ಸಿದ್ಧಗಂಗಾ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಸೇವೆ

191

Get real time updates directly on you device, subscribe now.

ತುಮಕೂರು: ಸಿದ್ಧಗಂಗಾ ಆಸ್ಪತ್ರೆ ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದು ಗ್ರಾಮೀಣ ಭಾಗದ ಜನರಿಗೆ ಇನ್ನಷ್ಟು ಉನ್ನತ ಆರೋಗ್ಯ ಸೇವೆ ನೀಡಲು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಯಾದ ಜನವರಿ 21 ರಿಂದ ಉಚಿತ ಆರೋಗ್ಯ ಮಹಾ ದಾಸೋಹ ನೀಡಲು ಮುಂದಾಗಿದೆ ಎಂದು ಸಿದ್ಧಗಂಗಾ ಮೆಡಿಕಲ್‌ ಕಾಲೇಜು ನಿರ್ದೇಶಕ ಡಾ.ಎಸ್‌.ಪರಮೇಶ್‌ ತಿಳಿಸಿದ್ದಾರೆ.
ದಾಸೋಹ ದಿನದ ಪ್ರಯುಕ್ತ ರೋಗಿ ಹಾಗೂ ಅವರ ಕುಟುಂಬಸ್ಥರಿಗೆ ಹಣ್ಣು ಹಂಪಲು ನೀಡಿ ಮಾತನಾಡಿ, ಸಿದ್ಧಗಂಗಾ ಮೆಡಿಕಲ್‌ ಕಾಲೇಜಿನ ನೂತನ ಸುಸಜ್ಜಿತ ಘಟಕದಲ್ಲಿ ದಾಖಲಾಗುವ ರೋಗಿಗಳಿಗೆ ಉಚಿತ ನೋಂದಣಿ, ಉಚಿತ ವೈದ್ಯರ ಸಂದರ್ಶನದ ಜೊತೆಗೆ ಹೆಚ್ಚಿನ ಚಿಕಿತ್ಸೆಗೆ ಕಾಲೇಜಿನಲ್ಲೇ ದಾಖಲಾಗುವ ರೋಗಿಗಳಿಗೆ ಉಚಿತ ಹಾಸಿಗೆ, ಆಹಾರ ಕೂಡ ಒದಗಿಸುತ್ತಿದ್ದು, ಎಲ್ಲಾ ವರ್ಗದ ಜನರು ಆಸ್ಪತ್ರೆಯ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ಉಚಿತ ಆರೋಗ್ಯ ಸೇವೆಗಾಗಿ ಮೆಡಿಕಲ್‌ ಕಾಲೇಜಿನಲ್ಲಿ ದಾಖಲಾಗುವ ರೋಗಿಗಳಿಗೆ ಸೂಪರ್‌ ಸ್ಪೆಷಾಲಿಟಿ ಸೇವೆಗಳ ಅವಶ್ಯಕತೆ ಇದ್ದರೆ ಅಂತಹವರಿಗೂ ಕೂಡ ರಿಯಾಯಿತಿ ದರದಲ್ಲಿ ಪರೀಕ್ಷೆ, ಶಸ್ತ್ರಚಿಕಿತ್ಸೆ ಹಾಗೂ ಐಸಿಯು ವ್ಯವಸ್ಥೆ ಮಾಡಲಾಗುವುದು ಎಂದರು.
ಸಿದ್ಧಗಂಗಾ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲೆ ಡಾ.ಶಾಲಿನಿ ಮಾತನಾಡಿ, ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಇಡೀ ಜಗತ್ತಿಗೆ ದಾಸೋಹ ಸಂದೇಶ ನೀಡಿದ ಪರಮಪೂಜ್ಯರ ಸ್ಮರಣೆಯೊಂದಿಗೆ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಆರೋಗ್ಯ ದಾಸೋಹ ನಿರಂತರವಾಗಿ ನಡೆಯಲಿದ್ದು, ಎಂದಿನಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮೆಡಿಕಲ್‌ ಕಾಲೇಜಿನ ಸಿಇಓ ಡಾ.ಸಂಜೀವ್‌ ಕುಮಾರ್‌, ಮುಖ್ಯಸ್ಥ ಡಾ.ನಿರಂಜನ್‌, ಶಸ್ತ್ರಚಿಕಿತ್ಸಾ ತಜ್ಞ ಡಾ.ಚಂದ್ರಶೇಖರ್‌, ಕಿಡ್ನಿ ಸ್ಪೆಷಲಿಸ್ಟ್‌ ಡಾ.ಗಣೇಶ್‌ ಎಸ್‌.ಪ್ರಸಾದ್‌, ವೈದ್ಯರಾದ ಡಾ.ಕಿರಣ್‌, ಡಾ.ನಳಿನಾ ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!