ಮೋದಿ ದುಡ್ಡು ಕೊಡ್ಸಿ- ಶಾಸಕರಿಗೆ ರೈತ ಮನವಿ

351

Get real time updates directly on you device, subscribe now.

ಕುಣಿಗಲ್‌: ಸ್ವಾಮಿ ನನಗೆ ಮೋದಿ ದುಡ್ಡು ಬರ್ತಿಲ್ಲಾ, ಯಾವ ಕಚೇರಿಗೂ ಹೋದ್ರೂ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡಿಸುತ್ತಿದ್ದಾರೆ, ನನಗೆ ನ್ಯಾಯ ಕೊಡಿಸಿ ಮೋದಿ ದುಡ್ಡು ಬರೋಂಗೆ ಮಾಡಿ ಎಂದು ಸಭೆಯಲ್ಲಿ ರೈತನೊಬ್ಬ ಶಾಸಕರಲ್ಲಿ ಅಹವಾಲು ಸಲ್ಲಿಸಿದ ಘಟನೆ ನಡೆಯಿತು.
ಮಂಗಳವಾರ ತಾಪಂ ಸಭಾಂಗಣದಲ್ಲಿ ಶಾಸಕ ಡಾ.ರಂಗನಾಥ್‌ ಕೊವಿಡ್‌ ಪರಿಶೀಲನೆ ಸಭೆ ನಡೆಸುತ್ತಿದ್ದರು, ಸಭಾಂಗಣಕ್ಕೆ ನುಗ್ಗಿದ ಎಲೆಕಡಕಲು ಗ್ರಾಮದ ರೈತ ಶ್ರೀನಿವಾಸ ಎಂಬಾತ ತನಗೆ ಒಂದುವರೆ ಎಕರೆ ಜಮೀನಿದೆ, ನನಗೆ ಮೋದಿ ದುಡ್ಡು ಯೋಜನೆ ಶುರು ಮಾಡಿದಾಗ ಎರಡು ಸಾವಿರ ಬಂದಿದ್ದು ಬುಟ್ರೆ ಮತ್ತೆ ಬಂದಿಲ್ಲ, ಅರ್ಜಿ, ದಾಖಲೆ ಇಟ್ಟುಕೊಂಡು ತಾಲೂಕು ಕಚೇರಿಗೆ ಹೋದರೆ ಕೃಷಿ ಇಲಾಖೆಗೆ ಕಳಿಸ್ತಾರೆ. ಕೃಷಿ ಇಲಾಖೆಗೆ ಹೋದ್ರೆ ತಾಲೂಕು ಕಚೇರಿಗೆ ಕಳಿಸ್ತಾರೆ, ತಾಲೂಕು ಕಚೇರಿಯ ಸಿಬ್ಬಂದಿ ಸಮಸ್ಯೆನೆ ಕೇಳೋಲ್ಲ ಆಚೆಗೆ ಹೋಗು ಎಂದು ಗದರುತ್ತಾರೆ, ಹೀಗಾದ್ರೆ ಹೇಗೆ ಸ್ವಾಮಿ, ಓಟ್ನಾಗೆ ನನಗೆ ಮೋದಿ ದುಡ್ಡು ಬರೋಂಗೆ ಮಾಡಿ ಎಂದು ಅಹವಾಲು ಸಲ್ಲಿಸಿದರು.
ಸಭೆಯಲ್ಲಿ ರೈತನ ಅಹವಾಲು ಅಲಿಸಿದ ಶಾಸಕ ಡಾ.ರಂಗನಾಥ್‌, ಕೃಷಿ ಇಲಾಖಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ರೈತರಿಗೆ ಪಿಎಂ ಕಿಸಾನ್‌ ಯೋಜನೆಯ ಅರಿವು ಮೂಡಿಸಿ ಅವರಿಂದ ದಾಖಲೆ ಪಡೆದು ಯೋಜನೆ ಸವಲತ್ತು ತಲುಪಿಸಬೇಕಾದ್ದು ಅಧಿಕಾರಿಗಳ ಕೆಲಸ, ರೈತನಿಗೆ ಯೋಜನೆ ಸವಲತ್ತು ಸಿಕ್ಕಿಲ್ಲ ಎಂದರೆ ನಿವೇನು ಮಾಡುತ್ತಿದ್ದಾರಾ, ಅವರ ದಾಖಲೆ ಸಂಗ್ರಹಿಸಿ ಇನ್ನೆರಡು ದಿನದೊಳಗೆ ಅತನ ಸಮಸ್ಯೆ ಬಗೆಹರಿಸಿ ಆತನ ಮನೆಬಾಗಿಲಿಗೆ ತೆರಳಿ ಅಲ್ಲಿಯ ಸವಲತ್ತು ವಿತರಿಸಿ ನನಗೆ ವಿವರ ಕಳಿಸಬೇಕು ಎಂದು ತಾಕೀತು ಮಾಡಿದರು. ಕೃಷಿ ಇಲಾಖಾಧಿಖಾರಿ ತಾಂತ್ರಿಕ ಸಮಸ್ಯೆ ವಿವರಣೆ ನೀಡಲು ಮುಂದಾದರು, ಇದಕ್ಕೆ ಆಕ್ಷೇಪಿಸಿದ ಶಾಸಕರು ತಾಂತ್ರಿಕ ಸಮಸ್ಯೆ ಈಗ, ಆದರೆ ಹಿಂದೆಯೂ ಬಂದಿಲ್ಲ ಎನ್ನುತ್ತಾರೆ, ಸರ್ಕಾರದ ಸವಲತ್ತು ಜನತೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

Get real time updates directly on you device, subscribe now.

Comments are closed.

error: Content is protected !!