ಕೊರಟಗೆರೆ: ಚಾಲಕನ ಅತಿವೇಗ ಚಾಲನೆ ಮತ್ತು ನಿರ್ಲಕ್ಷದಿಂದ ಸರಕಾರಿ ಬಸ್ ಬಿಕ್ಷುಕ ಮತ್ತು ರೈತನ ಮೇಲೆ ಹರಿದು ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ ನಿರ್ವಾಹಕ ಸೇರಿದಂತೆ 8ಜನ ಪ್ರಯಾಣಿಕರಿಗೆ ಗಂಬೀರ ಗಾಯವಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು-ಮಧುಗಿರಿ-ಶಿರಾ ಮಾರ್ಗವಾಗಿ ತಿರುಪತಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂನ ಕಾಶಾಪುರಗೇಟ್ನ ಸಮೀಪದ ಮುಖ್ಯರಸ್ತೆಯ ತಿರುವಿನಲ್ಲಿ ಚಾಲಕನ ಅಜಾಗರುಕತೆಯ ಚಾಲನೆಯಿಂದ ಅಪಘಾತ ಮಾಡಿ, ಸ್ಥಳದಿಂದ ಪರಾರಿ ಆಗಿದ್ದಾನೆ.
ಸರಕಾರಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಅಪರಿಚಿತ ಬಿಕ್ಷುಕ ಸ್ಥಳದಲ್ಲಿಯೇ ಮೃತಪಟ್ಟರೇ, ದ್ವಿಚಕ್ರ ವಾಹನದಲ್ಲಿ ನಿಂತಿದ್ದ ರೈತ ಗೋಪಾಲನಾಯ್ಕ ಸಾರ್ವಜನಿಕ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ, ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ 8ಜನರಿಗೆ ಗಂಬೀರಗಾಯವಾಗಿವೆ.
ಕಾಶಾಪುರಗೇಟ್ನತಿ ರುವಿನಲ್ಲಿ ವರ್ಷಕ್ಕೆ ಹತ್ತಾರು ಅಪಘಾತ ಆಗಲಿದೆ, ಸಾರಿಗೆ ಮತ್ತು ಪಿಡ್ಲ್ಯೂಡಿ ಇಲಾಖೆ ಅಪಘಾತ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ, ಅಪಘಾತ ವಲಯದ ನಾಮಫಲಕ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದು,
ಅಪಘಾತದಲ್ಲಿ ಮೃತಪಟ್ಟ ಅಪರಿಚಿತ ಬಿಕ್ಷುಕನನ್ನು ತುಮಕೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ, ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಕಾರಿ ಬಸ್ ಚಾಲಕನ ವಿರುದ್ದ ಕೊರಟಗೆರೆ ಪೊಲೀಸ್ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
Get real time updates directly on you device, subscribe now.
Prev Post
Next Post
Comments are closed.