ತಿಪಟೂರು: ತಾಲ್ಲೂಕಿನ ಕೆರೆಗೊಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಕೆರಗೊಡಿ ಶಂಕರೇಶ್ವರಸ್ವಾಮಿ ಹಿಂಭಾಗದ ಕೆರೆಯ ಪೊದೆಯಲ್ಲಿ ಬೋನ್ ಇಡಲಾಗಿತ್ತು. ಒಳಗಡೆ ನಾಯಿ ಕಟ್ಟಲಾಗಿತ್ತು. ಆಹಾರ ಅರಸಿ ಬಂದ ಚಿರತೆ ನಾಯಿ ತಿನ್ನಲು ಹೋಗಿ ಬೋನಿನಲ್ಲಿ ಸೆರೆಯಾಗಿದೆ.
ಚಿರತೆಯೊಂದು ನಾಲ್ಕೈದು ದಿನಗಳಿಂದ ಕೆರಗೊಡಿ ರಂಗಾಪುರ, ಅನಗೊಂಡನಹಳ್ಳಿ, ಬಸವನಪುರ, ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಸುಮಾರು 5 ವರ್ಷ ಪ್ರಯಾದ ಗಂಡು ಚಿರತೆ ಸೆರೆಯಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಸ್ಥಳಕ್ಕೆ ತಿಪಟೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಕೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ್ ಭೇಟಿ ನೀಡಿದರು.
ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಜನರು ತಂಡೋಪತಂಡವಾಗಿ ಬಂದು ವೀಕ್ಷಿಸಿದರು.
Comments are closed.