ತುಮಕೂರು: ಇಲ್ಲಿನ ಮಹಾನಗರ ಪಾಲಿಕೆಯ 5ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪಾಂಡುರಂಗ ನಗರದ ಮಸೀದಿ ರಸ್ತೆಯಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅನುದಾನದಿಂದ 25 ಲಕ್ಷ ರೂ. ಮಂಜೂರು ಮಾಡಿದ್ದು, ಈ ಹಣದಲ್ಲಿ ಪಾಂಡುರಂಗ ನಗರದ ಮಸೀದಿ ರಸ್ತೆ ಅಭಿವೃದ್ಧಿ ಪಡಿಸುವ ಮೂಲಕ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪಾಂಡುರಂಗ ನಗರದ ತುಮಕೂರಿನ ಹಳೇ ವೃತ್ತ, ಈ ಭಾಗದಲ್ಲಿ ರಸ್ತೆಗಳು ಕಿಷ್ಕಿಂದೆಯಿಂದ ಕೂಡಿವೆ, ಹೀಗಾಗಿ ಕುಡಿಯುವ ಸರಬರಾಜು ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳಿಗೆ ತೊಂದರೆಯಾಗುತ್ತಿದೆ, ಇದನ್ನು ಮನಗಂಡು ಈ ಭಾಗವನ್ನು ಧೂಳಿನಿಂದ ಮುಕ್ತ ಮಾಡಲು ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರಿಟ್ ರಸ್ತೆ ಗುಣಮಟ್ಟದಿಂದ ಕೂಡಿರಲಿದ್ದು, ಒಂದು ವೇಳೆ ಗುಣಮಟ್ಟ ಕಡಿಮೆ ಇದೆ ಎಂದು ತಿಳಿದ ಕೂಡಲೇ ಸಾರ್ವಜನಿಕರೆ ಈ ಬಗ್ಗೆ ಪ್ರಶ್ನಿಸಿ ತಮಗೂ ಮಾಹಿತಿ ನೀಡಬಹುದು ಎಂದರು.
ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಈಗಾಗಲೇ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ, ನಗರದಾದ್ಯಂತ ಶೇ.50 ರಿಂದ 60 ರಷ್ಟು ರಸ್ತೆಗಳ ನವೀಕರಣ ಕಾರ್ಯವೂ ನಡೆದಿದೆ ಎಂದರು.
ತುಮಕೂರು ಅಭಿವೃದ್ಧಿ ಪಥದತ್ತ ಸಾಗಲು ಪ್ರಧಾನಿ ನರೇಂದ್ರ ಮೋದಿಯವರ ಸ್ಮಾರ್ಟ್‌ಸಿಟಿ ಯೋಜನೆಯೇ ಕಾರಣ, ಹೀಗಾಗಿ ನಗರದಲ್ಲಿ ಈ ಯೋಜನೆಯಡಿ ಶೇ.50 ರಿಂದ 60 ರಸ್ತೆಗಳಿಗೆ ಮುಕ್ತಿ ದೊರೆತಿದೆ ಎಂದು ತಿಳಿಸಿದರು.
5ನೇ ವಾರ್ಡ್ ಪಾಲಿಕೆ ಸದಸ್ಯ ಮಹೇಶ್ ಮಾತನಾಡಿ, ನಮ್ಮ 5ನೇ ವಾರ್ಡ್ ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ಸಹಕಾರ ನೀಡುತ್ತಿರುವುದು ಸಂತೋಷ ತಂದಿದೆ, ಹಾಗೆಯೇ 25 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಸಹ ಈ ಭಾಗದ ಜನರ ಓಡಾಟಕ್ಕೆ ತುಂಬಾ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮಣ್, ವೆಂಕಟೇಶ್, ವಿಶ್ವನಾಥ್ ಮತ್ತಿತರರು ಇದ್ದರು.
ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
Get real time updates directly on you device, subscribe now.
Prev Post
Next Post
Comments are closed.