ಗುಬ್ಬಿ: ಬಹಳಷ್ಟು ವರ್ಷದಿಂದ ನಮ್ಮ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಹಾಲುಕೊಂಬೆಯಮ್ಮ ದೇವಾಲಯ ಸಮೀಪವಿರುವ ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಹಳೆ ಗುಬ್ಬಿ ಗ್ರಾಮದ ನಿವಾಸಿ ಶ್ರೀನಿವಾಸ್ ಎಂಬ ವ್ಯಕ್ತಿ ಹತ್ತಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ಅಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ತನ್ನ ಜಮೀನಿನಿಂದ ತಾನು ಮುಂದಕ್ಕೆ ಓಡಾಡಲು ರಸ್ತೆಯಿಲ್ಲದೆ ಇರುವ ಬಗ್ಗೆ ಹಲವು ವರ್ಷದಿಂದಲೂ ತಹಶೀಲ್ದಾರ್ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರು ಸಮಸ್ಯೆ ಬಗೆಹರಿಸದ ಕಾರಣ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ ವಿದ್ಯುತ್ ಕಂಬದ ಮೇಲೆ ಕುಳಿತುಕೊಂಡೆ ಸರ್ಕಾರಿ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತ ನಮ್ಮ ಕುಟುಂಬಕ್ಕೆ ಓಡಾಡಲು ರಸ್ತೆ ಬಿಡಿಸಿಕೊಡಿ, ಇಲ್ಲ ಸರ್ಕಾರಿ ಜಮೀನಿನಲ್ಲಿ 30*40 ಅಳತೆಯ ನಿವೇಶನವನ್ನು ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಪ್ರತಿಭಟನೆಗೆ ಇಳಿದಿದ್ದ.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಆರತಿ.ಬಿ. ಕಂಬದ ಮೇಲಿದ್ದ ಶ್ರೀನಿವಾಸ್ ಅವರೊಂದಿಗೆ ಮಾತನಾಡಿ ಕಳೆದ ವಾರವಷ್ಟೇ ತಮ್ಮ ಜಮೀನು ಬಳಿ ಬಂದು ರಸ್ತೆ ಬಿಡಿಸಿ ಕೊಡುವ ಭರವಸೆ ನೀಡಿದ್ದೆ, ಮುಂದಿನ ವಾರ ಸರ್ವೆಯರ್ ಜೊತೆ ತೆರಳಿ ಶ್ರೀನಿವಾಸ್ ಅವರ ಕುಟುಂಬ ಓಡಾಡಲು ದಾರಿ ಮಾಡಿಕೊಡಲು ಸಾಧ್ಯ ಎಂಬುದನ್ನು ನೋಡಿ, ಆಗದೆ ಹೋದಲ್ಲಿ ಮುಂದಿನ ಜಮೀನಿನ ಮಾಲೀಕರ ಜೊತೆ ಮಾತನಾಡಿ ಮನವೊಲಿಸಿ ದಾರಿ ಬಿಡಿಸಿ ಕೊಡುವುದಾಗಿ ಹೇಳಿದರು, ಒಂದು ವೇಳೆ ಅವರು ದಾರಿಗೆ ಜಾಗ ಬಿಡದೆ ಹೋದರೆ ಮೇಲಧಿಕಾರಿಗಳ ಬಳಿ ಈ ಬಗ್ಗೆ ಚರ್ಚೆ ಮಾಡಿ ಅವರ ಆದೇಶದಂತೆ ಕಾನೂನಿನ ರೀತಿಯಲ್ಲಿ ದಾರಿ ಬಿಡಿಸಿ ಕೊಡುವ ಭರವಸೆ ನೀಡಿದರು.
ಭರವಸೆಗೆ ಮಣಿದು ಕಂಬ ಇಳಿದ ನಂತರ ಮಾತನಾಡಿದದ ಶ್ರೀನಿವಾಸ್, ಎಲ್ಲರಂತೆ ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿ ಸಮಾಜಕ್ಕೆ ನೀಡಬೇಕೆಂಬ ಬಯಕೆ ನನಗೆ ಇದೆ, ಆದರೆ ಇದ್ಯಾವುದಕ್ಕೂ ಅವಕಾಶವೇ ಇಲ್ಲದ ವಾತಾವರಣ ಉಂಟಾಗಿ ವಿದ್ಯಾಭ್ಯಾಸದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು, ತನ್ನ ಜಮೀನಿನಿಂದ ಓಡಾಡಲು ರಸ್ತೆಯೇ ಇಲ್ಲದೆ ಇರುವ ಕಾರಣ ಸರಕಾರಿ ಜಮೀನಿನಲ್ಲಿ ಬೇರೆಯವರು ಕಟ್ಟಿಕೊಂಡಿರುವಂತೆ ಎಲ್ಲರಂತೆ ಮನೆ ಕಟ್ಟಲು ಪಾಯ ತೆಗೆಯಲು ಹೋದ ಸಂದರ್ಭದಲ್ಲಿ ಪಿಡಿಓ ಅವರು ಗುದ್ದಲಿ, ಬಾಂಡಲಿ ಎಲ್ಲವನ್ನು ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಅಧಿಕಾರಿಗಳ ಮುಂದೆ ಅಹವಾಲು ತೋರಿಕೊಂಡ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮ ಲೆಕ್ಕಿಗರಾದ ವಿನೋದ್, ಕವನ, ಅರಕ್ಷಕ ಸಿಬ್ಬಂದಿ ಇದ್ದರು.
Get real time updates directly on you device, subscribe now.
Next Post
Comments are closed.