ಕುಣಿಗಲ್: ರಾಯಚೂರು ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ ಹಕ್ಕುಗಳ ಸಮಿತಿ, ಶೋಷಿತ ಸಮುದಾಯಗಳ ವೇದಿಕೆ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ನ್ಯಾಯಾಧೀಶರ ಮೇಲೆ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಸಭೆ ನಡೆಸಿದ ಪ್ರತಿಭಟನಾಕಾರರು ನ್ಯಾಯಧೀಶರ ನಡೆಯನ್ನು ತೀವ್ರವಾಗಿ ಖಂಡಿಸಿದರು. ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ರಾಜುವೆಂಕಟಪ್ಪ ಮಾತನಾಡಿ, ನ್ಯಾಯಾಧೀಶರಾದವರು ಈ ರೀತಿ ನಡೆದುಕೊಂಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ, ಸಂವಿಧಾನ ರಚನೆಯಲ್ಲಿ ಬಹುವಾಗಿ ಶ್ರಮಿಸಿ ಸಂವಿಧಾನಶಿಲ್ಪಿ ಎಂದೆ ಕರೆಯಲಾಗುವ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ, ಅಂಗೀಕಾರವಾದ ದಿನವಾದ ಗಣರಾಜ್ಯೋತ್ಸವ ಆಚರಣೆಯಲ್ಲಿ ಅವರ ಭಾವಚಿತ್ರ ತೆಗೆದು ಅವರಿಗೆ ಅವಮಾನ ಮಾಡಲಾಗಿದೆ, ಕಾನೂನು ಬಲ್ಲವರಿಂದಲೆ ಇಂತಹ ಕೃತ್ಯ ನಿಜಕ್ಕೂ ನಾಚಿಗೇಡು, ಅವರನ್ನು ದೇಶದ್ರೋಹದ ಅಡಿಯಲ್ಲಿ ಬಂಧಿಸಬೇಕೆಂದರು.
ವೇದಿಕೆಯ ಅಧ್ಯಕ್ಷ ಶಿವರಾಜು ಮಾತನಾಡಿ, ಸಂವಿಧಾನದ ಆಶೋತ್ತರಗಳನ್ನು ಕಾಪಾಡಬೇಕಾದ ನ್ಯಾಯಧೀಶರಿಂದಲೆ ಇಂತಹ ಕಾನೂನು ಬಾಹಿರ ಕೃತ್ಯವಾಗಿರುವುದು ಅಕ್ಷ್ಮಮ್ಯ ಅಪರಾಧವಾಗಿರುತ್ತದೆ, ಅಂಬೇಡ್ಕರ್ ರವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಸಾಂವಿಧಾನಿಕ ಹುದ್ದೆ ಹೊಂದಿರುವ ನ್ಯಾಯಾಧೀಶರು ಇಂತಹ ತಾರತಮ್ಯ ಧೋರಣೆ ನಿಜಕ್ಕೂ ಸಮಾಜಕ್ಕೆ ಕೆಟ್ಟ ಸಂದೇಶ ಸಾರುವಂತಾಗಿರುವುದರಿಂದ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದರು.
ಪ್ರಮುಖರಾದ ಚಂದ್ರಶೇಖರ್, ಗೋಪಾಲ್, ಗೌರಮ್ಮ ಮಾತನಾಡಿದರು, ಮುಖಂಡರಾದ ಪ್ರಶಾಂತಕುಮಾರ್, ತಿಮ್ಮಪ್ಪ, ಶಿವಣ್ಣ, ಜಯಣ್ಣ ಇತರರು ಇದ್ದರು. ಗ್ರೇಡ್-2 ತಹಶೀಲ್ದಾರ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನ್ಯಾಯಾಧೀಶರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
Get real time updates directly on you device, subscribe now.
Prev Post
Next Post
Comments are closed.