ನಾಗರಿಕರು ಸಕಾಲಕ್ಕೆ ತೆರಿಗೆ ಪಾವತಿಸಲಿ: ಡಾ.ರಂಗನಾಥ್

220

Get real time updates directly on you device, subscribe now.

ಕುಣಿಗಲ್‌: ನಾಗರಿಕರು ಪುರಸಭೆಗೆ ಕಾಲಕಾಲಕ್ಕೆ ಪಾವತಿಸಬೇಕಾದ ತೆರಿಗೆಗಳನ್ನು ಸಕಾಲದೊಳಗೆ ಪಾವತಿಸುವ ಮೂಲಕ ಪುರಸಭೆ ಉತ್ತಮ ಸೇವೆ ನೀಡಲು ಸಹಕಾರ ನೀಡಬೇಕೆಂದು ಶಾಸಕ ಡಾ.ರಂಗನಾಥ ಹೇಳಿದರು.

ಸೋಮವಾರ ಪುರಸಭೆ 14, 15ನೇ ವಾರ್‌್ ನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಪಟ್ಟಣದ ನಾಗರಿಕರು ಗುಣಮಟ್ಟದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ, ಇನ್ನು ಎರಡು ತಿಂಗಳೊಳಗೆ ಅಗತ್ಯ, ನುರಿತ ಸಿಬ್ಬಂದಿಯನ್ನು ನೀರು ಶುದ್ಧೀಕರಣ ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ನಿಯೋಜಿಸಿ ಕುಡಿಯಲು ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು, ನಿರಂತರ ನೀರು ಸರಬರಾಜು ಮಾಡಲು ಎರಡು ಹೊಸ ಮೋಟಾರ್‌ ಅಳವಡಿಸಲು ಸಿದ್ಧತೆ ಮಾಡಲಾಗಿದೆ, ಪಟ್ಟಣದ ವ್ಯಾಪ್ತಿಯಲ್ಲಿ ಬಹುತೇಕ ಮಳಿಗೆ ಮಾಲೀಕರು ಟ್ರೇಡ್‌ ಲೈಸನ್ಸ್ ಮಾಡಿಸಿಲ್ಲ, ಕೂಡಲೆ ಟ್ರೇಡ್‌ ಲೈಸನ್ಸ್ ಮಾಡಿಸುವ ಮೂಲಕ ಪುರಸಭೆ ಆದಾಯ ವೃದ್ಧಿಗೆ ಸಹಕಾರ ನೀಡಬೇಕು.
ಇ- ಆಸ್ತಿ ನಿರ್ವಹಣೆ ನಿಟ್ಟಿನಲ್ಲಿ ಗ್ರಾಮ ಠಾಣ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೆ ಎಲ್ಲಾ ಇ- ಖಾತೆ ನೀಡಲು ಸೂಚಿಸಲಾಗಿದೆ, ಗ್ರಾಮ ಠಾಣಾ ಹೊರಗೆ ಇರುವ ಪ್ರದೇಶಕ್ಕೆ ಇ- ಖಾತೆ ನೀಡುವ ನಿಟ್ಟಿನಲ್ಲಿ ತೊಡಕು ಬಗೆಹರಿಸಲು ಸರ್ಕಾರದ ಮೇಲೆ ಸತತ ಒತ್ತಡ ಹಾಕುತ್ತಿದ್ದು, ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವ ಕಾರಣ ಏನು ಮಾಡಲಾಗುತ್ತಿಲ್ಲ, ಸ್ವಚ್ಛತೆ ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ, ಹೊಸ ಬಡಾವಣೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಸುಮಾರು ಮೂರುವರೆ ಸಾವಿರ ಆಸ್ತಿಗೆ ಇ-ಖಾತೆ ಕೊಡುಬಹುದಾಗಿದೆ, ಇದನ್ನು ಹಂತ ಹಂತವಾಗಿ ನೀಡಿ, ಬಾಕಿ ಇರುವ ಆಸ್ತಿಗೆ ಇರುವ ತೊಡಕು ಬಗೆಹರಿಸಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯ ನಾಗಣ್ಣ ಮಾತನಾಡಿ, ಸಂತೇ ಮೈದಾನ, ಕೋಟೆ ಮುಖ್ಯರಸ್ತೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿದ್ದು ಪುರಸಭಾಧ್ಯಕ್ಷರು ಮೌನಕ್ಕೆ ಶರಣಾದರು, ಶುದ್ಧ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಸದಸ್ಯರಿಗೆ ಸ್ಪಂದಿಸುತ್ತಿಲ್ಲ, ಗಮನ ಹರಿಸಬೇಕೆಂದು ಶಾಸಕರಿಗೆ ಆಗ್ರಹಿಸಿದರು. ಪುರಸಭೆ ಸದಸ್ಯರಾದ ಉದಯ, ಗೋಪಿ, ಸಮಿವುಲ್ಲಾ, ಶ್ರೀನಿವಾಸ ಮಾಜಿ ಸದಸ್ಯ ಸತೀಶ, ಮುಖ್ಯಾಧಿಕಾರಿ ರವಿಕುಮಾರ್‌ ಮತ್ತು ಸಿಬ್ಬಂದಿ ಹಾಜರಿದ್ದು ಎರಡೂ ವಾರ್ಡ್‌ನಿಂದ ಸೇರಿ 25ಕ್ಕು ಹೆಚ್ಚು ಇ-ಖಾತೆ ವಿತರಿಸಿದರು. 30 ಕ್ಕೂ ಹೆಚ್ಚು ಉದ್ದಿಮೆ ಪರವಾನಗಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!