ಬರಗೂರು: ರೈತರು ತಮ್ಮ ಕೃಷಿ ಚಟುವಟಿಕೆಗಳ ಉತ್ಪನ್ನ ಹಾಗೂ ಬೇಸಾಯದ ಜೊತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಾಗ ತಮ್ಮ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ವ್ಯವಸ್ಥೆ ಸದೃಡವಾಗಿಸಿಕೊಳ್ಳಲುಬಹುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.
ಶಿರಾ ತಾಲೂಕು ಬರಗೂರಿನಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈಧ್ಯ ಸೇವಾ ಇಲಾಖೆ ಯಿಂದ ನಡೆದ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ, ಸರ್ಕಾರ ಉತ್ತೇಜನ ನೀಡುತ್ತಿದ್ದು, ಹಾಲು ಒಕ್ಕೂಟಗಳ ಸಹಾಯಕ ಸಂಘಗಳ ಮೂಲಕ ರೈತರಿಗೆ ಪ್ರೋತ್ಸಾಹದ ನಿಟ್ಟಿನಲ್ಲಿ ಹೈನುಗಾರಿಕೆಗೆ ನೀಡಿದೆ, ಉತ್ತಮ ಗುಣಮಟ್ಟದ ಹಾಲು ನೀಡುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಬರುವ ಹಾಲಿನಿಂದ ರೈತರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸದೃಡರಾಗಬೇಕು, ಸರ್ಕಾರ ಹಾಲು ಓಕ್ಕೂಟಗಳಿಂದ ರೈತರಿಗೆ ಮತ್ತು ಅವರ ಮಕ್ಕಳಿಗೆ ಸೌಲಭ್ಯ ನೀಡುವ ಯೋಜನೆಗಳನ್ನು ಸಹ ಜಾರಿ ಮಾಡಿದೆ ಎಂದರು.
ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಸಿ.ಎಸ್.ರಮೇಶ್ ಮಾತನಾಡಿ ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ತಾಲೂಕಿನಲ್ಲಿ 16 ಇದ್ದು 14 ಕಾರ್ಯಕ್ರವಾಗಿದ್ದು 2 ಮಾತ್ರ ಬಾಕಿಯಿದ್ದು ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಇದ್ದು ಇಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ಚಂದ್ರಪ್ಪ, ಅಂಬಕ್ಕ, ಭೂತರಾಜು, ರಾಜು, ಲಕ್ಷ್ಮಮ್ಮ, ಬಿಆರ್‌ಟಿ ಗೌಡ, ತಿಮ್ಮರಾಜು, ಲಕ್ಷ್ಮಮ್ಮ, ರಮೇಶ್ ಬಾಬು, ಯೋಗೇಶ್ ಉತ್ತಮ ಮಿಶ್ರ ತಳಿ ಹೆಣ್ಣು ಕರುಗಳ ಮಾಲೀಕರಿಗೆ ಪ್ರಥಮ, ದ್ವೀತಿಯ ಬಹುಮಾನ ನೀಡಲಾಯಿತು
ಬರಗೂರು ಗ್ರಾಪಂ ಅಧ್ಯಕ್ಷ ಟಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಯಶೋಧ ದೇವರಾಜು, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಸಿ.ಎಸ್.ರಮೇಶ್, ಬರಗೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಂದೀಶ್, ಡಾ.ನಾಗೇಶ್, ಡಾ.ದಿನೇಶ್, ಡಾ.ತಿಮ್ಮಣ್ಣ, ಡಾ.ಭೂತೇಶ್, ಡಾ.ಮಂಜುನಾಥ್, ಡಾ.ದೇವರಾಜು, ಡಾ.ರಮೇಶ್, ಡಾ.ಮಹಾಲಿಂಗೇಶ್ವರ, ಮಾಜಿ ಅಧ್ಯಕ್ಷ ಜಯರಾಮಯ್ಯು, ಮುಖಂಡ ಪ್ರಕಾಶ್ ಗೌಡ, ಗ್ರಾಪಂ ಸದಸ್ಯೆ ಗಂಗಮ್ಮ ಸಿದ್ದಯ್ಯ, ಮಂಜುನಾಥ್, ರಂಗಾಪುರ ಮಂಜುನಾಥ್, ರಾಘವೇಂದ್ರ ಹಾರೋಗೆರೆ ಶೃತಿರಾಜು, ಜಯಣ್ಣ, ಗ್ರಾಪಂ ಸದಸ್ಯರು ಮುಖಂಡರು ಇದ್ದರು.
ರೈತರು ಹೈನುಗಾರಿಕೆಯಲ್ಲಿ ತೊಡಗಲಿ: ರಾಜೇಶ್‌ಗೌಡ
Get real time updates directly on you device, subscribe now.
Next Post
Comments are closed.