ಅಂಬೇಡ್ಕರ್ ಗೆ ಅವಮಾನ- ನ್ಯಾಯಾಧೀಶರ ಗಡಿಪಾರು ಮಾಡಿ

345

Get real time updates directly on you device, subscribe now.

ಮಧುಗಿರಿ: ದೇಶದ 73ನೇ ಗಣರಾಜ್ಯೋತ್ಸವ ದಿನದಂದೇ ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವಾಗ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋ ತೆಗೆಸಿ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರವರ ವರ್ತನೆ ವಿರೋಧಿಸಿ ಕರುನಾಡು ವಿಜಯ ಸೇನೆ ಸಂಘಟನೆ ಉಪ ವಿಭಾಗ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗ ಅಧಿಕಾರಿ ಸೋಮಪ್ಪ ಕಡಕೋಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿಕೊಂಡ ದಿನದಂದೇ ಗಣರಾಜ್ಯೋತ್ಸವ ಧ್ವಜಾರೋಹಣದಲ್ಲಿ ಗಾಂಧೀಜಿಯವರ ಫೋಟೋ ಜೊತೆ ಇರಿಸಲಾಗಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ತೆಗೆಸಿ ಸಂವಿಧಾನಕ್ಕೆ ಅಪಮಾನ ಮಾಡಿರುವುದನ್ನು ನೋಡಿದರೆ ಮಲ್ಲಿಕಾರ್ಜುನ ಗೌಡ ನ್ಯಾಯಾಧೀಶರ ಹ್ದುೆಯಲ್ಲಿರಲು ನಾಲಾಯಕ್‌ ಎನ್ನುವುದು ಗೊತ್ತಾಗುತ್ತದೆ, ಕೂಡಲೆ ಇವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಉಪವಿಭಾಗ ಕಚೇರಿಗೆ ಆಗಮಿಸಿದ ಕರುನಾಡು ವಿಜಯ ಸೇನೆ ಸಂಘಟನೆ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌರ ವಿರುದ್ಧ ಧಿಕ್ಕಾರ ಕೂಗಿದರು.
ನಗರ ಅಧ್ಯಕ್ಷ ರಾಜು ಮಾತನಾಡಿ, ಸಂವಿಧಾನ ಬದ್ಧವಾಗಿ ನ್ಯಾಯಾಧೀಶರ ಹ್ದುೆಗೆ ನೇಮಕಗೊಂಡಿರುವ ಮಲ್ಲಿಕಾರ್ಜುನ ಗೌಡ ಡಾ.ಬಿ.ಆರ್‌.ಅಂಬೇರ್ಡ್ಕ ಭಾವಚಿತ್ರವನ್ನು ತೆಗೆಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿರುವುದನ್ನು ಸಹಿಸಲು ಆಗುವುದಿಲ್ಲ, ಹಾಗಾಗಿ ಇವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಗೌರವಾಧ್ಯಕ್ಷ ಲತಾ ನಾರಾಯಣ್‌, ಮಹಿಳಾ ಘಟಕ ಅಧ್ಯಕ್ಷೆ ಲತಾ ಗೋವಿಂದರಾಜು, ರಾಘವೇಂದ್ರ, ಬಾಬು, ರಾಜು, ಅಶೋಕ್‌, ವೆಂಕಟೇಶ್‌, ಸುಜಾತ, ಸವಿತಾ, ಕಾಂಚನ, ಭವ್ಯ, ರಾಮು, ದಾದಾಪೀರ್‌ ಇನ್ನು ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!