ಮುಂಜಾನೆ ಶ್ರಮಿಕರು ಪತ್ರಿಕಾ ವಿತರಕರು: ಟಿ.ಎನ್.ಮಧುಕರ್

133

Get real time updates directly on you device, subscribe now.

ತುಮಕೂರು: ಪ್ರತಿ ದಿನ ಪತ್ರಿಕೆ ಸರಿಯಾದ ಸಮಯಕ್ಕೆ ಬರದಿದ್ದರೆ ಚಡಪಡಿಸುವ ಓದುಗರಿಗೆ ವಿತರಕರ ಕಷ್ಟದ ಬಗ್ಗೆ ಚಿಂತಿಸಲು ಸಮಯವಿರುವುದಿಲ್ಲ. ಮಳೆ, ಗಾಳಿ ಹಾಗೂ ಬಿಸಿಲಿನ ಮಧ್ಯೆಯೂ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ವಿತರಕರು ಅನುಭವಿಸುವ ಕಷ್ಟ ಹೇಳತೀರದು ಎಂದು ಪ್ರಜಾಪ್ರಗತಿ ಉಪ ಸಂಪಾದಕ ಟಿ.ಎನ್.ಮಧುಕರ್ ತಿಳಿಸಿದರು.
ನಗರದಲ್ಲಿ ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಹಾಗೂ ಪತ್ರಿಕಾ ವಿತರಕರಿಗೆ ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆಯಾಗಲು ನೋಂದಣಿ ಪ್ರಕ್ರಿಯೆಗೆ ಚಾಲನೆ ಹಾಗೂ ನಗರದ ಮಹಿಳಾ ಪತ್ರಿಕಾ ವಿತರಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಧುನಿಕ ಆವಿಷ್ಕಾರದ ಪರಿಣಾಮ ದಿನ ಪತ್ರಿಕೆಗಳು ರೂಪಾಂತರಗೊಳ್ಳುತ್ತಿದ್ದರೂ ಜನರ ಮನೆಬಾಗಿಲಿಗೆ ತಲುಪಿಸುವ ವಿತರಕರು ಮಾತ್ರ ಇಂದಿಗೂ ಪತ್ರಿಕೆಗಳ ಬೆನ್ನೆಲುಬಾಗಿಯೇ ಇದ್ದಾರೆ.
ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುವ ಪತ್ರಿಕಾ ವಿತರಕರ ಶ್ರಮದ ಕಾರ್ಯ ಶ್ಲಾಘನೀಯ ಎಂದು ವಿಶಾಲ ಪ್ರಭ ಪತ್ರಿಕೆ ಸಂಪಾದಕ ಹಾಗೂ ಪಾವಗಡ ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್ ತಿಳಿಸಿದರು.
ಸ್ಪರ್ಧಾಗೈಡ್ ಸಂಪಾದಕ ಲಿಂಗದಹಳ್ಳಿ ಚೇತನ್ ಕುಮಾರ್ ಮಾತನಾಡಿ, ಪತ್ರಿಕೆ ಹಂಚಿಕೆದಾರರು ಕಷ್ಟದಲ್ಲೇ ಬದುಕು ನಡೆಸುತ್ತಿದ್ದಾರೆ, ಹಂಚಿಕೆದಾರರ ಸಂಘ ಸ್ಥಾಪನೆ ಮಾಡಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಪತ್ರಿಕಾ ವಿತರಕರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಸಿಗುವ ಸೌಲಭ್ಯಗಳನ್ನು ಕೊಡಿಸಬೇಕು. ಸರ್ಕಾರ ವಿತರಕರ ರಕ್ಷಣೆಗೆ ಬರಬೇಕು ಎಂದು ಆಗ್ರಹಿಸಿದರು.
ದಿನಪತ್ರಿಕೆ ಹಂಚಿಕೆದಾರರ ಸಂಘದ ಟಿ.ಎಲ್.ನರಸಿಂಹಯ್ಯ, ಬಿ.ಆರ್.ಚೆಲುವರಾಜು, ರಂಗಮುತ್ತಯ್ಯ, ವಾಸುದೇವ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!