ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾ.ರಂಗನಾಥ್ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗಿಗಳು, ವೈದ್ಯರು ಹಾಗೂ ದಾದಿಯರೊಂದಿಗೆ ಚರ್ಚೆ ನಡೆಸಿದರು.
ಶಾಸಕ ಡಾ.ರಂಗನಾಥ್ ಶನಿವಾರ ಮಧ್ಯಾಹ್ನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್ ನಿಯಂತ್ರಣ ನಿಟ್ಟಿನಲ್ಲಿ ವಿಶೇಷವಾಗಿ ನಿರ್ಮಿಸಲಾಗುತ್ತಿರುವ 22 ಹಾಸಿಗೆ ಐಸಿಯು ವಾರ್ಡ್‌ನ ಕಾಮಗಾರಿ ಪರಿಶೀಲಿಸಿ, ಕೆಲವೆಡೆ ಹಳೆ ಪೈಪ್‌ಗಳನ್ನು ಅಳವಡಿಸಿದ್ದು ಹೊಸ ಪೈಪ್ ಅಳವಡಿಸುವಂತೆ ಸೂಚನೆ ನೀಡಿದರು. ನಂತರ ಕೊವಿಡ್ ವಾರ್ಡ್‌ನಲ್ಲಿರುವ ಸೋಂಕಿತರನ್ನು ಭೇಟಿಯಾಗಿ ಸಮಸ್ಯೆ ಅಲಿಸಿ, ಯಾವುದೇ ಸಮಸ್ಯೆ ಬಾರದಂತೆ ಕ್ರಮವಹಿಸಲು ಸೂಚನೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಯುವವೈದ್ಯ ಗುರುಪ್ರಸಾದ್ ಆಗಮಿಸಿದ್ದು, ಸೂಕ್ತ ಸಲಕರಣೆ ಒದಗಿಸಿಕೊಟ್ಟಲ್ಲಿ ಆಸ್ಪತ್ರೆಯಲ್ಲಿ ಅಗತ್ಯ ಶಸ್ತ್ರಚಿಕಿತ್ಸೆ ಮಾಡಬಹುದು ಆದ್ದರಿಂದ ಸಮರ್ಪಕ ಸಲಕರಣೆ ಒದಗಿಸುವಂತೆ ಮನವಿ ಮಾಡಿದ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಾಗಿ ಬೇಕಾಗಿರುವ ಸಲಕರಣೆಗಳನ್ನು ಶೀಘ್ರವಾಗಿ ವ್ಯವಸ್ಥೆ ಮಾಡಲು ಸೂಚಿಸಿದರಲ್ಲದೆ ಇನ್ನು ಅಗತ್ಯ ಇದ್ದಲ್ಲಿ ಶಾಸಕರ ನಿಧಿ ಸೇರಿದಂತೆ ಬೇರೆ ಅನುದಾನದಿಂದ ವ್ಯವಸ್ಥೆಗೊಳಿಸುವ ಭರವಸೆ ನೀಡಿದರು.
ಆಸ್ಪತ್ರೆಯಲ್ಲಿನ ದಾದಿಯರು, ಮೊದಲ ಅಲೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಸಂಬಂಧಿಸಿದಂತೆ ಇದುವರೆಗೂ ನಮಗೆ ವಿಶೇಷ ಭತ್ಯೆ ನೀಡಿಲ್ಲ, ಕೂಡಲೆ ವಿಶೇಷ ಭತ್ಯೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ, ದಾದಿಯರ ಹಿರಿತನ ಪರಿಗಣಿಸಿ ಕರ್ತವ್ಯವನ್ನು ಸರಿಯಾಗಿ ಹಂಚಿಕೆ ಮಾಡದೆ ಕೆಲವೆ ಮಂದಿಗೆ ಮಾತ್ರ ಹೆರಿಗೆ ವಾರ್ಡ್‌ನಲ್ಲಿ ಕರ್ತವ್ಯಕ್ಕೆ ಹಾಕುತ್ತಿದ್ದು ಇತರೆಯವರ ಕರ್ತವ್ಯವನ್ನು ಸರಿಯಾಗಿ ಹಂಚಿಕೆ ಮಾಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕರು ಈ ಬಗ್ಗೆ ಡಿಎಚ್‌ಒ ಅವರೊಂದಿಗೆ ಚರ್ಚಿಸಿದ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು. ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್‌ಬಾಬು, ವೈದ್ಯ ಡಾ.ನವೀನ್ ಇತರರು ಇದ್ದರು.
ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾ.ರಂಗನಾಥ್ ಭೇಟಿ
Get real time updates directly on you device, subscribe now.
Prev Post
Next Post
Comments are closed.