ತುಮಕೂರು: ನಮ್ಮ ದೇಶದ ಅಭ್ಯುದಯಕ್ಕೆ, ಸರ್ವ ಜನಾಂಗದ ಏಳಿಗೆಗೆ ಅಪೂರ್ವ ಭಾರತದ ಭವ್ಯ ಭವಿಷ್ಯಕ್ಕೆ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ನಮ್ಮಲ್ಲಿ ಚಿರಸ್ಥಾಯಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ನಡೆಯುವ ಗಣರಾಜ್ಯೋತ್ಸವ ಮಹನೀಯರ ಕೊಡುಗೆಗಳನ್ನು ಪ್ರತಿದಿನವೂ ಸ್ಮರಿಸುವ ಹಬ್ಬವಾಗಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯ ಆವರಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ನಮ್ಮನ್ನು ಇದುವರೆಗೂ ನಡೆಸಿಕೊಂಡು ಬಂದಿದ್ದು ಭವ್ಯ ಭಾರತದ ಭವಿಷ್ಯವೂ ಸಂವಿಧಾನದಿಂದ ಸದೃಢವಾಗಿದೆ, ಅದನ್ನ ಗೌರವಯುತವಾಗಿ ಪಾಲಿಸುವುದೇ ನಿಜವಾದ ಆಚರಣೆಯ ಅರ್ಥ ಎಂದರು.
ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ.ಶಾಲಿನಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಕರುಡು ಸಮಿತಿಯ ಪ್ರತಿಯೊಬ್ಬ ಮಹನೀಯರ ಶ್ರಮದಿಂದ ನಾವು ಪ್ರಪಂಚದಲ್ಲೇ ಉತ್ಕೃಷ್ಟವಾದ ಸಂವಿಧಾನ ಹೊಂದಿದ್ದೇವೆ, ಅವರ ಸೇವೆ ತ್ಯಾಗ ಅವರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಯುವ ಜನತೆ ಸಾಗಬೇಕು, ಸಂವಿಧಾನ ಗೌರವಿಸುವುದು ನಮ್ಮ ಪವಿತ್ರ ಕರ್ತವ್ಯವಾಗಬೇಕು ಎಂದರು.
ಆರೋಗ್ಯ ಸೇವೆಯ ಮೂಲಕ ಹೆಜ್ಜೆ ಗುರುತುಗಳನ್ನು ಸ್ಥಾಪಿಸಿ ಮುನ್ನುಗ್ಗುತ್ತಿರುವ ನಮ್ಮ ಸಿದ್ಧಗಂಗಾ ಆಸ್ಪತ್ರೆ ಗ್ರಾಮೀಣ ಭಾಗದ ಜನರಿಗೆ ಸೂಪರ್ ಸ್ಪೆಷಾಲಿಟಿ ಸೇವೆಯ ಜೊತೆಗೆ ಕಿಡ್ನಿ ಮರುಜೋಡಣೆಯಂತಹ ದಾಖಲಾರ್ಹ ಸಾಧನೆ ಮಾಡಿ ಮುಂದಿನ ದಿನಗಳಲ್ಲಿ ಕಾರ್ಡಿಯೋಥೋರಾಸಿಕ್ ಸರ್ಜರಿ ಪ್ರಾರಂಭ ಮಾಡುತ್ತಿದೆ. ಇದೆಲ್ಲದಕ್ಕೂ ಮೇಲ್ಪಂಕ್ತಿಯಂತೆ ಶಿವಕುಮಾರ ಶ್ರೀಗಳ ಆಶೀರ್ವಾದದ ಫಲದಿಂದ ಮುಂದೆ ಮೆಡಿಕಲ್ ಕಾಲೇಜಿನ ದಾಖಲಾತಿಯೂ ಆರಂಭವಾಗಲಿದೆ ಎಂದರು.
ಇತ್ತೀಚಿಗಷ್ಟೇ ಆಸ್ಪತ್ರೆಯಲ್ಲಿ ಯಶಸ್ವಿ ಕಿಡ್ನಿ ಮರುಜೋಡಣೆಗೆ ಒಳಗಾಗಿದ್ದ ಪ್ರಕಾಶ್ ಗೆ ಆಸ್ಪತ್ರೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್, ಮೆಡಿಕಲ್ ಕಾಲೇಜಿನ ಮೇಲ್ವಿಚಾರಕರಾದ ಡಾ.ನಿರಂಜನ್, ಡಾ.ಗಣೇಶ್, ಡಾ.ಚಂದ್ರಶೇಖರ್ ಹಾಗೂ ಸಿದ್ಧಗಂಗಾ ಆಸ್ಪತ್ರೆ ಸಿಬ್ಬಂದಿ ಇದ್ದರು.
ಮಹನೀಯರ ಕೊಡುಗೆ ಪ್ರತಿನಿತ್ಯ ಸ್ಮರಿಸಬೇಕು: ಡಾ.ಪರಮೇಶ್
Get real time updates directly on you device, subscribe now.
Prev Post
Comments are closed.