ಭಾರತದಲ್ಲಿ 240 ಹೊಸ ಕೊರೋನಾ ಕೇಸುಗಳು ಪತ್ತೆ, ಉ.ಪ್ರದಲ್ಲಿ ವ್ಯಕ್ತಿ ಸಾವು, ಸಾವಿನ ಸಂಖ್ಯೆ 55ಕ್ಕೆ ಏರಿಕೆ

186

Get real time updates directly on you device, subscribe now.

ನವದೆಹಲಿ: ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಭಾರತದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಕಳೆದ 12 ಗಂಟೆಗಳಲ್ಲಿ 240 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇದೀಗ ಬಂದ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ಓರ್ವ ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆ ಮೃತಪಟ್ಟ 25 ವರ್ಷದ ಯುವಕ ಕೊರೋನಾ ವೈರಸ್ ನಿಂದ ಎಂದು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 55ಕ್ಕೇರಿದೆ.

ಭಾರತದಲ್ಲಿ ಇದುವರೆಗೆ 1700ಕ್ಕೂ ಅಧಿಕ ಕೊರೋನಾ ಸೋಂಕಿತ ಕೇಸುಗಳು ವರದಿಯಾಗಿದ್ದು, ಮಧ್ಯ ಪ್ರದೇಶ, ತಮಿಳುನಾಡು, ಪಾಂಡಿಚೆರಿ ಮತ್ತು ತೆಲಂಗಾಣಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಆಂಧ್ರ ಪ್ರದೇಶದಲ್ಲು 43, ಮಂದಿ ಕಳೆದೆರಡು ದಿನಗಳಲ್ಲಿ ಸೋಂಕಿತರಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ದೇಶದ 16 ಸ್ಥಳಗಳನ್ನು ಕೊರೋನಾ ಹಾಟ್ ಸ್ಪಾಟ್ ಎಂದು ಗುರುತಿಸಿದೆ. ಅವುಗಳಲ್ಲಿ ದಿಲ್ಶಾದ್ ಗಾರ್ಡನ್ ಮತ್ತು ದೆಹಲಿಯ ನಿಜಾಮುದ್ದೀನ್, ಪಠಣಮ್ ಥಿಟ್ಟಾ ಮತ್ತು ಕೇರಳದ ಕಾಸರಗೋಡು, ಉತ್ತರ ಪ್ರದೇಶದ ನೊಯ್ಡಾ, ಮೀರತ್, ರಾಜಸ್ತಾನದ ಬಿಲ್ವಾರಾ, ಜೈಪುರ್, ಮಹಾರಾಷ್ಟ್ರದ ಮುಂಬೈ, ಪುಣೆ, ಗುಜರಾತ್ ನ ಅಹಮದಾಬಾದ್, ಮಧ್ಯ ಪ್ರದೇಶದ ಇಂದೋರ್, ಪಂಜಾಬ್ ನ ನವಂಶಾರ್, ಕರ್ನಾಟಕದ ಬೆಂಗಳೂರು, ತಮಿಳು ನಾಡಿನ ಇರೋಡ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿವೆ.

Get real time updates directly on you device, subscribe now.

Comments are closed.

error: Content is protected !!