಗಿರುವುದು ಅವರು ನೀಡಿದ ಉದಾತ್ತ ವಚನಗಳ ಸಾರದಿಂದ ಅವುಗಳ ಬಗ್ಗೆ ಸಮಾಜದಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಬೇಕೆಂದರು.
ಪುರಸಭೆ ಉಪಾಧ್ಯಕ್ಷೆ ಶಬನಾ ತಸ್ಸುಮ್‌, ಸಿಡಿಪಿಒ ಅನೂಶ, ಗಂಗಾಮತಸ್ಥ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮನು, ಪದಾಧಿಕಾರಿಗಳಾದ ಆನಂದ್‌, ಲಿಂಗರಾಜು, ದಯಾನಂದ, ಸಂಪತ್‌, ವೀರಶೈವ ಸಮಾಜದ ಅಧ್ಯಕ್ಷ ಕಿರಣ್‌ಕುಮಾರ್‌, ಪ್ರಮುಖರಾದ ಬಸವರಾಜು, ಗಂಗಾಧರ, ಅಶೋಕ್‌, ರೇಣುಕಾಪ್ರಸಾದ್‌, ರಾಮಚಂದ್ರ, ವರದರಾಜು, ಶಿವಕುಮಾರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!