ಏನು ಗೊತ್ತಿಲ್ಲದ ಜಿಲ್ಲೆಗೆ ಹೋಗಲು ಇಷ್ಟವಿಲ್ಲ

ಉಸ್ತುವಾರಿ ತಪ್ಪಿದ್ದರ ಹಿಂದೆ ಯಾವ ಪಿತೂರಿಯೂ ಇಲ್ಲ: ಮಾಧುಸ್ವಾಮಿ

258

Get real time updates directly on you device, subscribe now.

ತುಮಕೂರು: ಜಿಲ್ಲಾ ಉಸ್ತುವಾರಿಗೆ ಕೋಕ್‌ ಕೊಟ್ಟಿರುವುದಕ್ಕೆ ಸಚಿವ ಮಾಧುಸ್ವಾಮಿ ಬೇಸರ ಹೊರ ಹಾಕಿದ್ದಾರೆ, ತುಮಕೂರು ಜಿಲ್ಲೆ ಉಸ್ತುವಾರಿ ಬದಲಾವಣೆ ಮಾಡಿರುವುದು ಕೊಂಚ ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಚಿ.ನಾ.ಹಳ್ಳಿ ತಾಲ್ಲೂಕು ಜೆ.ಸಿ.ಪುರದಲ್ಲಿದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧುಸ್ವಾಮಿ, ನನಗೆ ಯಾವ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಕೊಟ್ಟಿಲ್ಲ ಅಂತಾ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುವುದು ಸಮಂಜಸವಲ್ಲ, ತವರು ಜಿಲ್ಲೆಯಲ್ಲಿ ಯಾರಿಗು ಉಸ್ತುವಾರಿ ಕೊಡದಿರುವ ಬಗ್ಗೆ ಪಕ್ಷ ಮೊದಲೆ ತೀರ್ಮಾನ ತೆಗೆದುಕೊಂಡಿತ್ತು, ಮುಖ್ಯಮಂತ್ರಿಗಳು ಇದರ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ರು, ಯಾವ ಜಿಲ್ಲೆಗೆ ಉಸ್ತುವಾರಿ ವಹಿಸಿಕೊಳ್ತಿರಾ ಎಂದು ಕೇಳಿದ್ರೂ, ಜಿಲ್ಲೆಯ ಪೂರ್ವಾಪರ ಗೊತ್ತಿಲ್ಲದೇ ಬೇರೆ ಜಿಲ್ಲೆಗೆ ಹೋಗಿ ಕೆಲಸ ಮಾಡಲು ನಂಗೆ ಇಷ್ಟವಿಲ್ಲ ಅಂತಾ ತಿಳಿಸಿದ್ದೆ ಎಂದು ಹೇಳಿದರು.
ಇದರ ಹಿಂದೆ ಯಾವುದೇ ರಾಜಕಾರಣವಿಲ್ಲ, ನನಗೆ ಮಾತ್ರವಲ್ಲ ನನಗಿಂತ ಹಿರಿಯರಾದ ಈಶ್ವರಪ್ಪ ಸೇರಿದಂತೆ ಎಲ್ಲರಿಗೂ ಈ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೆ, ಏನು ಗೊತ್ತಿಲ್ಲದ ಜಿಲ್ಲೆಗೆ ಹೋಗಿ ಅಂಕಿ ಅಂಶ ರಿವ್ಯೂ ಮಾಡುತ್ತ ಕೂರಲು ನನಗೆ ಇಷ್ಟವಿಲ್ಲ, ಆ ಜಿಲ್ಲೆಯ ಅಭಿವೃದ್ಧಿ ಮತ್ತು ವಾಸ್ತವತೆ ಗೊತ್ತಿಲ್ಲದೆ ಬರೀ ರಿವ್ಯೂ ಮಾಡುತ್ತಾ ಕೂರಲು ಇಷ್ಟವಿಲ್ಲ, ಹಾಗಾಗಿ ನಾನು ಬೇರೆ ಜಿಲ್ಲೆಗೆ ಹೋಗಲು ನಿರಾಕರಿಸಿದೆ ಎಂದರು.
ತುಮಕೂರು ಜಿಲ್ಲೆಯ ಆಳ ಅಗಲ ಗೊತ್ತಿರೋದ್ರಿಂದ ನಾನು ಇಲ್ಲಿ ಕೆಲಸ ಮಾಡಿ ಒಳ್ಳೆಯ ಹೆಸರು ತಗೊಬಹುದಿತ್ತು, ಬೇರೆ ಜಿಲ್ಲೆಗೆ ಹೋಗಿ ಕೆಟ್ಟ ಹೆಸರು ತೆಗೆದುಕೊಳ್ಳಲು ಇಷ್ಟವಿಲ್ಲ, ಮುಖ್ಯಮಂತ್ರಿಗಳಿಗೂ ನನಗೂ ತುಂಬಾ ವಿಶ್ವಾಸವಿದೆ, ಪಾಪ ಅವರು ಮೂರ್ನಾಲ್ಕು ಬಾರಿ ಫೋನ್‌ ಮಾಡಿ ನನಗೆ ಒಪ್ಪಿಸಲು ಟ್ರೈ ಮಾಡಿದ್ರೂ ನಾನು ಒಪ್ಕೊಂಡಿಲ್ಲ, ನಾನು ಮತ್ತು ಆರ್‌.ಅಶೋಕ್‌ ಕೂಡ ಇದಕ್ಕೆ ಒಪ್ಪಿಲ್ಲ, ಅವರು ನನ್ನ ಅಭಿಪ್ರಾಯ ಹೇಳಿದ್ರೂ, ಇದರಲ್ಲಿ ಯಾವುದೇ ರೀತಿಯ ಪಿತೂರಿ ಇಲ್ಲ ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!