ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ: ನಾಹಿದಾ

187

Get real time updates directly on you device, subscribe now.

ಕೊರಟಗೆರೆ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಇರುವ ದೇಶ ನನ್ನ ಭಾರತ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾರತ ದೇಶಕ್ಕೆ ನೀಡಿದಂತಹ ಸಂವಿಧಾನವು ವಿಶ್ವಕ್ಕೆ ಮಾದರಿಆಗಿದೆ, ದೇಶದ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತನಿಗೆ ನಾವೆಲ್ಲರೂ ಗೌರವಿಸೋಣ ಎಂದು ತಹಶೀಲ್ದಾರ್‌ ನಾಹಿದಾ ಜಮ್‌ಜಮ್‌ ತಿಳಿಸಿದರು.
ಕೊರಟಗೆರೆ ಪಟ್ಟಣದ ಪದವಿ ಪೂರ್ವಕಾಲೇಜು ಮೈದಾನದಲ್ಲಿ ಕೊರಟಗೆರೆ ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಸಂವಿಧಾನ ರಚನೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಪರಿಶ್ರಮ ಸಾಕಷ್ಟಿದೆ. ಭಾರತ ದೇಶದ ಸಮಗ್ರತೆ ಮತ್ತು ಅಖಂಡತೆಗೆ ನಮ್ಮೆಲ್ಲರ ಕೊಡುಗೆ ಅಗತ್ಯ, ಕೊರೊನಾ ಹಿನ್ನಲೆಯಲ್ಲಿ ದೈಹಿಕ ಅಂತರದಿಂದ ಜೀವನ ಮಾಡಬೇಕಾದ ಅನಿವಾರ್ಯತೆ ಇದೆ, ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೆ ಬದುಕನ್ನು ರೂಪಿಸಿಕೊಳ್ಳುವ ಹಕ್ಕಿದೆ ಎಂದು ತಿಳಿಸಿದರು.
ಕೊರಟಗೆರೆ ಪಪಂ ಅಧ್ಯಕ್ಷೆ ಕಾವ್ಯರಮೇಶ್‌ ಮಾತನಾಡಿ ಪ್ರಜೆಗಳು ಆಯ್ಕೆ ಮಾಡುವ ಶಾಸಕಾಂಗ, ನ್ಯಾಯ ನೀಡುವ ನ್ಯಾಯಾಂಗ, ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗದ ಕಾರ್ಯಗಳ ಅವಿಭಾಜ್ಯ ಅಂಗವೇ ನಮ್ಮ ಭಾರತ ದೇಶದ ಸಂವಿಧಾನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾರತ ದೇಶಕ್ಕೆ ನೀಡಿದಂತಹ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಕೊರಟಗೆರೆ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್‌.ನಟರಾಜ್‌ ಮಾತನಾಡಿ ಭಾರತ ದೇಶಕ್ಕೆ ಸಂವಿಧಾನ ನೀಡಿದಂತಹ ಡಾ.ಬಿ.ಆರ್‌.ಅಂಬೇಡ್ಕರ್‌ ನೆನೆಯುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯ, ಸ್ವಾತಂತ್ರ, ಸಮಾನತೆ, ಏಕತೆ, ಸಹೋದರತ್ವ ಇರುವ ಭಾರತದ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದ ಮೌಲ್ಯ ಮತ್ತು ತತ್ವಗಳ ಪಾಲನೆಯ ಜೊತೆ ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತನಿಗೆ ಗೌರವ ನೀಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಓ ದೊಡ್ಡಸಿದ್ದಪ್ಪ, ಸಿಪಿಐ ಸಿದ್ದರಾಮೇಶ್ವರ, ಬಿಇಓ ಸುಧಾಕರ್‌, ಪಪಂ ಸದಸ್ಯರಾದ ಓಬಳರಾಜು, ಬಲರಾಮಯ್ಯ, ಪುಟ್ಟನರಸಪ್ಪ, ಪ್ರದೀಪಕುಮಾರ್‌, ನಾರಾಯಣ್, ನಾಗರಾಜು, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್‌, ಸಿಡಿಪಿಓ ಅಂಬಿಕಾ, ಕೃಷಿ ಇಲಾಖೆ ನಾಗರಾಜು, ಸರಕಾರಿ ನೌಕರ ಸಂಘದ ಅಧ್ಯಕ್ಷ ರುದ್ರೇಶ್‌, ಅಕ್ಷರ ದಾಸೋಹದ ರಘು ಇತರರು ಇದ್ದರು.

ಗಣರಾಜ್ಯೋತ್ಸವ ಉದ್ಘಾಟನೆಗೆ ಅಡ್ಡಿ!
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಹೆಸರನ್ನು ಹೇಳಲಿಲ್ಲ ಎಂದು ಆರೋಪಿಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೇಸ್‌ ಮುಖಂಡ ಚಿಕ್ಕರಂಗಯ್ಯ ಅಡ್ಡಿಪಡಿಸಿ ಬಟ್ಟೆ ಬಿಚ್ಚಲು ಮುಂದಾಗಿದ್ದ ಘಟನೆ ನಡೆದಿದೆ. ತಹಶೀಲ್ದಾರ್‌ ನಾಹೀದಾಗೆ ಕಾರ್ಯಕ್ರಮ ನಿಲ್ಲಿಸಲು ಸೂಚಿಸಿದ ಚಿಕ್ಕರಂಗಯ್ಯ ನಂತರ ಸಿಪಿಐ ಸಿದ್ದರಾಮೇಶ್ವರಗೆ ಸುಮ್ಮನಿರಲು ಎಚ್ಚರಿಕೆ ಹಾಗೂ ಬಿಇಓ ಸುಧಾಕರ್ ಗೆ ವೇದಿಕೆಯಿಂದ ಕೆಳಗೆ ಇಳಿಯುವಂತೆ ಪಟ್ಟು ಹಿಡಿದ ಘಟನೆಯ ನಂತರವು ಗಲಾಟೆ ತಡೆಯಲು ಮುಂದಾದ ಕಂದಾಯ ನಿರೀಕ್ಷಕ ಪ್ರತಾಪ್ ಗೆ ಎಳೆದು ನೂಕಾಡಿದ ಘಟನೆಯು ನಡೆದಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ನೋಡಿಕೊಂಡು ಮೌನಕ್ಕೆ ಶರಣಾದ ಪೊಲೀಸ್‌ ಮತ್ತು ಕಂದಾಯ ಇಲಾಖೆಯ ಅಧಿಕಾರಿ ವರ್ಗದ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!