ಮಾಧುಸ್ವಾಮಿಗೆ ಜಿಲ್ಲಾ ಉಸ್ತುವಾರಿ ನೀಡಲಿ: ಮಸಾಲೆ ಜಯರಾಂ

299

Get real time updates directly on you device, subscribe now.

ಗುಬ್ಬಿ: ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ನೀರಾವರಿಯ ಹರಿಕಾರರಾಗಿ ಕೆಲಸ ಮಾಡಿರುವ ಮಾಧುಸ್ವಾಮಿ ಅವರನ್ನೇ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲಾ ಜಯರಾಮ್‌ ತಿಳಿಸಿದರು
ಗುಬ್ಬಿ ತಾಲೂಕಿನ ತುರುವೇಕೆರೆ ಕ್ಷೇತ್ರ ವ್ಯಾಪ್ತಿಯ ಕೊಡಗೀಹಳ್ಳಿ ಜಿಲ್ಲೆಯ ಬೆಳ್ಳಹಳ್ಳಿ ಬೋರಪ್ಪನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಮಾಧುಸ್ವಾಮಿ ಅವರನ್ನು ಬದಲಾವಣೆ ಮಾಡಿರುವುದನ್ನು ನಾನು ವಿರೋಧಿಸುತ್ತೇನೆ, ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯ ಮಾಡುತ್ತೇವೆ, ಮುಖ್ಯಮಂತ್ರಿಗಳು ಹಾಗೂ ಹೇಮಾವತಿ ವಿಚಾರದಲ್ಲಿ ಪ್ರತಿಯೊಂದು ವಿಚಾರವನ್ನೂ ವಾಸ್ತವವಾಗಿ ತೆಗೆದುಕೊಂಡಿರುವಂತಹ ಮಾಧುಸ್ವಾಮಿ ಅವರೇ ಈ ಜಿಲ್ಲೆಗೆ ಮುಂದುವರಿದಾಗ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ, ವಿರೋಧ ಪಕ್ಷದ ನಾಯಕರೇ ಮಾಧುಸ್ವಾಮಿ ಅವರನ್ನು ಮೆಚ್ಚಿಕೊಂಡಿದ್ದಾರೆ, ಸರ್ಕಾರಕ್ಕೆ ಮಾಧುಸ್ವಾಮಿ ಬರಬೇಕು, ನಮ್ಮ ಜಿಲ್ಲೆಗೆ ಬೇಡ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದ ಅವರು ವಿಧಾನಸಭೆಯ ಪ್ರತಿಯೊಂದು ಪ್ರಶ್ನೆ ಕಲಾಪಗಳಲ್ಲಿ ವಿರೋಧ ಪಕ್ಷದವರಿಗೆ ಚಾಟಿಯೇಟು ಕೊಡುವಂತಹ ಸಚಿವರು ಮಾಧುಸ್ವಾಮಿ ಅವರು ನಮ್ಮ ಜಿಲ್ಲೆಗೆ ಸಿಕ್ಕಿರುವುದೇ ನಮ್ಮ ಪುಣ್ಯ, ಇಂತಹ ಸಂದರ್ಭದಲ್ಲಿ ಅವರನ್ನೇ ಉಸ್ತುವಾರಿಯಾಗಿ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್‌ ಪಕ್ಷದಿಂದಲೇ ನಮ್ಮ ಪಕ್ಷಕ್ಕೆ ಸುಮಾರು 25 ಶಾಸಕರು ಬರುತ್ತಿದ್ದಾರೆ, ಮಧ್ಯಪ್ರದೇಶದ ಚುನಾವಣೆ ಮುಗಿದ ನಂತರ ಮಾಜಿ ಶಾಸಕರು ಹಾಲಿ ಶಾಸಕರು ನಮ್ಮ ಪಕ್ಷಕ್ಕೆ ವಲಸೆ ಬರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಭಾನುಪ್ರಕಾಶ್, ವಿಎಸ್ಸೆಸ್ಸೆನ್‌ ಅಧ್ಯಕ್ಷ ಮಹೇಶ್‌, ಗ್ರಾಪಂ ಅಧ್ಯಕ್ಷರಾದ ಲೋಕೇಶ್‌, ಕೆಂಪರಾಜು, ಉಪಾಧ್ಯಕ್ಷೆ ಮಂಜುಳಾ , ಎಪಿಎಂಸಿ ಉಪಾಧ್ಯಕ್ಷ ತಿಮ್ಮರಾಜು, ಮುಖಂಡರಾದ ವಸಂತಕುಮಾರ್‌, ಕೊಂಡಜ್ಜಿ ವಿಶ್ವನಾಥ್‌ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!