ವಿದ್ಯಾರ್ಥಿಗಳು ರಂಗಭೂಮಿಯತ್ತ ಆಸಕ್ತಿ ಹೊಂದಲಿ

236

Get real time updates directly on you device, subscribe now.

ಕುಣಿಗಲ್: ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ರಂಗಭೂಮಿ, ಕಲಾ ಚಟುವಟಿಗೆಕಳ ಬಗ್ಗೆ ಹೆಚ್ಚು ಗಮನ ಹರಿಸಿ ತೊಡಗಿಕೊಂಡಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಶಾಸಕ ಡಾ.ರಂಗನಾಥ ಹೇಳಿದರು.

ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಶಿವಮೊಗ್ಗ ರಂಗಾಯಣ ಸಂಸ್ಥೆ ಏರ್ಪಡಿಸಿದ್ದ ಕಾಲೇಜು ನಾಟಕೋತ್ಸವ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಸ್ನೇಹಕಲಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ದೈನಂದಿನ ವ್ಯಾಸಂಗದ ಜೊತೆಯಲ್ಲಿ ರಂಗಭೂಮಿ, ನಾಟಕ ಸೇರಿದಂತೆ ಕಲಾರಂಗದಲ್ಲೂ ತೊಡಗಿಕೊಂಡು ಉತ್ತಮ ಸಾಧನೆ ಮಾಡಿರುವುದು ಸಂತಸದ ಸಂಗತಿಯಾಗಿದೆ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹಲವು ರೀತಿಯ ಪ್ರತಿಭೆಗಳಿದ್ದು ವ್ಯಕ್ತಪಡಿಸುವ ಅವಕಾಶ ಸಿಕ್ಕಾಗ ಇಂತಹ ಫಲಿತಾಂಶ ಹೊರಬರುತ್ತವೆ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ತುಮಕೂರಿನ ಜೆನ್ ನಾಟಕ ಮಂಡಳಿಯ ಸ್ಥಾಪಕರು, ಪತ್ರಕರ್ತ ಉಗಮ ಶ್ರೀನಿವಾಸ್, ಕುಣಿಗಲ್ ತಾಲೂಕಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಒಡಲಾಳ ನಾಟಕದ ಅದ್ಭುತ ಪ್ರದರ್ಶನ ನೀಡಿದ್ದು ಜಿಲ್ಲಾ ಮಟ್ಟದಲ್ಲಿ ಸದ್ದು ಮಾಡಿದ್ದಲ್ಲೆ ರಾಜ್ಯ ಮಟ್ಟದಲ್ಲೂ ಸದ್ದು ಮಾಡಲಿದ್ದಾರೆ. ಒಡಲಾಳ ನಾಟಕ ಶೋಷಿತರು ನಗುವಿನ ನಾಟಕ, ಗ್ರಾಮಾಂತರ ಪ್ರತಿಭೆಗಳಿಗೆ ಉತ್ತಮ ತರಬೇತಿ ನೀಡಿ ವೇದಿಕೆ ಕಲ್ಪಿಸಿದಲ್ಲಿ ಎಂತಹ ಮಟ್ಟದ ಸಾಧನೆ ಮಾಡುತ್ತಾರೆಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ, ಇವರಿಂದ ಮತ್ತಷ್ಟು ಉತ್ತಮ ಪ್ರಗತಿ ನಿರೀಕ್ಷಿಸಬಹುದು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಕಪಿನಿಪಾಳ್ಯರಮೇಶ್ ಮಾತನಾಡಿ, ಹಲವು ದಶಕದ ಹಿಂದೆ ಒಡಿಬಡಿ ಸಂಸ್ಕೃತಿಯಿಂದ ಕೂಡಿದ್ದ ಕಾಲೇಜಿನಲ್ಲಿ ಇಂದು ಶೈಕ್ಷಣಿಕ, ಸಾಂಸ್ಕೃತಿಕ, ರಂಗಭೂಮಿ ಕಲಾ ಚಟುವಟಿಕೆಯ ಸಂಸ್ಕೃತಿಯ ಉತ್ತಮ ಪ್ರಗತಿಯಾಗಿರುವುದು ಶ್ಲಾಘನೀಯ, ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲೂ ಯಶಸ್ವಿಯಾಗಲೆಂದು ಹಾರೈಸಿದರು.
ಸ್ನೇಹ ಕಲಾಪ್ರತಿಷ್ಠಾನದ ಅಧ್ಯಕ್ಷ ದಿನೇಶ್ಕುಮಾರ್ ಮಾತನಾಡಿ, ಕುಣಿಗಲ್ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸಂಸ್ಕೃತಿ, ರಂಗಭೂಮಿ, ಕಲಾ ಚಟುವಟಿಕೆಯ ಪ್ರತಿಭೆಗಳಿದ್ದು ಅವರಿಗೆ ಸೂಕ್ತ ತರಬೇತಿ, ಅವಕಾಶ ನೀಡಿದರೆ ಉತ್ತಮ ಖ್ಯಾತಿ ಗಳಿಸುವುದರಲ್ಲಿ ಅನುಮಾನ ಇಲ್ಲ ಎಂದರು.
ಕಾಲೇಜು ಪ್ರಾಚಾರ್ಯ ಡಾ.ನಿಂಗಯ್ಯ ಮಾತನಾಡಿದರು. ಉಪನ್ಯಾಸಕಾರದ ಕೆ.ವಿ.ರಮೇಶ್, ಗೋವಿಂದರಾಯ, ಡಿ.ಕೃಷ್ಣಪ್ಪ, ಪ್ರತಿಷ್ಠಾನದ ತಾರಾನಾಥ, ಶ್ರೀಧರ, ಸ್ನೇಕ್ ಮಹಾಂತೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!