ಮಾಧುಸ್ವಾಮಿಯನ್ನೇ ಉಸ್ತುವಾರಿ ಮಾಡಿ: ಮಸಾಲೆ ಜಯರಾಂ

146

Get real time updates directly on you device, subscribe now.

ತುರುವೇಕೆರೆ: ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರನ್ನು 15 ದಿನಗಳ ಒಳಗಾಗಿ ಮತ್ತೆ ನೇಮಕ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಳ್ಳಬೇಕೆಂದು ಶಾಸಕ ಮಸಾಲ ಜಯರಾಮ್‌ ಒತ್ತಾಯಿಸಿದ್ದಾರೆ.

ತಾಲೂಕಿನ ಕಡೇಹಳ್ಳಿಯ ಬೆಟ್ಟದ ರಂಗನಾಥ ಸ್ವಾಮಿ ದೇಗುಲಕ್ಕೆ ಸುಮಾರು 45 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಚಿವರಾದ ಮಾಧುಸ್ವಾಮಿಯವರು ಭೌಗೋಳಿಕವಾಗಿ ಜಿಲ್ಲೆಯನ್ನು ಬಲ್ಲವರಾಗಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ತುಮಕೂರು ಜಿಲ್ಲೆಗೆ ಮಾಧುಸ್ವಾಮಿಯವರಂಥ ಉಸ್ತುವಾರಿ ಸಚಿವರ ಅಗತ್ಯವಿದೆ. ಜೆಸಿಎಂ ಸರಕಾರದ ತೀರ್ಮಾನಗಳನ್ನು ಸಮರ್ಥಿಸಿಕೊಳ್ಳುವ ದಕ್ಷತೆ ಇರುವ ಮಂತ್ರಿ ಎನಿಸಿದ್ದಾರೆ, ಮುಂಬರುವ ದಿನಗಳ ರಾಜಕೀಯ ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷಿಯಿಂದ ಮಾಧುಸ್ವಾಮಿಯವರನ್ನು ತುಮಕೂರು ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸುವ ಅಗತ್ಯವಿದೆ ಎಂದರು.
ಮಾಧುಸ್ವಾಮಿಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರಿಂದ ನಮ್ಮ ಕ್ಷೇತ್ರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಹೇಮಾವತಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಯಿತು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಮಾಧುಸ್ವಾಮಿಯವರು ನೆನೆಗುದಿಗೆ ಬಿದ್ದಿದ್ದ ಅನೇಕ ಕಾಮಗಾರಿ ಚುರುಕುಗೊಳಿಸಿದ್ದರು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸರ್ಕಾಕ್ಕೆ ಒಳ್ಳೆಯ ಹೆಸರು ತರಲು ಜೆಸಿಎಂ ಅವರೇ ಉಸ್ತವಾರಿಯಾಗಬೇಕಿದೆ, ನಮ್ಮ ಜಿಲ್ಲೆಯಲ್ಲಿ ವಿರೋಧ ಪಕ್ಷದವರೂ ಸಹ ಜೆಸಿಎಂ ಅವರೇ ಉಸ್ತುವಾರಿ ಸಚಿವರಾಗಲಿ ಎಂದು ಹೇಳಿಕೆ ನೀಡುತ್ತಿದ್ದಾರೆ, ಸರಕಾರ 15 ದಿನಗಳೊಳಗಾಗಿ ಜೆಸಿಎಂ ಅವರನ್ನು ತುಮಕೂರು ಉಸ್ತುವಾರಿಯ್ನನಾಗಿ ನೇಮಿಸದಿದ್ದರೆ ಮುಂದಾಗುವ ಅನಿರೀಕ್ಷಿತ ಬೆಳವಣಿಗೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ಕಡೇಹಳ್ಳಿ ಸಿದ್ದೇಗೌಡ, ಎಪಿಎಂಸಿ ಸದಸ್ಯ ಚಂದ್ರಣ್ಣ, ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್‌, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್‌ ಗೌಡ, ಗೋಣಿ ತುಮಕೂರಿನ ಪುಟ್ಟರಂಗೇಗೌಡ, ಗುತ್ತಿಗೆದಾರ ಬಡಗರಹಳ್ಳಿ ತ್ಯಾಗರಾಜ್‌, ಬಿಜೆಪಿ ಮುಖಂಡರಾದ ವಿ.ಬಿ.ಸುರೇಶ್‌, ರಾಮೇಗೌಡ, ಗಣೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!