ಗುಬ್ಬಿ: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿರುವುದು ಅಷ್ಟು ಸಮಂಜಸವಲ್ಲ, ಬೇರೆ ಜಿಲ್ಲೆಯವರನ್ನು ಇಲ್ಲಿಗೆ ತಂದು ನೀಡಿದರೆ ಅವರಿಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಡಬ ಹೋಬಳಿಯ ಗಂಗಸಂದ್ರ ಗ್ರಾಮದಲ್ಲಿ ಕಾಡಾ ಯೋಜನೆ ಅಡಿಯಲ್ಲಿ 67 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಅಧಿಕಾರಿಗಳು ಯಾವುದನ್ನು ತಿಳಿಸುತ್ತಾರೋ ಅದನ್ನೇ ಕೇಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ, ಇದರಿಂದ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ, ಆಯಾ ಜಿಲ್ಲೆಯ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾದರೆ ಅನುಕೂಲವಾಗುತ್ತದೆ, ಇದು ಅವರ ಪಕ್ಷ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದರು.
ಆಸೆ ಆಮಿಷ ರಾಜಕೀಯ ಪಕ್ಷಗಳ ಆಪರೇಷನ್‌ಗೆ ಒಳಗಾಗಿದ್ದರೆ ಇದೇ ಜಿಲ್ಲೆಯಲ್ಲಿ ಮಿನಿಸ್ಟರ್ ಆಗಿರುತ್ತಿದ್ದೆ, ನಮ್ಮ ಪಕ್ಷದವರು ನನ್ನನ್ನು ಆಚೆಗೆ ಹಾಕಿದ್ದರಿಂದ ಬೇಸರಗೊಂಡಿದ್ದೇನೆ, ನಾನು ಎಲ್ಲಿಯೂ ಪಕ್ಷ ಬಿಡುತ್ತೇನೆ ಎಂದು ಹೇಳಿರಲಿಲ್ಲ, ಇದು ನಮ್ಮ ಎಲ್ಲಾ ರಾಜಕೀಯ ರಾಜ್ಯ ಮುಖಂಡರಿಗೂ ಗೊತ್ತಿದೆ, ನಾನಿರುವಾಗಲೆ ಇನ್ನೊಬ್ಬ ವ್ಯಕ್ತಿಯನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ ಅಲ್ಲಿ ಇದ್ದು ಏನು ಮಾಡಬೇಕು, ನಾನು ರಾಜಕೀಯದಲ್ಲಿ ಇರಲೆಬೇಕು, ನಾನು ಸನ್ಯಾಸಿಯಲ್ಲ, ಹಾಗಾಗಿ ನಮ್ಮ ಕಾರ್ಯಕರ್ತರು ಮತದಾರರ ಜೊತೆಯಲ್ಲಿ ಚರ್ಚಿಸಿ ಮುಂದುವರೆಯುತ್ತೇನೆ ಎಂದರು.
ಗುಬ್ಬಿ ತಾಲ್ಲೂಕಿನ ಮಠದ ಕೆರೆಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರು ಹರಿಸುವ ಪ್ರಸ್ತಾವನೆ ಇತ್ತು, ಇದನ್ನು ತಿಳಿದು ನಾನೇ ಅಧಿಕಾರಿಗಳ ಜತೆ ಮಾತುಕತೆ ಮಾಡಿ ಮತ್ತೆ ಹೇಮಾವತಿ ಮೂಲಕವೇ ನೀರು ಹರಿಸುವ ಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಗೌಡ, ಸದಸ್ಯರಾದ ಕವಿತಾ, ವೆಂಕಟರಂಗಯ್ಯ, ರಂಗನಾಥ್, ಲೋಕೇಶ್, ಗಿರೀಶ್, ಮಧುಸೂದನ್, ಗುತ್ತಿಗೆದಾರ ಚನ್ನಿಂಗಪ್ಪ ಇನ್ನಿತರರು ಹಾಜರಿದ್ದರು.
ಉಸ್ತುವಾರಿ ಸಚಿವರ ಬದಲಾವಣೆ ಸಮಂಜಸವಲ್ಲ
Get real time updates directly on you device, subscribe now.
Next Post
Comments are closed.